ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ..

06 Feb 2019 10:14 AM | General
201 Report

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್.. ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್ಎಫ್)ಯಲ್ಲಿ ಖಾಲಿ ಇರುವ  1763 ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಹಾಕಬೇಕಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಕೊನೆ ದಿನಾಂಕ 28-2-2019ರೊಳಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಹುದ್ದೆ: ಕಾನ್ಸ್ ಟೇಬಲ್ [1763]

ಸ್ಥಳ: ಭಾರತದಾದ್ಯಂತ

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಮೆಟ್ರಿಕ್ಯುಲೇಷನ್ ಅಥವಾ 10ನೇ ತರಗತಿ ತೇರ್ಗಡೆಯಾಗಿರಬೇಕು.

ಸಂಬಳ: 21,700 ರಿಂದ 69,100 ರೂ. ಪ್ರತಿ ತಿಂಗಳು 

ವಯಸ್ಸು
* ಕನಿಷ್ಠ 18 ವರ್ಷ.
* ಗರಿಷ್ಠ 23 ವರ್ಷ.

ಕೆಲಸ ನೇಮಕಾತಿ ಪ್ರಕ್ರಿಯೆಯ ವಿವರ

* ಲಿಖಿತ ಪರೀಕ್ಷೆ 
* ದೈಹಿಕ ಪರೀಕ್ಷೆ 
* ವೈದ್ಯಕೀಯ ಪರೀಕ್ಷೆ 

ಅಧಿಕೃತವಾಗಿ ಮತ್ತಷ್ಟು ಮಾಹಿತಿಯನ್ನು ತಿಳಿಯಲು ಕಚೇರಿಯ ವೆಬ್ ಸೈಟ್ http://bsf.nic.in/en/recruitment.html ಸಂಪರ್ಕಿಸಿ.. ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಷೇರ್ ಮಾಡಿ.

Edited By

Manjula M

Reported By

Manjula M

Comments