ಮನಕಲಕುವಂತಿದೆ ಈ ಸ್ಟಾರ್ ನಟನ ಪತ್ನಿಯ ರೋಚಕ ಕಥೆ…!!

04 Feb 2019 5:56 PM | General
1152 Report

ಕೆಲವು ನಟ ನಟಿಯರು  ರಾತ್ರೋ ರಾತ್ರಿ  ಸಿಕ್ಕಾಪಟ್ಟೆ ಫೇಮಸ್ ಆಗಿ ಬಿಡುತ್ತಾರೆ.. ಅದೇ ರೀತಿ ಕೆಲವರು ಒಳ್ಳೆಯ ವಿಚಾರಕ್ಕೆ ಫೇಮಸ್ ಆಗುತ್ತಾರೆ.. ಮತ್ತೆ ಕೆಲವರು ಟ್ರೋಲ್ ಆಗಿ ಬಿಡುತ್ತಾರೆ.. ಅದೇ ರೀತಿ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಪತ್ನಿಯ ಫೋಟೋ ಒಂದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಬೆನ್ನು ಕಾಣಿಸುತ್ತಿರುವ ಪತ್ನಿಯ ಈ ಫೋಟೋ ಕಣ್ಣಲ್ಲಿ ನೀರು ತಂದು ಮನ ಕಲಕುವಂತಿದೆ…  ತಾಹಿರಾ ಹಿಂಭಾಗದ ಫೋಟೋವನ್ನು ಸರಿಯಾಗಿ ನೋಡಿದ್ರೆ ಶಸ್ತ್ರಚಿಕಿತ್ಸೆಯ ಕಲೆಯನ್ನು ನೋಡುಗರು ಕಾಣಬಹುದಾಗಿದೆ..

ಆಯುಷ್ಮಾನ್ ಖುರಾನ್, ತಾಹಿರಾ ಫೋಟೋ ಜೊತೆ ಮನಕಲಕುವ ಶೀರ್ಷಿಕೆಯನ್ನು  ಹಾಕಿದ್ದಾರೆ. ನಿಮ್ಮ ಗುರುತುಗಳು ಸುಂದರವಾಗಿರುತ್ತವೆ. ಕಷ್ಟಸಾಧ್ಯ ರಸ್ತೆಯಲ್ಲೂ ನಿಮ್ಮ ಮಾರ್ಗ ಕಂಡುಕೊಳ್ಳುತ್ತೀರಿ ಎಂಬ ಅರ್ಥದಲ್ಲಿ ಶೀರ್ಷಿಕೆಯನ್ನು ಬರೆದಿದ್ದಾರೆ. ಕ್ಯಾನ್ಸರ್ ನಿಂದ ಖಿನ್ನತೆಗೊಳಗಾಗುವವರಿಗೆ ಆಯುಷ್ಮಾನ್ ಖುರಾನಾ ಹಾಕಿರುವ ಈ ಫೋಟೋ ಹಾಗೂ ಪದ ಸ್ಫೂರ್ತಿ ನೀಡುವಂತಿದೆ. ಆಯುಷ್ಮಾನ್ ಪತ್ನಿಯ ಈ ಫೋಟೋವನ್ನು ಒಂದು ಗಂಟೆಯಲ್ಲಿ 1,770ಕ್ಕೂ ಹೆಚ್ಚು ಮಂದಿ ಹಂಚಿಕೊಂಡಿದ್ದಾರೆ.ತಾಹಿರಾ ಧೈರ್ಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದು, ಆಕೆ ಬೇಗ ಗುಣವಾಗಲಿ ಎಂದು ಎಲ್ಲರೂ ಕೂಡ ಪ್ರಾರ್ಥಿಸುತ್ತಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ತಾಹಿರಾ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಆದ್ರೆ ಈ ಕ್ಯಾನ್ಸರ್ ಗೆ ತಾಹಿರಾ ಎಂದೂ ಹೆದರಿಲ್ಲ. ಮನೆಯಲ್ಲಿ ಕುಳಿತುಕೊಳ್ಳದೆ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ. ಈಕೆಯ ಧೈರ್ಯ ನಿಜಕ್ಕೂ ಬೇರೆಯವರಿಗೆ ಸ್ಪೂರ್ತಿ ನೀಡುವಂತದ್ದು..

Edited By

Manjula M

Reported By

Manjula M

Comments