ಮಾಧ್ಯಮದವರನ್ನು ಭಯೋತ್ಪಾದಕರೆಂದು ಹಿಯಾಳಿಸಿದ 'ಕೈ' ನಾಯಕ...!!!

24 Jan 2019 5:49 PM | General
271 Report

ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ. ಭಯೋತ್ಪಾಕರು ಒಂದೇ ಗುಂಡಿಗೆ ಸಾಯಿಸಿದ್ರೆ, ಮಾಧ್ಯಮಗಳು ಪ್ರತೀ ದಿನ ಕಾಟಕೊಟ್ಟು ಸಾಯಿಸುತ್ತಿವೆ. ಇತ್ತೀಚಿಗೆ ನಾನು ಮಾಧ್ಯಮಗಳಿಂದ ಸಂತ್ರಸ್ತನಾಗಿದ್ದೇನೆ. ಇಂದು ವಿಕಾಸ ಸೌಧದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಟಿವಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಪ್ರಮಾಣ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾಧ್ಯಮದರ ಮೇಲೆ ಸಿಟ್ಟಾಗಿದ್ದರು. ಮಾಧ್ಯಮಗಳು ಸಮಾಜದ ನಾಲ್ಕನೆಯ ಅಂಗ. ಸಮಾಜದಲ್ಲಿ ಅಭಿಪ್ರಾಯಗಳನ್ನು ರೂಪಿಸುವ ಸಾಧನಗಳಾಗಬೇಕು.

ಮಾಧ್ಯಮದವರಿಗೆ ಎಷ್ಟು ಜವಾಬ್ದಾರಿ ಇರುತ್ತದೋ ಅಷ್ಟನ್ನೇ ಮಾತ್ರ ನಿಭಾಯಿಸ ಬೇಕು. ಸಾರ್ವಜನಿಕರಿಗೆ ಎಷ್ಟು ಜವಾಬ್ದಾರಿ ಇರುತ್ತದೋ ಅಷ್ಟೇ ಜವಾಬ್ದಾರಿ ಮಾಧ್ಯಮದವರಿಗೂ ಇದೆ.ನಮ್ಮ ಬಗ್ಗೆ ಕೆಲವೇ ಮಂದಿಗೆ ನಿಜ ಗೊತ್ತಿರುತ್ತದೆ. ಆದರೆ ಮಾಧ್ಯಮಗಳು ಜಗತ್ತಿನ ಮಂದಿಗೆ ತೋರಿಸುವ ವೇಳೆ ಸತ್ಯ ಹೇಳಬೇಕು ಅಂತ ಹೇಳಿದರು. ಇತ್ತೀಚಿಗಂತೂ ನನಗೆ ಮಾಧ್ಯಮಗಳು ಮಾಡುವುದನ್ನು ನೋಡಿ ಸಾಕು ಸಾಕಾಗಿದೆ. ನಾನು ಕೂಡ ಮಾಧ್ಯಮದವರಿಂದ ಸಂತ್ರಸ್ತನಾಗಿದ್ದೇನೆ. ಅರ್ಧ ಕೇಳಿಸಿಕೊಂಡು, ಅದೂ ಸರಿನಾ ಅಥವಾ ತಪ್ಪು ಎಂದು ತಿಳಿದುಕೊಳ್ಳದೇ ಹೇಗೆ ಬೇಕು ಹಾಗೇ ವರದಿ ಮಾಡುವುದು ಎಷ್ಟು  ಸರಿ ಎಂದು ಮಾಧ್ಯಮದವರನ್ನು ಕಟುವಾಗಿ ಟೀಕಿಸಿದ್ದಾರೆ. ಇತ್ತೀಚೆಗೆ  ಶ್ರೀ ಸಿದ್ಧಗಂಗಾ ಸ್ವಾಮೀಜಿಗಳ ಅಂತ್ಯ ಸಂಸ್ಕಾರದ ದಿನ ಎಲ್ಲರಿಗೂ ಸಾರ್ವಜನಿಕವಾಗಿ ರಜೆ ಘೋಷಣೆ ಮಾಡಿದ್ರೂ, ಅದಕ್ಕೆ ಗೌರವ ಕೊಡದೇ ಸಭೆ ನಡೆಸಿದ ಪ್ರಿಯಾಂಕ ಖರ್ಗೆ ಮೇಲೆ ತೀವ್ರ ವಿರೋಧ ವ್ಯಕ್ತವಾಯ್ತು, ನಡೆದಾಡುವ ದೇವರಿಗೆ ಅವಮಾನ ಮಾಡಿದ್ದಾರೆ ಪ್ರಿಯಾಂಕ್ ಖರ್ಗೆ ಎಂದು ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸುದ್ದಿ ಕೂಡ ಆಯ್ತು. ಈ ಹಿನ್ನಲೆಯಲ್ಲಿ ಪ್ರಿಯಾಂಕ್ ಖರ್ಗೆ ಮಾಧ್ಯಮದವರನ್ನು ಕಂಡು ಗರಂ ಆದರು. ರಾಜಕೀಯ ನಾಯಕರು ತಪ್ಪು ಮಾಡೋದನ್ನೇ, ಹೇಳೋದೇ ತಪ್ಪಾ..? ಎಲ್ಲಾ ಮಾಡಿ, ಮಾಧ್ಯಮದವರ ಮೇಲೆ ಗೂಬೆ ಕೂರಿಸುವುದು ಸಮಂಜಸವೇ....?

Edited By

Kavya shree

Reported By

Kavya shree

Comments