ದಕ್ಷ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಹೈಕೋರ್ಟ್ ನೋಟಿಸ್…!!!

06 Feb 2019 12:35 PM | General
285 Report

ಹಾಸನದ ಡಿಸಿ ರೋಹಿಣಿ ಸಿಂಧೂರಿ ತಮ್ಮ ಹುದ್ದೆಯನ್ನು ಸ್ವೀಕರಿಸಿದ ದಿನದಿಂದಲೂ ಒಂದಿಲ್ಲೊಂದು ವಿವಾದಕ್ಕೆ ಅಥವಾ ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಲೇ ಇದ್ದಾರೆ. ಈ ಹಿಂದೆ ಮಂಡ್ಯದಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ  ಉತ್ತಮ ಆಡಳಿತ ನಡೆಸಿದ ದಕ್ಷ ಡಿಸಿ ಎಂಬ ಹೆಸರು ಪಡೆದಿದ್ದರು. ಆ ನಂತರ ಒಂದಷ್ಟು ದಿನಗಳ ಕಾಲ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಜಿಲ್ಲಾಧಿಕಾರಿ ಹುದ್ದೆಯಿಂದ ಬೇರೆ ಇಲಾಖೆಗೆ ವರ್ಗ ಮಾಡಿದ ಬಳಿಕ ಹಾಸನದ ಜಿಲ್ಲಾಧಿಕಾರಿಯಾಗಿ ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ.

ಸದ್ಯ ಹಾಸನದಲ್ಲಿ ರಸ್ತೆ ವಿಚಾರವಾಗಿ ಕಾನೂನು ಉಲ್ಲಂಘನೆ ಹಿನ್ನಲೆಯಲ್ಲಿ ಹೈಕೋರ್ಟ್ನಿಂದ ನೋಟೀಸ್ ಜಾರಿಯಾಗಿದೆ. ನ್ಯಾಯಾಂಗ  ನಿಂಧನೆ ಅರ್ಜಿ ಸಂಬಂಧ  ನೋಟೀಸ್ ಜಾರಿ ಮಾಡಲಾಗಿದ್ದು, ಕೋರ್ಟ್ ಗೆ ಹಾಜರಾಗುವಂತೆ  ಅರ್ಜಿಯಲ್ಲಿ ತಿಳಿಸಿದೆ. ಹಾಸನದ ಬಿಎಂ ರಸ್ತೆಯಲ್ಲಿದ್ದ  ಕೆಲವು ಕಟ್ಟಡಗಳು ಅನಧಕೃತವೆಂದು ಜಿಲ್ಲಾಧಿಕಾರಿ ಅದನ್ನು ತೆರವುಗೊಳಿಸಿದ್ದರು. ಈ ಕುರಿತು ಸುಧಾ ಹಾಗೂ ಶಶಿಕಾಂತ್ ಎಂಬುವವರು ಹೈ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದಿದ್ದಾರೆ. ಕಾನೂನು ನಿಯಮಗಳನ್ನು ಪಾಲಿಸದೇ ಜಿಲ್ಲಾಧಿಕಾರಿ ತಮಗಿಷ್ಟ ಬಂದಹಾಗೇ ತೆರವುಗೊಳಿಸಿದ್ದಾರೆ ಎಂದು ಡಿಸಿ ವಿರುದ್ಧ ಕಟ್ಟಡದ ಮಾಲೀಕರು  ಕೇಸ್ ದಾಖಲು ಮಾಡಿದ್ದಾರೆ.ಹೀಗಾಗಿ ಕೋರ್ಟು  ಹಾಸನ ಜಿಲ್ಲಾಧಿಕಾರಿ ಮತ್ತು ನಗರಸಭೆ ಆಯುಕ್ತರಿಗೆ ನಿಖರ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಅಂದಹಾಗೇ ಈ ಹಿಂದೆ ರೋಹಿಣಿ ಸಿಂಧೂರಿ ಕಾಂಗ್ರೆಸ್ ಪಕ್ಷದ ಎ. ಮಂಜು ವಿಚಾರವಾಗಿ ಸುದ್ದಿಯಲ್ಲಿದ್ದರು.

Edited By

Kavya shree

Reported By

Kavya shree

Comments