ಬೆಂಗಳೂರಿನ ಈ ಸ್ಥಳದಲ್ಲಿ ಮೊಬೈಲ್ ಬಳಸುವಂತಿಲ್ಲ…!! ಎಲ್ಲಿ ಗೊತ್ತಾ..?

30 Jan 2019 1:28 PM | General
282 Report

ಕೈಯಲ್ಲಿ ಮೊಬೈಲ್ ಇದ್ದರೆ ಸಾಕು … ಪ್ರಪಂಚವೇ ಮರೆತು ಕೂತು ಬಿಡುತ್ತೇವೆ….ಅಷ್ಟರ ಮಟ್ಟಿಗೆ ಮೊಬೈಲ್’ಗೆ ಅಡಿಟ್ ಆಗಿ ಬಿಟ್ಟಿರುತ್ತೇವೆ.. ಆದರೆ ಕೆಲವೊಂದು ಸ್ಧಳಗಳಿಗೆ ಮೊಬೈಲ್ ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಿರುತ್ತಾರೆ.. ಸುರಕ್ಷತೆಯ ದೃಷ್ಟಿಯಿಂದ ಹಲವಾರು ಕಡೆ ಮೊಬೈಲ್ ನಿಷೇಧ ಮಾಡಿರುವುದು ಎಲ್ಲರಿಗೂ ತಿಳಿರುವ ವಿಷಯವೇ ಸರಿ… ಇದೀಗ ಅದೇ ರೀತಿ ಬೆಂಗಳೂರಿನ ಈ ಪ್ರದೇಶಕ್ಕೂ ಇದೀಗ ಮೊಬೈಲ್ ನಿಷೇಧ ಬಂದಿದೆ… ರಾಜಕೀಯ ವಲಯಕ್ಕೂ ಕೂಡ ಈ ಬಿಸಿ ತಟ್ಟಿದೆ.

ರಾಜಕೀಯ ವಲಯದಲ್ಲೂ ಕೂಡ ಇದೀಗ ಮೊಬೈಲ್ ಬಳಕೆ ನಿಷೇಧ ಎಂಬ ಪದಗಳು ಕೇಳಿ ಬರುತ್ತಿವೆ… ಸಿಎಂ ಗೃಹ ಕಛೇರಿ ಕೃಷ್ಣಾಗೆ ಮೊಬೈಲ್ ಕೊಂಡೊಯ್ಯುವಂತಿಲ್ಲ ಎಂದು ಹೇಳಲಾಗುತ್ತಿದೆ..ಅಲ್ಲಿನ ಭದ್ರತಾ ಸಿಬ್ಬಂದಿ ಮೇಲಾಧಿಕಾರಿಗಳ ಸೂಚನೆಯಂತೆ ಮೊಬೈಲ್ ನಿಷೇಧ ಮಾಡಿದ್ದಾರೆ..  ಮಾಜಿ ಸಿಎಂ ಸಿದ್ದರಾಮಯ್ಯ  ಅವರ ಸಿಟ್ಟೆ ಇದಕ್ಕೆ ಕಾರಣವಾಗಬಹುದು… ಗೃಹ ಕಛೇರಿಗೆ ಹೋಗುವ ಯಾರೆ ಆದರೂ ಇನ್ನುಮುಂದೆ ಮೊಬೈಲ್ ಬಳಸುವಂತಿಲ್ಲ ಎಂದು ಹೇಳಲಾಗುತ್ತಿದೆ..ಆದರೆ ಈ ನಿಯಮ ಎಷ್ಟು ದಿನದವರೆಗೂ ಚಾಲ್ತಿಯಲ್ಲಿ ಇರುತ್ತದೆ ಅನ್ನೋದೆ ಸದ್ಯದ  ವಿಷಯ…

Edited By

Manjula M

Reported By

Manjula M

Comments