ಗ್ರಾಹಕರೇ.. ನಿಮ್ಮ ಖಾತೆಯಲ್ಲಿ ಹಣ ಇದ್ರೆ , ಈಗ್ಲೇ ಚೆಕ್ ಮಾಡ್ಕೊಳ್ಳಿ : ಇದು SBI ಎಚ್ಚರಿಕೆ..!!!

23 Jan 2019 2:27 PM | General
597 Report

ದೇಶದ ಅತೀದೊಡ್ಡ  ಬ್ಯಾಂಕ್ ಎಸ್’ಬಿಐ ಗ್ರಾಹರಿಕರಿಗೆ ಒಂದು ಎಚ್ಚರದ ಮಾಹಿತಿ ರವಾನಿಸಿದ್ದಾರೆ. ಇತ್ತೀಚಿಗೆ ಬ್ಯಾಂಕ್ ಅಕೌಂಟ್’ಗಳನ್ನು ಹ್ಯಾಕ್ ಮಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಈ ಹಿನ್ನಲೆಯಲ್ಲಿ ಎಸ್’ಬಿಐ ತನ್ನ  . ಗ್ರಾಹಕರಿಗೆ ಮಹತ್ವದ ಎಚ್ಚರಿಕೆಯೊಂದನ್ನು ಸಾರಿದೆ. ಇಂಟರ್ನೆಟ್ ಬ್ಯಾಂಕಿಂಗ್ ನಲ್ಲಿ ಕಳ್ಳತನ ಹೆಚ್ಚಾಗ್ತಿದೆ. ನಿಮ್ಮ ಬ್ಯಾಂಕ್ ಖಾತೆ ಯಲ್ಲಿನ ಹಣ ಯಾವಾಗ ಬೇಕಾದರೂ ಖಾಲಿಯಾಗುವ ಸಾಧ್ಯತೆಗಳಿವೆ ಎಂದು ಬ್ಯಾಂಕ್ ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಎಚ್ಚರಿಕೆ ಸಂದೇಶ ನೀಡಿದೆ. `ಫಿಶಿಂಗ್' ಒಂದು ಸಾಮಾನ್ಯ ರೀತಿಯ ಇಂಟರ್ನೆಟ್ ಕಳ್ಳತನವೆಂದು ಬ್ಯಾಂಕ್ ಹೇಳಿದೆ. ನಿಮ್ಮ ಹಣದ ಬಗ್ಗೆ, ಹಾಗೂ ಅಕೌಂಟ್ ಡೀಟೈಲ್ಸ್ ಬಗ್ಗೆ ಎಲ್ಲಿಯೂ ಮಾಹಿತಿ ಸೋರಿಕೆಯಾಗಂದೇ ಬ್ಯಾಂಕ್ ತಿಳಿಸಿದೆ.

ಆರ್ಥಿಕ ಮಾಹಿತಿಯನ್ನು ಕದಿಯಲು ಬ್ಯಾಂಕ್ ಖಾತೆ ಸಂಖ್ಯೆ, ನೆಟ್ ಬ್ಯಾಂಕಿಂಗ್ ಪಾಸ್ವರ್ಡ್, ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ಬಳಕೆ ಮಾಡಲಾಗುತ್ತದೆ. ಎಲ್ಲ ಮಾಹಿತಿ ಸಂಗ್ರಹಿಸಿದ ನಂತ್ರ ಹ್ಯಾಕರ್, ಗ್ರಾಹಕರ ಖಾತೆಯಿಂದ ಹಣ ವರ್ಗಾವಣೆ ಅಥವಾ ಬಿಲ್ ಪಾವತಿಗೆ ಬಳಸಿಕೊಳ್ಳುತ್ತಾರೆ. ಹ್ಯಾಕರ್ಗಳು ತಮ್ಮ ತಂತ್ರಜ್ಞಾನದ ಕೌಶಲ್ಯತೆಯಿಂದ ಯಾವಾಗ ಬೇಕಾದರೂ ಅಕೌಂಟ್’ನ ದಾಖಲೆಗಳನ್ನು ಪಡೆಯಬಹುದು. ಅದರಲ್ಲೂ  ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರರಿಗೆ ಇ-ಮೇಲ್ ಮಾಡಿ ಅವ್ರ ಖಾತೆಯ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ಇ-ಮೇಲ್ ನಲ್ಲಿ ನಮೂದಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವಂತೆ ಹೇಳಲಾಗುತ್ತದೆ. ಲಿಂಕ್ ಕ್ಲಿಕ್ ಮಾಡ್ತಿದ್ದಂತೆ ನಕಲಿ ಇಂಟರ್ನೆಟ್ ಬ್ಯಾಂಕಿಂಗ್ ವೆಬ್ಸೈಟ್ ತೆರೆದುಕೊಳ್ಳುತ್ತದೆ. ಯಾವುದೇ ಕಾರಣಕ್ಕೂ ನಿಮ್ಮಪಾಸ್ ವರ್ಡ್ ಮತ್ತು ಈ ಮೇಲ್ ನ್ನು ನೀಡಬೇಡಿ.  ಇಂಟರ್ನೆಟ್ ಬ್ಯಾಂಕಿಂಗ್ ಮಾಡುವವರು ಮೈಯೆಲ್ಲಾ ಕಣ್ಣಾಗಿ ಇರುವುದು ಒಳ್ಳೆಯದು.

Edited By

Kavya shree

Reported By

Kavya shree

Comments