ಬೆಂಗಳೂರಿನ ತೃತೀಯ ಲಿಂಗಿಗಳಿಗೆ ಗುಡ್ ನ್ಯೂಸ್...!

31 Jan 2019 12:54 PM | General
312 Report

ತೃತೀಯ ಲಿಂಗಿಗಳು ಸಮಾಜದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಬಿಎಂಪಿ ಈ ನಿರ್ಧಾರವನ್ನು ಕೈಗೊಂಡಿದೆ.ತೃತೀಯ ಲಿಂಗಿಗಳಿಗೆ ಬಿಬಿಎಂಪಿ ವತಿಯಿಂದ ಮನೆಗಳನ್ನು ನಿರ್ಮಾಣ ಮಾಡಿಕೊಡಬೇಕೆಂದು ನಿರ್ಧರಿಸಲಾಗಿದೆ. ಅದರಂತೇ ಶೆಲ್ಟರ್‌ನಲ್ಲಿ ಆಹಾರ ಕೂಡ ಒದಗಿಸಲಾಗುತ್ತದೆ. ಇಷ್ಟೇ ಅಲ್ಲದೇ  ಜೊತೆಗೆ ಅವರಿಗೆ ಜೀವನಕ್ಕೆ ಬೇಕಾಗುವ ವಿವಿಧ ತರಬೇತಿಗಳನ್ನು ನೀಡಲಾಗುತ್ತದೆ.

ತೃತೀಯಲಿಂಗಿಗಳು ಸಮಾಜದಲ್ಲಿ ಸ್ಥಾನ ಕಂಡುಕೊಳ್ಳುವ  ನಿಟ್ಟಿನಲ್ಲಿದ್ದಾರೆ. ಆದರು ಕೂಡ  ಬಸ್‌ ನಿಲ್ದಾಣಗಳು, ಸಿಗ್ನಲ್‌ಗಳು, ಟೋಲ್‌ಗಳು ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಭಿಕ್ಷೆ ಬೇಡುವುದನ್ನು  ನೋಡುತ್ತಿರುತ್ತೇವೆ. ಮನೆ ಮಾಲೀಕರು ಬಾಡಿಗೆ ಮನೆ ನೀಡಲು ತೃತೀಯ ಲಿಂಗಿಗಳಿಗೆ ನಿರಾಕರಿಸುತ್ತಾರೆ.ಇದರಿಂದ ಅವರು ಉಳಿದುಕೊಳ್ಳಲು ಸರಿಯಾದ ಸೂರಿಲ್ಲದೇ ಎಲ್ಲೆಂದರಲ್ಲಿ ವಾಸಿಸುತ್ತಿದ್ದಾರೆ.

ಹಾಗಾಗಿ ಉಪ್ಪಾರ ಪೇಟೆ ಪೊಲೀಸ್ ಠಾಣೆ, ಮೆಜೆಸ್ಟಿಕ್ ಬಳಿ ಇರುವ ಆರೋಗ್ಯ ಕೇಂದ್ರವನ್ನು ಸದ್ಯಕ್ಕೆ ಬಳಕೆ ಮಾಡುತ್ತಿಲ್ಲ ಅದನ್ನೇ ಬಳಸಿಕೊಳ್ಳಲಾಗುತ್ತಿದೆ. ಮುಂದಿನ ವಾರ ಕೇಂದ್ರ ತೆರೆಯಲಿದೆ. ಅಲ್ಲಿ ವಾಸ ಮಾಡುವುದರಿಂದ ಪೊಲೀಸರು ಭದ್ರತೆಯನ್ನು ಕೂಡ ನೀಡಬಹುದಾಗಿದೆ. ಇನ್ನು ಕೂಡ ಮನೆಯಲ್ಲಿನ  ಪೋಷಕರ ಸಹಾಯ ಮತ್ತು ಸಪೋರ್ಟ್ ಅವರಿಗೆ ಸಿಗುತ್ತಿಲ್ಲ. ಕೆಲವೇ ಕೆಲವು ಮಂದಿ ಮಾತ್ರ ತಮ್ಮ ಸ್ವಂತ ಕಾಲಿನ ಮೇಲೆ ನಿಂತಿರುವುದು. ಇನ್ನುಳಿದ ತೃತೀಯ ಲಿಂಗಿಗಳು ಸಮಾಜದಿಂದ ಬಹಿಷ್ಕೃತರಾಗಿಯೇ ಇದ್ದಾರೆ. ಇದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬೇಕೆಂದು ಬಿಬಿಎಂಪಿ ಅವರಿಗೆ ಮನೆ ನಿರ್ಮಾಣ ಮಾಡುವ ಯೋಜನೆಯಲ್ಲಿದೆ ಎಂದಿದ್ದಾರೆ.

Edited By

Kavya shree

Reported By

Kavya shree

Comments