ಗ್ಯಾಸ್ ಸಬ್ಸಿಡಿ ಹಣ ನಿಮ್ಮ ಕೈಸೇರುತ್ತಿಲ್ಲವೇ, ಹಾಗಿದ್ರೆ ಈ ನಂಬರ್ ‘ಗೆ ಕರೆ ಮಾಡಿ…?!

04 Feb 2019 11:23 AM | General
28877 Report

ಗ್ಯಾಸ್ ತುಂಬಿಸಿಕೊಳ್ಳುವುದು ಎಷ್ಟು ಕಷ್ಟವೋ ಹಾಗೇ ತುಂಬಿಸಿಕೊಂಡ ಸಬ್ಸಿಡಿ ಹಣವನ್ನು ವಾಪಸ್ ಪಡೆಯುವುದು ಅಷ್ಟೇ ಕಷ್ಟ ಎನ್ನುತ್ತಾರೆ ಗ್ರಾಹಕರು. ಸದ್ಯ ನಾವು ಸಿಲಿಂಡರ್ ತುಂಬಿಸಿಕೊಳ್ಳಲು ಪೇ ಮಾಡುವ ಹಣ ವಾಪಸ್ ಪಡೆಯುವುದು ಕಷ್ಟವೇ. ಬಮ್ಮ ಬ್ಯಾಂಕಿನ ಖಾತೆಗೆ ಸರ್ಕಾರದಿಂದ ಸಬ್ಸಿಡಿ ಹಣ ಎಷ್ಟು ಬಂದಿದೆ, ಅಷ್ಟಕ್ಕೂ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ಎಂಬುದೇ ಗೊತ್ತಿರುವುದಿಲ್ಲ. ಸದ್ಯ ಅದಕ್ಕೊಂದು ಸರಳ ಉಪಾಯ ಇಲ್ಲಿದೆ. ಇದನ್ನೆಲ್ಲಾ ಜಸ್ಟ್ ಒಂದೇ ನಂ ನ ಮೂಲಕವೇ ತಿಳಿದುಕೊಳ್ಳಬಹುದು.

 ಹಣ ಖಾತೆಗೆ ಜಮಾ ಆದರು ಕೂಡ ಒಮ್ಮೊಮ್ಮೆ ನಮಗೆ ನಮ್ಮ ಕೈ ಸೇರುವುದಿಲ್ಲ. ನಾವು ಬ್ಯಾಂಕಿನ ಖಾತೆಗೆ  ಸಬ್ಸಿಡಿ ಹಣ  ಪಡೆಯಲೆಂದು ಮೊಬೈಲ್ ಅಲರ್ಟ್ ನ್ನು ಹೊಂದಿದ್ದರೆ ಆ ಖಾತೆಗೆ ಎಸ್ಎಂಎಸ್ ಬಂದು ಬಿಡುತ್ತೆ ಅದೂ ಓಕೆ ಆದರೆ, ಅಕೌಂಟ್ ಗೆ ಬಂದರೂ ಅಪಡೇಟ್ ಆಗಿರಲ್ಲ. ಒಮ್ಮೊಮ್ಮೆ ಕೆಲವರು ಬ್ಯಾಂಕ್ ಅಕೌಂಟ್ ಹೋಲ್ಡ’ರ್ಸ್ ಮೊಬೈಲ್ ಅಲರ್ಟ್ ನನ್ನು ಟೋಲ್ಡ್ ಸರ್ವೀಸ್ ನ್ನು ಮ್ಯಾಂಟೇನ್ ಮಾಡದೇ ಇರುವುದರಿಂದ ಇದು ಅಲರ್ಟ್ನೆಸ್ ಕೊಡದೇ ಅಪಡೇಟ್ ಕೊಡುವುದಿಲ್ಲ. ಇದರಿಂದ ಅವರ ಅಕೌಂಟ್ನಲ್ಲಿ ಹಣ ಜಮಾ ಆಗಿ ಸಡನ್ ಆಗಿ ನಿಂತು ಬಿಡುತ್ತದೆ. ಅದಕ್ಕೆ ಇಲ್ಲಿದೆ ಪರಿಹಾರ… ನಿಮ್ಮ ಮೊಬೈಲ್ ಗೆ ಕೆಲಸ ಕೊಡಿ.  ಮುಖ್ಯವಾಗಿ ನಿಮ್ಮ ಗ್ಯಾಸ್ನ ಸಬ್ಸಿಡಿ ಹಣ ನಿಮ್ಮ ಖಾತೆಗೆ ಬಿದ್ದಿಲ್ಲವೆಂದರೆ, ನೀವು ಬೇರೆ ಬ್ಯಾಂಕ್ ಅಕೌಂಟ್ ನ್ನೆ ತೆಗೆದಿದ್ದೂ, ಅದರ ಜೊತೆಗೆ ಆಧಾರ್ ಲಿಂಕ್ ಮಾಡಿಸಿದ್ರೆ , ನೀವು ಪ್ರತೀ ನಿತ್ಯ ಬಳಸುವ ಅಕೌಂಟ್ ಗೆ ಹಣ ಬೀಳದೇ, ಹೊಸದಾಗಿ ತೆಗೆದ ಅಕೌಂಟ್ಗೆ ಸಬ್ಸ್ಡಿ ಹಣ ಹೋಗಿರುತ್ತದೆ. ಏಕೆಂದರೆ ಹೊಸದಾಗಿ ತೆಗೆದ ಅಕೌಂಟ್ ಗೆ ಆಧಾರ್ ಕೊಟ್ಟಿದ್ದರಿಂದ, ಈ ಸಮಾಚಾರ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಹೋಗುತ್ತದೆ. ಆಟೋಮಿಟಿಕ್ ಆಗಿ ಸಬ್ಸಿಡಿ ಹಣದ  ಖಾತೆ ಬದಲಾಗುತ್ತದೆ. ಇದನ್ನು ಗೊತ್ತಾಗದೇ ನಾವು ಹಳೆಯ ಖಾತೆಯಲ್ಲಿಯೇ ಹುಡುಕಾಡುತ್ತಿರುತ್ತೇವೆ.

ನಿಮ್ಮ ನಿಮ್ಮ ಮೊಬೈಲ್ನ ಮೂಲಕ ತಿಳಿಯಬಹುದು. ಸಬ್ಸಿಡಿ ಹಣ ಬಂದಿದೆಯೋ ಅಂತಾ ಗೊತ್ತಾಗಬೇಕಾದರೆ 999# ಡಯಲ್ ಮಾಡಬೇಕು. ಆಗ ಆಧಾರ್ ನಂ. ಕೇಳುತ್ತದೆ. ಕನ್ಫರ್ಮ್  ಆದರೆ 1 ನ್ನು ಪ್ರೆಸ್ ಮಾಡಬೇಕು. ಯಾವಾಗ ಬ್ಯಾಂಕಿನ ಖಾತೆಗೆ ಲಿಂಕ್ ಮಾಡಲಾಗಿದೆ ಎಂದು ತೋರಿಸುತ್ತದೆ. ಅಷ್ಟೇ ಅಲ್ಲದೇ ನೀವು ಯಾವ  ಸಿಲಿಂಡರ್ ಬಳಸುತ್ತಿದ್ದೀರಾ, ಅದು ಭಾರತ್ , ಹೆಚ್ ಪಿ, ಇಂಡಿಯನ್ ಬಳಸುತ್ತಿದ್ದರೆ, ಈ ಮೂರಕ್ಕೂ ಒಂದೇ ಸಮಸ್ಯೆ ಇದ್ದರೆ ನೀವು ಮಾಡಬೇಕಿದ್ದೂ ಇಷ್ಟೆ. 180023333555 ಟೋಲ್ಡ್ ಫ್ರೀ ನಂ. ಗೆ ಕಾಲ್ ಮಾಡಿ ನಿಮ್ಮ ಸಮಸ್ಯೆ ತಿಳಿಸಬಹುದು. ಕನ್ನಡ ಸೇರಿದಂತೇ ಹಿಂದಿ ಇಂಗ್ಲೀಷ್ ಭಾಷೆಗಳಲ್ಲೂ ಕೂಡ ಮಾತನಾಡಬಹುದು. ನೀವು ಸಬ್ಸಿಡಿ ಹಣ, ಗ್ಯಾಸ್ ನ ತೂಕ, ನಿಗಧಿತ ಸಮಯದಲ್ಲಿ ಡೆಲಿವರಿ ಮಾಡದೇ ಇದ್ದರೂ ನೀವು ತಿಳಿಸಬಹುದು.

Edited By

Manjula M

Reported By

Kavya shree

Comments