ನನ್ನನ್ನು ಕೇಳದೇ ನನಗೆ ಜನ್ಮಕೊಟ್ಟಿದ್ದೇಕೆ..? ಹೆತ್ತವರ ವಿರುದ್ಧ ಮಗ ಮೊಕದ್ದಮೆ..!! ಈ ರೀತಿಯದೊಂದು ವಿಚಿತ್ರ ಕಥೆ ..!!!

06 Feb 2019 3:41 PM | General
312 Report

ಹುಟ್ಟು ಆಕಸ್ಮಿಕ,. ಸಾವು ಖಚಿತ… ಎಂಬ ಮಾತು ಅಕ್ಷರ ಸಹ ಸತ್ಯ… ಹುಟ್ಟು ಯಾರನ್ನು ಕೇಳಲ್ಲ… ಸಾವು ಕೂಡ ಯಾರನ್ನು ಕೇಳಲ್ಲ… ಹೀಗಿರುವಾಗ ನನ್ನನ್ನು ಕೇಳದೇ ನನಗೆ ಜನ್ಮ ಕೊಟ್ಟಿದ್ಯಾಕೆ ಎಂದು ಮಗ ಹೆತ್ತವರ ವಿರುದ್ದ ದೂರನ್ನು ನೀಡಿದ್ದಾನೆ.. ಈ ರೀತಿಯದೊಂದು ಘಟನೆ ನಡೆದಿದೆ.. ಕೇಳಿದ್ರೆ ಇದೆನಪ್ಪಾ ಅನಿಸುತ್ತದೆ.. ಆದರೆ ಇದು ನಿಜ ಇದರ ಇಂಟರೆಸ್ಟಿಂಗ್ ವಿಚಾರ ಹೇಳ್ತೀವಿ ಕೇಳಿ…? ನನ್ನ ಅನುಮತಿಯಿಲ್ಲದೆಯೇ ತನ್ನ ಹುಟ್ಟಿಗೆ ಕಾರಣರಾದ ಅಪ್ಪ-ಮಗನ ವಿರುದ್ಧ ಮೊಕದ್ದಮೆ ಹೂಡಲು ಮುಂಬೈನ ರಫೇಲ್‌ ಸ್ಯಾಮ್ಯುಲ್‌ (27) ಮುಂದಾಗಿದ್ದಾರೆ. ಆತ ಪತ್ರದಲ್ಲಿ ಬರೆದಿರುವುದು ಈ ಕಳಕಂಡಂತೆ ಇದೆ.

ಹೆಸರು: ರಫೇಲ್‌ ಸ್ಯಾಮ್ಯುಲ್‌, ವಯಸ್ಸು: 27 ವರ್ಷ, ವಿಷಯ: ಜೀವಂತ ಮತ್ತು ಅದಕ್ಕಾಗಿ ಪರಿತಪಿಸುತ್ತಿದ್ದೇನೆ. ನಾನು ಹುಟ್ಟುವುದಕ್ಕಾಗಿ ಕೇಳಿಕೊಂಡಿರಲಿಲ್ಲ. ನಾನು, ನೀವೂ ಸಹ ಹುಟ್ಟುವ ಮುನ್ನ ಯೋಜನೆ ರೂಪಿಸಿ ಸಮ್ಮತಿ ನೀಡಿರಲಿಲ್ಲ. ಹುಟ್ಟಿನ ಕುರಿತು ವಿರೋಧ ಧೋರಣೆ (ಆಯಂಟಿನಾಟಲಿಸ್ಟ್‌) ಹೊಂದಿರುವ ಸ್ಯಾಮ್ಯುಲ್‌ ತನ್ನ ತಂದೆ-ತಾಯಿ ವಿರುದ್ಧ ಮೊಕದ್ದಮೆ ಹೂಡಲು ನಿರ್ಧಾರ ಮಾಡಿದ್ದಾರೆ.ಪಾಲಕರ ಸಂತೋಷಕ್ಕಾಗಿ ಮಗುವಿಗೆ ಜನ್ಮ ನೀಡಿ ಜೀವವದ ಭಾಗವಾಗಿಸುವುದಕ್ಕೆ ಸ್ಯಾಮ್ಯುಲ್‌ ವಿರೋಧ ವ್ಯಕ್ತಪಡಿಸಿದ್ದಾರೆ. 'ನನ್ನ ಪಾಲಕರನ್ನು ನಾನು ಪ್ರೀತಿಸುತ್ತೇನೆ. ನಮ್ಮ ನಡುವಿನ ಸಂಬಂಧ ಸೊಗಸಾಗಿದೆ. ಆದರೆ, ಅವರ ಸಂತೋಷಕ್ಕಾಗಿ ನನ್ನನ್ನು ಹೆತ್ತಿದ್ದಾರೆ' ಎಂದು ದಿ ಪ್ರಿಂಟ್‌ಗೆ ಪ್ರತಿಕ್ರಿಯಿಸಿರುವುದಾಗಿ ವರದಿಯಾಗಿದೆ. 'ನನ್ನ ಬದುಕು ಸುಂದರವಾಗಿದೆ. ಆದರೆ, ನಾನೇಕೆ ಮತ್ತೊಂದು ಜೀವವನ್ನು ಶಾಲೆ, ಕೆಲಸ...ಈ ರೀತಿಯ ಬದುಕಿನಲ್ಲಿ ಸಿಲುಕಿಸಲಿ..' ಎಂದೆಲ್ಲ ಹೇಳಿದ್ದಾರೆ..'ಪಾಲಕರೆಲ್ಲರೂ ಕಪಟದಾರಿಗಳು' ಎಂಬ ಸಂದೇಶವನ್ನು ಒಳಗೊಂಡ ಚಿತ್ರವನ್ನು ಪೋಸ್ಟ್ ಕೂಡ ಮಾಡಿದ್ದಾರೆ.. ಈ ರೀತಿಯ ವಿಚಿತ್ರವನ್ನು ಎಲ್ಲಿಯೂ ಕೇಳಿರುವುದಕ್ಕೂ ಕೂಡ ಸಾಧ್ಯವಿಲ್ಲ ಬಿಡಿ.

Edited By

Manjula M

Reported By

Manjula M

Comments