ನಿಮ್ಮ ಬಳಿ BPL ಕಾರ್ಡು ಇದ್ಯಾ, ಹಾಗಾದ್ರೆ ಸಿಕ್ತು ಅನ್ಕೊಳ್ಳಿ ಬಂಪರ್ ಆಫರ್...!

01 Feb 2019 11:51 AM | General
3381 Report

ಬಡವರ ಅನುಕೂಲಕ್ಕಾಗಿ ಎಪಿಲ್ ಮತ್ತು ಬಿಪಿಎಲ್ ಕಾರ್ಡುಗಳ ಮೂಲಕ ಸರ್ಕಾರ, ಕಡಿಮೆ ದರದಲ್ಲಿ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಗುತ್ತಿದೆ. ಈಗಾಗಲೇ ಇರುವ ರೇಷನ್ ಕಾರ್ಡುದಾರರಿಗೆ ಸರ್ಕಾರದಿಂದ ಕೇವಲ  ಬೇಳೆ ಮತ್ತು ಅಕ್ಕಿಯನ್ನು ನೀಡಲಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ರೇಷನ್ ಕಾರ್ಡು ಇದ್ದವರಿಗೆ ಒಂದು ಗುಡ್ ನ್ಯೂಸ್ ಸಿಗುತ್ತಿದೆ.

ಉಪ್ಪು ಮತ್ತು ಎಣ್ಣೆಯನ್ನು ಕಡ್ಡಾಯವಾಗಿ ನೀಡಲಾಗುತ್ತದೆ. ಅಷ್ಟೇ ಅಲ್ಲದೇ  ಬಿಪಿಎಲ್ ಕಾರ್ಡು ಹೊಂದಿರುವವರಿಗೆ ಇನ್ನುಮುಂದೆ ಅಕ್ಕಿ ಮತ್ತು ಬೇಳೆ ಜೊತೆ ಟೀ ಮತ್ತು ಕಾಫೀ ಪುಡಿಯನ್ನು ಕಡಿಮೆ ದರದಲ್ಲಿ ವಿತರಿಸ ಬೇಕೆಂದು ಸರ್ಕಾರ ಈಗಾಗಲೇ ಚಿಂತಿಸಲಾಗಿದೆ. ಅದನ್ನು ಜಾರಿಗೆ ತರಲು ನಿರ್ಧಾರ ಮಾಡಿದ್ದಾಗಿ ಎಂದು ಆಹಾರ ಮತ್ತು ನಾಗರೀಕ ಸಚಿವ ಜಮೀರ್  ಅಹಮದ್ ತಿಳಿಸಿದ್ದಾರೆ. ಇದರಿಂದ ಕಡಿಮೆ ದರದಲ್ಲಿ ಆಹಾರ ಸಾಮಾಗ್ರಿಗಳು ಬಡವರ ಕೈಗೆ ಸಿಗುತ್ತವೆ, ಅವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ. ಆದರೆ ಸರ್ಕಾರ ಈ ಯೋಜನೆಯನ್ನು ಎಷ್ಟು ಬೇಗ ಜಾರಿ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇತ್ತೀಚಿಗೆ ಶಿವಕೈರಾದ ತುಮಕೂರಿನ ಸಿದ್ದಗಂಗಾ ಮಠದ ಸ್ವಾಮೀಜಿಗಳಾದ, ಶತಾಯುಷಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರವನ್ನು ರೇಷನ್ ಕಾರ್ಡಿನಲ್ಲಿ  ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ.

Edited By

Kavya shree

Reported By

Kavya shree

Comments