ಒಂಟೆ ಹಾಲಿಗೂ ಬಂತು ಬಾರೀ ಬೇಡಿಕೆ..!! ಕೆಲವು ಕಾಯಿಲೆಗಳಿಗೆ ಇದೇ ಮದ್ದು..!!!

23 Jan 2019 1:56 PM | General
206 Report

ಪುಟ್ಟ ಪುಟ್ಟ ಮಕ್ಕಳಿಗೆ ಜೀವ ಉಳಿಸುವ ಅಮೃತ ಅಂದರೆ ಅದು ಹಾಲು.. ಮಕ್ಕಳಿಗೆ ತಾಯಿಯ ಎದೆ ಹಾಲು ತುಂಬಾ ಮುಖ್ಯ.. ಜೀವ ಉಳಿಸುವ ಅಮೃತ ಇದ್ದ ಹಾಗೆ…ನಂತರ ಹಸು ಹಾಲು ಕೊಡ್ತಾರೆ.. ನಂತರ ಮಕ್ಕಳು ಬೆಳಿತಾ ಬೆಳಿತಾ ಕೆಲವರಿಗೆ ಮೇಕೆ ಹಾಲು, ಕತ್ತೆ ಹಾಲು ಕೊಡುವುದನ್ನು ನೋಡಿದ್ದೇವೆ…  ಇದೀಗ ಪ್ರಮುಖ ಡೈರಿ ಕಂಪನಿ ಅಮುಲ್ ಈಗ ಒಂಟೆ ಹಾಲಿನ ಮಾರಾಟಕ್ಕೆ ಮುಂದಾಗಿದೆ. ಸದ್ಯ ಗುಜರಾತಿನ ಗಾಂಧಿನಗರ, ಅಹಮದಾಬಾದ್ ಮಾರುಕಟ್ಟೆಯಲ್ಲಿ ಒಂಟೆ ಹಾಲು ಸಿಗ್ತಿದೆ.ವೈದ್ಯರ ಪ್ರಕಾರ, ಒಂಟೆ ಹಾಲು ಸುಲಭವಾಗಿ ಜೀರ್ಣವಾಗುತ್ತದೆಯಂತೆ. ಆರೋಗ್ಯಕ್ಕೂ ಬಹಳ ಒಳ್ಳೆಯದು ಎಂದಿದ್ದಾರೆ.

ವೈದ್ಯರು ಹೇಳುವ ಪ್ರಕಾರ ಮಧುಮೇಹ ರೋಗಿಗಳಿಗೆ ಇದು ಬೆಸ್ಟ್ ಅಂತೆ... ಡೈರಿ ಉತ್ಪನ್ನ ಅಲರ್ಜಿ ಎನ್ನುವವರಿಗೂ ಈ ಹಾಲು ಬಹಳ ಒಳ್ಳೆಯದು. ಈ ಹಾಲಿನಲ್ಲಿ ಯಾವುದೇ ಅಲರ್ಜಿ ಗುಣವಿಲ್ಲವೆಂದು ಹೇಳಲಾಗಿದೆ. ಈ ಹಾಲು ಸಾಕಷ್ಟು ಪೌಷ್ಟಿಕಾಂಶವನ್ನು ಹೊಂದಿದೆ. ಭಾರತದ ಅಪೌಷ್ಠಿಕತೆ ಹೋಗಲಾಡಿಸಲು ಒಂಟೆ ಹಾಲು ಬಳಸುವ ಬಗ್ಗೆ ಮೋದಿ ಚಿಂತನೆ ನಡೆಸುತ್ತಿದ್ದಾರೆ. ಅಮುಲ್ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಒಂಟೆ ಹಾಲನ್ನು ಮಾರುಕಟ್ಟೆಗೆ ಪರಿಚಯಿಸಿದೆ. 500 ಎಂಎಲ್ ಒಂಟೆ ಹಾಲಿನ ಬೆಲೆ 50 ರೂಪಾಯಿ. ಬೇಡಿಕೆ ಹೆಚ್ಚಾದ್ರೆ ರಾಜಸ್ತಾನದಿಂದ ಹಾಲನ್ನು ತರಿಸಿಕೊಳ್ಳಲು ಕಂಪನಿ ನಿರ್ಧರಿಸಿದೆ. ಮಧುಮೇಹ ಹಾಗೂ ಕ್ಯಾನ್ಸರ್ ರೋಗಿಗಳಿಗೆ ಅಮುಲ್ ಹಾಲು ಬಹಳ ಪ್ರಯೋಜನಕಾರಿ ಎಂದು ಕಂಪನಿ ಹೇಳಿದೆ. ಒಟ್ಟಾರೆ ಮುಂದಿನ ದಿನಗಳಲ್ಲಿ ಒಂಟೆಯ ಹಾಲಿಗೂ ಕೂಡ ಬೇಡಿಕೆ ಬರುವುದರಲ್ಲಿ ನೋಡೌಟ್..

Edited By

Manjula M

Reported By

Manjula M

Comments