ಕೇಬಲ್ ಗ್ರಾಹಕರಿಗೆ ಇದು ಖಡಕ್ ವಾರ್ನಿಂಗ್ : ಫೆ.1 ರಿಂದ ಟಿವಿ ಚಾನಲ್ ಬಂದ್…!!!

30 Jan 2019 10:59 AM | General
383 Report

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಕೇಬಲ್ ಟಿವಿ ದರ ಕುರಿತಂತೆ ಹೊಸ ವ್ಯವಸ್ಥೆಯನ್ನು ಜಾರಿ ಮಾಡಿದೆ. 2018 ರ ಡಿಸೆಂಬರ್ 31 ಕ್ಕೆ ಅತಿಮ ದಿನಾಂಕವೆಂದು ಘೋಷಿಸಲಾಗಿತ್ತಾದರೂ ಬಳಿಕ 2019 ಜ. 31 ಕ್ಕೆ ಮುಂದೂಡಲಾಗಿದೆ. ಈಗಾಗಲೇ ಕೇಬಲ್ ಮತ್ತು ಡಿಟಿಹೆಚ್ ಗ್ರಾಹಕರಿಗೆ ಈ ಬಗ್ಗೆ ಮಾಹಿತಿಗಳು ಸಿಕ್ಕಿವೆ. ಆದರೆ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಫೆಬ್ರವರಿಗೆ ಗಡುವು ನೀಡಿದೆ.

ಅಷ್ಟೊರೊಳಗೆ ಕೇಬಲ್ ಹಾಗೂ ಡಿಟಿಎಚ್ ಗ್ರಾಹಕರು ನೂತನ ದರ ವ್ಯವಸ್ಥೆಗೆ ಬದಲಾಗಬೇಕಾಗಿದೆ. ಈ ಕುರಿತು ಮಾತನಾಡಿರುವ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ ಆರ್ ಎಸ್ಎಸ್ ಶರರ್ಮಾ ಫೆ. 1 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.ಒಂದು ವೇಳೆ ಗ್ರಾಹಕರು ಅಷ್ಟರೊಳಗಾಗಿ ನೂತನ ವ್ಯವಸ್ಥೆಗೆ ಬದಲಾಗದಿದ್ದರೆ ಫೆಬ್ರವರಿ 1 ರಿಂದ ಉಚಿತ ಚಾನೆಲ್ ಗಳನ್ನು ಹೊರತುಪಡಿಸಿ ಇತರೆ ಚಾನೆಲ್ ಗಳು ಪ್ರಸಾರವಾಗುವುದಿಲ್ಲ. ಆದರೆ ಚಾನೆಲ್ ಗಳ ಆಯ್ಕೆ ಕುರಿತಂತೆ ಗ್ರಾಹಕರಲ್ಲಿ ಇನ್ನೂ ಗೊಂದಲಗಳಿದ್ದು, ದೇಶದಾದ್ಯಂತ ಈವರೆಗೆ ಶೇಕಡ 70ರಷ್ಟು ಡಿಟಿಎಚ್ ಗ್ರಾಹಕರು ಹೊಸ ವ್ಯವಸ್ಥೆಗೆ ಬದಲಾಯಿಸಿಕೊಂಡಿದ್ದಾರೆಂದು ಹೇಳಲಾಗಿದೆ.

Edited By

Kavya shree

Reported By

Kavya shree

Comments