ಸಕಾರಿ ನೌಕಕರಿಗೆ ಒಂದು ಕಡೆ ಸಿಹಿ,ಮತ್ತೊಂದು ಕಡೆ ಕಹಿ…?!!!

02 Feb 2019 1:07 PM | General
403 Report

ಆರನೇ ವೇತನ ಆಯೋಗದಂತೇ ರಾಜ್ಯ ಸರ್ಕಾರಿ ನೌಕಕರಿಗೆ ಒಂದು ಕಡೆ ಸಿಹಿ ಸಿಕ್ಕರೆ ಮತ್ತೊಂದು ಕಡೆ ಕಹಿ ಕೂಡ ಸಿಕ್ಕಿದೆ. ಆರನೇ ವೇತನ ಆಯೋಗದ ಬಗ್ಗೆ ನೌಕಕರಿಗೆ ಕೆಲವೊಂದಿಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿತ್ತು. ಎರಡನೇ ವರದಿಯಲ್ಲಿ ರಾಜ್ಯ ನೌಕಕರಿಗೆ ರಜೆಗಳಿಗೆ ಸಂಬಂಧಿಸಿದಂತೆ ಒಂದಷ್ಟು ಶಿಫಾರಸುಗಳನ್ನು ಕೂಡ ಮಾಡಿತ್ತು ಈ ಪೈಕಿ, ಸಾಂರ್ದಭಿಕ ರಜೆ (ಸಿಎಲ್) ಕಡಿತ, ಜಯಂತಿಗಳಿಗೆ ಇರುವ ರಜೆ ರದ್ದು ಸೇರಿ ಕೆಲ ಸಲಹೆಗಳನ್ನು ಆಯೋಗ ಮಾಡಿತ್ತು.

ಆಯೋಗದ ವರದಿಗೆ ಸಂಬಂಧಪಟ್ಟಂತೆ ಕೃಷ್ಣ ಭೈರೇಗೌಡ ನೇತೃತ್ವದ ಉಪಸಮಿತಿ ಕೂಲಂಕುಷವಾಗಿ ಅಧ್ಯಯನ ನಡೆಸಿದೆ.ಸದ್ಯ ವರದಿ ನೀಡಿದ್ದು,  ಆ ವರದಿಯಲ್ಲಿ ಸರ್ಕಾರಿ ನೌಕರರಿಗೆ ಈಗ ಇರುವಂತಹ 15 ಸಿಎಲ್ ಗಳ ಪೈಕಿ ಮೂರು ಕಡಿಮೆ ಮಾಡಿ ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ಸಿಎಲ್​ಗಳಿಗೆ ಕಡಿತ ಮಾಡಲಾಗುವುದು. ಹಬ್ಬ ಹಾಗೂ ವಿವಿಧ ಜಯಂತಿ ಸೇರಿ 23 ರಜೆ ಪೈಕಿ 8 ಜಯಂತಿಗಳನ್ನು ರದ್ದು ಮಾಡುವುದಕ್ಕೆ ಶಿಫಾರಸು ಮಾಡಿದೆ ಎನ್ನಲಾಗಿದೆ. ರಾಜ್ಯ ಸರ್ಕಾರಿ ನೌಕಕರಿಗೆ ಸಿಹಿ-ಕಹಿ ಸುದ್ದಿ: ನಾಲ್ಕನೇ ಶನಿವಾರವೂ ರಜೆ ಸಿಗಲಿದೆ. 8 ಜಯಂತಿ ರಜೆ ರದ್ದು, 12 ಸಿಎಲ್ ಸೀಮಿತವಾಗಿದೆ.ಸದ್ಯದ ಮಾಹಿತಿಗಳ ಪ್ರಕಾರ ವಾಲ್ಮೀಕಿ ಜಯಂತಿ, ಕನಕ ಜಯಂತಿ, ಬಸವ ಜಯಂತಿ, ಮಹಾವೀರ ಜಯಂತಿ, ಮಹಾಲಯ ಅಮಾವಾಸ್ಯೆ, ಈದ್ ಮಿಲಾದ್, ಕಾರ್ವಿುಕ ದಿನ, ಗುಡ್​ಫ್ರೈಡೆಗಳಿಗೆ ನೀಡಲಾಗುವ ರಜೆಯನ್ನು ರದ್ದುಗಳಿಸಬಹುದು ಎನ್ನಲಾಗಿದೆ.

Edited By

Kavya shree

Reported By

Kavya shree

Comments