ಕೆಲವೇ ವರ್ಷಗಳಲ್ಲಿ ನಿಮ್ಮ ಮಗು ಕೋಟ್ಯಾಧಿಪತಿಯಾಗಬೇಕೇ : ಹಾಗಿದ್ರೆ ಬ್ಯಾಂಕ್’ನ ಈ ಹೊಸ ರೂಲ್ಸ್ ಫಾಲೋ ಮಾಡಿ.....

25 Jan 2019 5:30 PM | General
596 Report

ಅಪ್ಪ-ಅಮ್ಮಂದಿರು ತಾವು ದುಡಿದಿದ್ದಷ್ಟೇ ಅಲ್ದೇ ಮಕ್ಕಳಿಗೂ ಉಳಿತಾಯ ಮಾಡೋ ಕಾಲವಿದು. ಏಕಂದರೆ ಈ ಸದ್ಯ ನಾವು ಬದುಕ್ತಿರೋ ಈ ಪ್ರಪಂಚ ಭಾರೀ ದುಯಬಾರಿಯಾದದ್ದು. ಆದ್ದರಿಂದ ಇದೀಗ ಹೊಸ ಪ್ಲ್ಯಾನ್ ಒಂದು ಬಂದಿದೆ. ಇದರಿಂದ ನಿಮ್ಮ  ಮಗು ನೌಕರಿಗೂ ಸೇರೋ ಮುನ್ನವೇ ಕೋಟ್ಯಾಧಿಪತಿಯಾಗುತ್ತಾನೆ.  ಮಕ್ಕಳ ಹೆಸರಲ್ಲಿ ನಾವು ಹಣ ಹೂಡಿಕೆ ಮಾಡ್ತೀವಿ, ಅವರು 18 ವರ್ಷ ತುಂಬೋದೊರಳಗೆ ಕೋಟ್ಯಾಧಿಪತಿಯಾಗುತ್ತಾರೆ. ಹಣ ಹೂಡಿಕೆಗೆ ಮ್ಯೂಚ್ಯುಯಲ್ ಫಂಡ್ ಉತ್ತಮ ಮಾರ್ಗ. ಮಕ್ಕಳ ಹೆಸರಿನಲ್ಲಿ ಮಕ್ಕಳ ಹೆಸರಿನಲ್ಲಿಯೇ ಮ್ಯೂಚುವಲ್ ಫಂಡ್ ಶುರು ಮಾಡಬಹುದು.

 ಇದಕ್ಕೆ ಮಕ್ಕಳ ಜನನ ದಾಖಲೆ ಬೇಕು. ಮಕ್ಕಳ ಹೆಸರಿನಲ್ಲಿ ಪಾಸ್ ಪೋರ್ಟ್ ಇದ್ದರೆ ಅದನ್ನು ದಾಖಲೆ ರೂಪದಲ್ಲಿ ನೀಡಬಹುದು. ಇದ್ರ ಜೊತೆ ತಂದೆಯ ದಾಖಲೆಗಳನ್ನು ನೀಡಬೇಕಾಗುತ್ತದೆ.  ನಿಮ್ಮ ಯಾವುದೇ ಮಗುವಿನ ಹೆಸರಲ್ಲಿ  ಹುಟ್ಟಿದ ವರ್ಷದಿಂದ  ಕೇವಲ 18 ವರ್ಷ ಅಷ್ಟೆ ಹಣ ಹೂಡಿಕೆ ಮಾಡಿದ್ರೆ ಸಾಕು. ನೀವು ಕಟ್ಟ ಹಣ ಅವನು 18 ವರ್ಷದ ಬಳಿಕೆ ತೆಗೆದುಕೊಳ್ಳಬಹುದು.ಸಿಸ್ಟಮೆಟಿಕ್ ಇನ್ವೆಸ್ಟ್ಮೆಂಟ್ ಮ್ಯೂಚುವಲ್ ಫಂಡ್ ನಲ್ಲಿ ಅತ್ಯಂತ ವ್ಯವಸ್ಥಿತ ಹೂಡಿಕೆಯ ರೂಪವಾಗಿದೆ. ಮಕ್ಕಳ ಹೆಸರಿನಲ್ಲಿ ಈ ಯೋಜನೆಯಡಿ ಹೂಡಿಕೆ ಮಾಡುವುದು ಪ್ರಯೋಜನಕಾರಿ. ಮಕ್ಕಳಿಗೆ 18 ವರ್ಷ ತುಂಬುವವರೆಗೆ ಮಾತ್ರ ಹೂಡಿಕೆ ಮಾಡಿದ್ರೆ ಸಾಕು. ನಂತ್ರ ಹಣ ಹೂಡಿಕೆ ಮಾಡಬೇಕಾಗಿಲ್ಲ. 18 ವರ್ಷವಾಗ್ತಿದ್ದಂತೆ ಹಣ ಮಕ್ಕಳ ಹೆಸರಿಗೆ ವರ್ಗವಾಗಲಿದೆ.ಮಗು 18 ವರ್ಷವಾಗ್ತಿದ್ದಂತೆ ಕೋಟ್ಯಾಧಿಪತಿಯಾಗ್ಬೇಕೆಂದು ನೀವು ಬಯಸಿದ್ದರೆ ಮಗು ಹುಟ್ಟಿದ ವರ್ಷವೇ 5000 ಹೂಡಿಕೆ ಮಾಡಿ. ಈ ಮೊತ್ತವನ್ನು ಪ್ರತಿ ವರ್ಷ ಶೇಕಡಾ 15 ರಷ್ಟು ಹೆಚ್ಚಳ ಮಾಡ್ತಾ ಬನ್ನಿ. ಸರಾಸರಿ ಪ್ರತಿ ವರ್ಷ ಶೇಕಡಾ 12 ರಷ್ಟು ರಿಟರ್ನ್ ಸಿಗ್ತಿದೆ ಎಂದಾದ್ರೆ ಮಗುವಿಗೆ 18 ವರ್ಷ ತುಂಬುತ್ತಿದ್ದಂತೆ ಕೋಟ್ಯಾಧಿಪತಿಯಾಗೋದ್ರಲ್ಲಿ ಸಂಶಯವಿಲ್ಲ.

Edited By

Kavya shree

Reported By

Kavya shree

Comments