22 ವರ್ಷಗಳ ಹಿಂದೆ ವಧುವರರಾಗಿ ನಟಿಸಿದವರು… ಇದೀಗ ನಿಜ ಜೀವನದಲ್ಲೂ ಸತಿಪತಿ..!!

31 Jan 2019 4:37 PM | General
378 Report

ಮದುವೆ ಅನ್ನೋದು ಎರಡು ಮನಸುಗಳ ಬೆಸುಗೆ… ಯಾರ್ ಹಣೆಲಿ ಯಾರ್ ಹೆಸರು ಬರೆದಿರುತ್ತೊ ಯಾರಿಗ್ ಗೊತ್ತು..?  ಇಪ್ಪತ್ತೆರಡು ವರ್ಷಗಳ ಹಿಂದೆ, 1997ರಲ್ಲಿ ಪ್ರಾಥಮಿಕ ಶಾಲೆಯೊಂದರ ನಾಟಕದಲ್ಲಿನ ವಿವಾಹದ ದೃಶ್ಯದಲ್ಲಿ ಒಬ್ಬ ಪುಟ್ಟ ಬಾಲಕ ಮತ್ತು ಬಾಲಕಿ ವಧೂವರರಾಗಿ ಎಲ್ಲರನ್ನೂ ಕೂಡ ರಂಜಿಸಿದ್ದರು... ಆ ನಾಟಕದ ಹೆಸರು 'ಆಯನ್ ಆರ್ಮಿ ಮ್ಯಾನ್ಸ್ ವೆಡ್ಡಿಂಗ್.'ಅಂತ.. ನಾಟಕದಲ್ಲಿ ಅಭಿನಯಿಸಿದವರು ಇದೀಗ ನಿಜ ಜೀವನದಲ್ಲೂ ಸತಿ ಪತಿಗಳಾಗಿ ಸಪ್ತಪದಿ ತುಳಿದಿದ್ದಾರೆ..ಕೇಳೋದಕ್ಕೆ ಆಶ್ಚರ್ಯ ಎನಿಸಿದರೂ ಕೂಡ ನಿಜ…

22 ವರ್ಷಗಳ ಬಳಿಕ ಆ ಹುಡುಗ  ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿರುವ ಶ್ರೀರಾಮ್ ರೆಂಜಿತ್ ಮತ್ತು ಆ ಬಾಲಕಿ, ಈಗ ವೈದ್ಯೆಯಾಗಿರುವ ಆರ್ಯ ಶ್ರೀ.. ಇವರಿಬ್ಬರು ಇದೀಗ  ಸಪ್ತಪದಿ ತುಳಿದಿದ್ದಾರೆ.  ಈ ಮದುವೆಯು ಕೇರಳದ ಭವಾನಿ ಶಿವಕ್ಷೇತ್ರ ದೇವಸ್ಥಾನದಲ್ಲಿ ಜನವರಿ 26ರಂದು ನಡೆದಿತ್ತು. ಈ ಯುವ ಜೋಡಿಯ ಕಥೆಯನ್ನು ವಧುವಿನ ಸಂಬಂಧಿ ಡಾ. ದೀಪಾ ಸಂದೀಪ್ ಎಂಬಾಕೆ ಫೇಸ್’ಬುಕ್ ನಲ್ಲಿ ಷೇರ್ ಮಾಡಿಕೊಂಡಿದ್ದಾರೆ.. ರೆಂಜಿತ್ ಹಾಗೂ ಆರ್ಯ ಶ್ರೀಯ ತಾಯಂದಿರಾದ ಮಿನಿ ಹಾಗೂ ಸಂಧ್ಯಾ ಕೊಚ್ಚಿಯ ಶ್ರೀ ಧರ್ಮ ಪರಿಪಾಲನಾ ಯೋಗಂ ಶಾಲೆಯಲ್ಲಿ ಶಿಕ್ಷಕಿಯರಾಗಿದ್ದರು. 

ಇಬ್ಬರೂ ಸ್ನೇಹಿತರಾಗಿದ್ದರು.. ನಾಲ್ಕು ವರ್ಷಗಳ ನಂತರ ಅವರಿಬ್ಬರ ಮಕ್ಕಳಾದ ಆರ್ಯ ಮತ್ತು ರೆಂಜಿತ್ ಎಲ್‍ಕೆಜಿ ವಿದ್ಯಾರ್ಥಿಗಳಾಗಿದ್ದರು. ಅದೇ ವರ್ಷ ಶಾಲೆಯ ನೃತ್ಯ ಶಿಕ್ಷಕ ರಶೀದ್ 'ಒರು ಪಟಾಲಕರಂತೆ ಕಲ್ಯಾಣಂ'  ಎಂಬ ಹಾಸ್ಯ ನಾಟಕವನ್ನು ಪ್ರದರ್ಶಿಸಲು ನಿರ್ಧಾರ ಮಾಡಿ ರೆಂಜಿತ್ ನನ್ನು ಸೇನಾ ಜವಾನನ ಪಾತ್ರಕ್ಕೆ ಹಾಗೂ ಆರ್ಯ ಶ್ರೀಯನ್ನು ಆತನ ವಧುವಿನ ಪಾತ್ರಕ್ಕೆ ಆಯ್ಕೆ ಮಾಡಿದ್ದರು. ಆಗ ನಾಟಕೀಯವಾಗಿ ಮದುವೆಯಾದವರು ಇದೀಗ ನಿಜ ಜೀವನದಲ್ಲೂ ಕೂಡ ಮದುವೆಯಾಗಿದ್ದಾರೆ..

Edited By

Manjula M

Reported By

Manjula M

Comments