ಮಠದ ವಿದ್ಯಾರ್ಥಿಗಳಿಂದ ಸಾಮೂಹಿಕ ಕೇಶ ಮುಂಡನ...!

05 Feb 2019 12:28 PM | General
225 Report

ಶಿವೈಕ್ಯರಾದ ಶಿವಕುಮಾರ ಸ್ವಾಮೀಜಿಗಳು ಕೆಲವು ದಿನಗಳ ಹಿಂದಷ್ಟೇ ಲಿಂಗೈಕ್ಯರಾಗಿದ್ದಾರೆ. ಸ್ವಾಮೀಜಿಗಳಿಗೆ ನಮನ ಸಲ್ಲಿಸಲು ಸ್ವ ಇಚ್ಛೆಯಿಂದ ಸಾಮೂಹಿಕವಾಗಿ ಕೇಶ ಮುಂಡನ ಮಾಡಿಸಿಕೊಂಡಿದ್ದಾರೆ.ಸವಿತಾ ಸಮಾಜದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಕೇಶಮುಂಡನೆ ಮಾಡಲಾಗುತ್ತಿದೆ. ಸದ್ಯ ಸಾವಿರಾರು ವಿದ್ಯಾರ್ಥಿಗಳು ಸ್ವ ಇಚ್ಛೆಯಿಂದ ಕೇಶ ಮುಂಡನ ಮಾಡಿಸಿಕೊಳ್ಳುವ ಮೂಲಕ ಶಿವಕುಮಾರ ಸ್ವಾಮೀಜಿಗಳಿಗೆ ಭಕ್ತಿ ಸಮರ್ಪಣೆ ಮಾಡಿದ್ದಾರೆ.

ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗಳಿಗೆ ಕೇಶ ಮುಂಡನೆ ಮಾಡಿಸಿಕೊಳ್ಳುವುದರ ಮೂಲಕ ಭಾವಪೂರ್ಣ ನಮನ ಸಲ್ಲಿಸಿದ್ದಾರೆ. ಈ ಹಿಂದೆ ವಿದ್ಯಾರ್ಥಿಗಳ ಕೇಶಮುಂಡನಕ್ಕೆ ಮಾತೆ ಮಹಾದೇವಿ ಅವರು ಭಾರೀ ವಿರೋಧ ವ್ಯಕ್ತಪಡಿಸಿದ್ದರು.ಸಾಮೂಹಿಕ ಕೇಶಮುಂಡನ ಮೂರ್ಖತನ, ಲಿಂಗಾಯಿತ, ವೀರಶೈವ ಸಮಾಜದ ಪದ್ದತಿಯಲ್ಲಿ ಕೇಶಮುಂಡನೆಗೆ ಅವಕಾಶವಿಲ್ಲ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಠದ ಕಿರಿಯ ಶ್ರೀಗಳು ಸಿದ್ದಲಿಂಗಾ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿಯವರನ್ನು ಹಿಂದು, ಮುಸಲ್ಮಾನ್, ಕ್ರಿಶ್ಚಿಯನ್ ಎಲ್ಲರೂ ಪ್ರೀತಿಸುತ್ತಾರೆ. ಅವರು ಧರ್ಮ-ಜಾತಿ ಎನ್ನದೇ ಎಲ್ಲರನ್ನು ಗೌರವದಿಂದ   ಪ್ರತಿ ವರ್ಷದಂತೆ ಈ ವರ್ಷವೂ ಸವಿತಾ ಸಮಾಜದವರು ಮಕ್ಕಳಿಗೆ ಕಟಿಂಗ್ ಮಾಡುತ್ತಾರೆ ಎಂದಿದ್ದರು.

Edited By

Kavya shree

Reported By

Kavya shree

Comments