ಸರ್ಕಾರಿ ನೌಕರರ ಕನಿಷ್ಟ ವೇತನ ಶೇ. 8 ರಷ್ಟು ಏರಿಕೆ…?!

07 Feb 2019 11:49 AM | General
598 Report

ಕೇಂದ್ರ ಸರ್ಕಾರ ಈಗಾಗಲೇ ಬಜೆಟ್ ಮಂಡನೆ ಮಾಡಲಾಗಿದೆ. ಅನೇಕ ವಲಯಗಳಿಗೆ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸಿದೆ. ಈ ನಿಟ್ಟಿನಲ್ಲಿ ನಿರೀಕ್ಷಿತ ವಲಯಗಳು ಲಾಭ ಪಡೆದುಕೊಳ್ಳಲಿವೆ ಎಂಬ ವಿಮರ್ಶೆ ಕೂಡ ಬಂದಾಗಿದೆ. ಸದ್ಯ ಸರ್ಕಾರ 7 ವೇತನ ಆಯೋಗದ ಶಿಫಾರಸ್ಸಿನ ಅನುಗುಣವಾಗಿ ಜಾರಿ ಮಾಡಿದ್ದೇ ಆದಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನ ಏರಿಕೆಯಾಗಲಿದೆ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೇ ಕೇಂದ್ರ ಸರ್ಕಾರ ಸಾಕಷ್ಟು ತಯಾರಿ ನಡೆಸಿದೆ. ಈಗಾಗಲೇ ಮೋದಿ ಸರ್ಕಾರ ರಾಜ್ಯದ ಜನರನ್ನು ಸೆಳೆಯಲು  ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಹಿನ್ನಲೆಯಲ್ಲಿಯೇ ಆರನೇ ವೇತನ ಆಯೋಗವನ್ನು ಕೂಡ ಜಾರಿ ಮಾಡಿದೆ.

ನರೇಂದ್ರ ಮೋದಿ ಸರ್ಕಾರ, ಉದ್ಯೋಗಿಗಳ ಕನಿಷ್ಠ ವೇತನ ಹೆಚ್ಚಳದ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ನ್ಯಾಷನಲ್ ಜಾಯಿಂಟ್ ಕೌನ್ಸಿಲ್ ಆಫ್ ಆಕ್ಷನ್ ಮುಖ್ಯಸ್ಥ ಶಿವ ಗೋಪಾಲ ಹೇಳಿದ್ದಾರೆ. ಈಗಾಗಲೇ ಇದರ ಸಂಬಂಧ ಅನೇಕ ಸಭೆ,ಚರ್ಚೆಗಳು ನಡೆದಿದ್ದೂ ಸರ್ಕಾರ ಈ ಕ್ರಮವನ್ನು ಜಾರಿಗೆ ತರುವ ನಿರೀಕ್ಷೆಯಲ್ಲಿದ್ದಾರೆ ನೌಕರಿದಾರರು. ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಫೆ.1ರಂದು ಮಂಡನೆಯಾದ ಮಧ್ಯಂತರ ಬಜೆಟ್ ನಲ್ಲಿ ಹಣಕಾಸು ಸಚಿವ ಪಿಯೂಷ್ ಗೋಯಲ್, ಎಲ್ಲ ವರ್ಗದ ಜನರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಘೋಷಿಸಿದ್ದರು. ಪ್ರಸ್ತುತ ಕೇಂದ್ರ ನೌಕರರು ರೂ. 18 ಸಾವಿರ ಕನಿಷ್ಠ ವೇತನ ಪಡೆಯುತ್ತಿದ್ದಾರೆ.ಈಗಾಗಲೇ  ರೂ. 8000 ಹೆಚ್ಚಳಕ್ಕೆ ನೌಕರರು ಬೇಡಿಕೆಯಿಟ್ಟಿದ್ದಾರೆ.ಒಂದು ವೇಳೆ  7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೊಂಡರೆ ಕೇಂದ್ರ ನೌಕರರ ಈಗಿನ ಕನಿಷ್ಠ ವೇತನವಾದ ರೂ. 18,000 ದಿಂದ ರೂ. 26,000 ಕ್ಕೆ ಏರಿಕೆಯಾಗಲಿದೆ. ಅಂದಹಾಗೇ ಈಗಾಗಲೇ ಶಿಫಾರಸ್ಸಿನ ಅನುಗುಣವಾಗಿ ಸರ್ಕಾರ ಕನಿಷ್ಟ ವೇತನದಲ್ಲಿ ಬದಲಾವಣೆ ಮಾಡಿ, ಈಗಿರುವ ಸಂಬಳವನ್ನು ಏರಿಕೆ ಮಾಡಿದ್ದೇ ಆದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಈ ವರ್ಷ ಬಂಪರ್ ಆಫರ್ ಸಿಕ್ಕಿದಂತಾಗುತ್ತದೆ.

Edited By

Kavya shree

Reported By

Kavya shree

Comments