ಸ್ವಾಮಿಗಳಿದ್ದ ಆಸ್ಪತ್ರೆಯ ಕೊಠಡಿ ಈಗ ಸ್ಮಾರಕ!

25 Jan 2019 3:40 PM | General
310 Report

ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿ ಕೆಲವೇ ದಿಗಳಷ್ಟೇ ಕಳೆದಿವೆ. ಕೊನೆಗಾಲದಲ್ಲಿ ಮಠದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಸ್ವಾಮೀಜಿಗಳು ಇದ್ದ ಕೊಠಡಿ ಇದೀಗ ಸ್ಮಾರಕವಾಗುತ್ತಿದೆ. ಆಸ್ಪತ್ರೆಯ ಸಿಬ್ಬಂದಿ ಮತ್ತು ಆಡಳಿತ ವರ್ಗ ಸೇರಿ ಸ್ವಾಮೀಜಿಗಳಿದ್ದ ಕೊಠಡಿಯನ್ನು ದೇವರ ಸಾನಿಧ್ಯ ಮಾಡಿದ್ದಾರೆ. ಆಸ್ಪತ್ರೆಗೆ ಬಂದು ಹೋಗುವವರು ಅಲ್ಲಿ ನಮಸ್ಕರಿಸಿ ಹೋಗುವ ಅವಕಾಶ ನೀಡಲಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ/

ಹೌದು, ಸಿದ್ದಗಂಗಾ ಆಸ್ಪತ್ರೆಯ ಮೂರನೇ ಅಂತಸ್ತಿನಲ್ಲಿರುವ ಸ್ವಾಮೀಜಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ  ಕೊಠಡಿಯಲ್ಲಿ ಅವರ ಭಾವಚಿತ್ರವನ್ನಿಟ್ಟು ದೀಪ ಹಚ್ಚಿ ಪ್ರತಿದಿನ ಪೂಜೆ ಸಲ್ಲಿಸಲಾಗುತ್ತಿದೆ. ಇನ್ನು ಸ್ವಾಮೀಜಿಯವರನ್ನು ಕೊನೆಯ ದಿನಗಳಲ್ಲಿ ಆಸ್ಪತ್ರೆಯಿಂದ ಮಠಕ್ಕೆ ಕರೆದುಕೊಂಡು ಹೋಗುವ ಮುನ್ನ 12 ದಿನಗಳ ಕಾಲ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಈ ಒಂದು ನೆನಪಿಗೋಸ್ಕರ ಆಸ್ಪತ್ರೆ ಸಿಬ್ಬಂದಿ, ಆಡಳಿತ ಮಂಡಳಿ ಹಾಗೂ ವೈದ್ಯರು ಕೊಠಡಿಯನ್ನು ಸಂರಕ್ಷಿಸಿಡಲು ಮುಂದಾಗಿದ್ದಾರೆ.

Edited By

Kavya shree

Reported By

Kavya shree

Comments