ಲೋಕಸಭೆ ಚುನಾವಣೆಗೆ ನಿಂತುಕೊಳ್ಳಿ ಎಂದವರಿಗೆ ಸುಮಲತಾ ಹೇಳಿದ್ದೇನು ಗೊತ್ತಾ..?

02 Feb 2019 11:05 AM | General
1996 Report

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೇ ಯಾವ ಯಾವ ಕ್ಷೇತ್ರದಿಂದ ಯಾವ ಯಾವ ಅಭ್ಯರ್ಥಿಗಳು ನಿಲ್ತಾರೆ ಎಂಬುದು ಮಾತ್ರ ಇನ್ನೂ ಖಚಿತವಾಗಿ ನಿರ್ಧಾರವಾಗಿಲ್ಲ. ಅದರಲ್ಲೂ ಮಂಡ್ಯ ಲೋಕ ಸಭೆ ಚುನಾವಣೆ ಟಿಕೆಟ್ ಬಗ್ಗೆ ನಿನ್ನೆ ತನಕವೂ ಸುಮಲತಾ ಹೆಸರು ಕೇಳಿ ಬರುತ್ತಿತ್ತು. ಆದರೆ ಈ ಬಗ್ಗೆ ಸುಮಲತಾ ಅಂಬರೀಶ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ. ಮೊನ್ಮೆ ಮೊನ್ನೆವರೆಗೂ, ಮಂಡ್ಯ ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ, ಅಭಿಷೇಕ್ ಅಂಬರೀಶ್, ಸುಮಲತಾ ಅಂಬರೀಶ್  ಹೆಸರು ಕೇಳಿ ಬರುತ್ತಿತ್ತು. ಅಂಬರೀಶ್ ನಿಧನದ ನಂತರ ಮಂಡ್ಯ ಕಾಂಗ್ರೆಸ್ ನ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿಯಿದೆ.

ರೆಬಲ್ ಸ್ಟಾರ್ ರಿಂದ ತೆರವಾದ ಸ್ಥಾನಕ್ಕೆ ಸುಮಲತಾ ಅಂಬರೀಶ್ ಸ್ಪರ್ಧಿಸುವ ಬಗ್ಗೆ ಒತ್ತಾಯಗಳು ಕೇಳಿಬರುತ್ತಿವೆ.ಈ ಬಗ್ಗೆ ಮಾತನಾಡಿದ ಸುಮಲತಾ ಅವರು 'ಸದ್ಯದ ಪರಿಸ್ಥಿತಿಯಲ್ಲಿ ನಾನು ಏನನ್ನೂ ನಿರ್ಧರಿಸಿಲ್ಲ. ಮಂಡ್ಯದ ಜನತೆ ಒತ್ತಾಯಿಸುತ್ತಿದ್ದಾರೆ. ಆದರೆ ನಾನು ಯಾವುದನ್ನೂ ತೀರ್ಮಾನಿಲ್ಲ. ಅಷ್ಟಕ್ಕೂ ಎಲ್ಲವನ್ನೂ ನಾನೊಬ್ಬಳೇ ತೀರ್ಮಾನಿಸಲು ಸಾಧ್ಯವಿಲ್ಲ. ನನ್ನ ಪತಿ ಅಂಬರೀಶ್ ಹೋದ ಮೇಲೆ ಜನರು ಅಷ್ಟೇ ಪ್ರೀತಿ, ವಿಶ್ವಾಸ ತೋರುತ್ತಿದ್ದಾರೆ. ಅವರ ಅಭಿಮಾನಕ್ಕೆ ನಾನು ಯಾವಾಗಲು  ಚಿರಋಣಿ.  ಅಂಬರೀಶ್ ಹೋದ ಮೇಲೂ ಇಲ್ಲಿನ ಜನ ನಮ್ಮ ಮೇಲೆ ತೋರಿಸುತ್ತಿರುವ ಪ್ರೀತಿಗೆ ನಾವು ಏನು ಕೊಟ್ಟರೂ ಕಡಿಮೆಯೇ' ಎಂದು ಸುಮಲತಾ ಹೇಳಿಕೊಂಡಿದ್ದಾರೆ. 

ಆದರೆ ಚುನಾವಣೆ ಬಗ್ಗೆ ನಾನು ಇನ್ನೂ ಏನು ನಿರ್ಧರಿಸಿಲ್ಲ. ಅಂಬರೀಶ್ ಇರುವವರೆಗೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ನಾವೂ ಕಾಂಗ್ರೆಸ್ ಎಂದೇ ಇದ್ದೇವೆ. ಮುಂದೆ ಪರಿಸ್ಥಿತಿ ನೋಡಿಕೊಂಡು ನಾನು ಚುನಾವಣೆ ಬಗ್ಗೆ ಚಿಂತಿಸುತ್ತೇನೆ. ನನ್ನ ರಾಜಕೀಯದ ಭವಿಷ್ಯದ ಬಗ್ಗೆ ಚಿಂತಿಸಲು ನನ್ನೊಂದಿಗೆ ವರಿಷ್ಠರ ಅಭಿಪ್ರಾಯವು ಮುಖ್ಯ. ಸ್ಪರ್ಧಿಸುವುದಾದರೇ ನಾನು ಮಂಡ್ಯದಿಂದಲೇ ಸ್ಪರ್ಧಿಸುವುದು ಎನ್ನುತ್ತಾರೆ ಸುಮಲತಾ..?

Edited By

Kavya shree

Reported By

Kavya shree

Comments