ಎಚ್ ಎ ಎಲ್ ನಲ್ಲಿ ವಿಮಾನ ದುರಂತ :ಪೈಲೆಟ್ ಸಾವು…!!!

01 Feb 2019 12:29 PM | General
141 Report

ಬೆಂಗಳೂರಿನ ಹೆಚ್ಎಎಲ್ ಏರ್ಪೋಟ್ ನಲ್ಲಿ ದುರಂತವೊಂದು ಸಂಭವಿಸಿದೆ. ಎಚ್ ಎ ಎಲ್ ಬಳಿ ಮಿರಾಜ್ ಯುದ್ಧ ವಿಮಾನವೊಂದು ಆಯತಪ್ಪಿ ಭೂಮಿಗೆ ಅಪ್ಪಳಿಸಿದೆ, ಪರಿಣಾಮ ಯುದ್ಧ ವಿಮಾನದಲ್ಲಿದ್ದ ಪೈಲೆಟ್ ಸಾವನಪ್ಪಿದ ಘಟನೆ ಇಂದು ನಡೆದಿದೆ.  ಮಿರಾಜ್ ಯುದ್ಧ ವಿಮಾನ ಭಾರೀ ಸದ್ದಿನಿಂದ ಸ್ಫೋಟಗೊಂಡ ಪರಿಣಾಮ ಸುತ್ತಲೂ ದಟ್ಟವಾದ ಹೊಗೆ ಆವರಿಸಿದೆ.

ಇದರಿಂದ ಸುಮಾರು ಹೊತ್ತು ಸಾರ್ವಜನಿಕರು ಆತಂಕಕ್ಕೆ  ಒಳಗಾಗಿದ್ದರು.ಯುದ್ಧ ವಿಮಾನ  ಎಚ್ ಎ ಎಲ್’ನಿಂದ ಹೊರ ಭಾಗದಲ್ಲಿ ಮನೆಗಳ ಮೇಲೆ ಪತನವಾಗುವ ಸಾಧ್ಯತೆ ಇತ್ತು. ಪೈಲೆಟ್ ಗಳ ಸಮಯ ಪ್ರಜ್ಙೆಯಿಂದ ಎಚ್ ಎ ಎಲ್  ಕಾಂಪೌಂಡ್ ಒಳಗೆ ಬಿದ್ದಿದೆ ಎನ್ನಲಾಗಿದೆ. ಈ ದುರಂತದಲ್ಲಿ  ಮೃತ ಪೈಲೆಟ್ ನನ್ನು ಸಿದ್ದಾರ್ಥ್ ಎಂದು ಗುರುತಿಸಲಾಗಿದೆ. ವಿಮಾನದಲ್ಲಿ ಇಬ್ಬರು ಪೈಲೆಟ್‌ಗಳು ಇದ್ದರು ಎನ್ನಲಾಗಿದ್ದು, ಬೆಂಕಿಯ ಜ್ವಾಲೆಯಲ್ಲಿ ಓರ್ವ ಪೈಲೆಟ್ ಸಾವನ್ನಪ್ಪಿದ್ದು, ಮತ್ತೋರ್ವ ಪೈಲೆಟ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಬಗ್ಗೆ ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಮತ್ತಷ್ಟು ಮಾಹಿತಿಗಳು ಲಭ್ಯವಾಗಬೇಕಿದೆ.

Edited By

Kavya shree

Reported By

Kavya shree

Comments