ಹೆಣ್ಮಕ್ಳೇ ಸ್ಟ್ರಾಂಗು ಗುರು : ಪುರುಷ ತಂಡವನ್ನು ನಿಭಾಯಿಸ್ತಾ ಇರುವ ಪ್ರಪ್ರಥಮ ಮಹಿಳೆ ಈಕೆ!

23 Jan 2019 1:32 PM | General
1013 Report

ಜನವರಿ 26 ಕ್ಕೆ  ಗಣರಾಜೋತ್ಸವಕ್ಕೆ ಪೆರೇಡ್ ತಾಲೀಮು ಜೋರಾಗಿಯೇ ನಡೆಯುತ್ತಿದೆ. ಆದರೆ ಈ ಬಾರಿ ಕೇಂದ್ರ ಸರ್ಕಾರ  ಮಹಿಳಾ ಲೆಫ್ಟಿನೆಂಟ್ ಒಬ್ಬರಿಗೆ ವಿಶೇಷವಾದ ಪ್ರಾತಿನಿಧ್ಯ ನೀಡಿದೆ. ಈ ಸಲ ದೆಹಲಿಯಲ್ಲಿ ನಡೆಯುವ ಪೆರೇಡ್’ನಲ್ಲಿ  ಮಹಿಳಾ ಅಧಿಕಾರಿಯೊಬ್ಬರು ಪುರುಷರೇ ಇರುವ ದಳವೊಂದನ್ನು ಮುನ್ನಡೆಸಲಿದ್ದಾರೆ.  ಈ ಅವಕಾಶ ಪೆರೇಡ್’ನಲ್ಲಿ ಇದೇ ಮೊದಲು. ಅಂದಹಾಗೇ ತಾನು ಅದೃಷ್ಟವಂತೆ ಎಂದು ಹೇಳಿಕೊಳ್ಳುವ ಈ ಮಹಿಳಾ ಅಧಿಕಾರಿಯೇ ಲೆಫ್ಟಿನೆಂಟ್‌ ಭಾವನಾ ಕಸ್ತೂರಿ.

ಇವರ ನೇತೃತ್ವದಲ್ಲಿ 144 ಸೈನಿಕರು ಹೆಜ್ಜೆ ಹಾಕಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಈ ಅವಕಾಶ ಕೊಟ್ಟಿದ್ದಕ್ಕೆ ನಾನು ಪುಳಕಿತಗೊಂಡಿದ್ದೇನೆ. "ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್‌ ಆಗಿರುವ ರಾಷ್ಟ್ರಪತಿಯವರ ಮುಂದೆ ನಾನು ತಂಡವನ್ನು ಮುನ್ನಡೆಸಿ ಅವರಿಗೆ ಸೆಲ್ಯೂಟ್‌ ನೀಡುವುದು ನನ್ನ ಕನಸಿನ ಘಳಿಗೆಯಾಗಿದೆ. ಪೆರೇಡನ್ನು ವೀಕ್ಷಿಸಲು ಬರುವ ಜನಸ್ತೋಮದ ಕುರಿತು ನಾನು ಪುಳಕಗೊಂಡಿದ್ದೇನೆ ಇದರಿಂದ ನಾನು ತುಂಬಾ ಖುಷಿಯಾಗಿದ್ದೀನಿ. ಈ ಅವಕಾಶದ ಮುಂದೆ ಬೇರೆಲ್ಲಾ ಪ್ರಶಸ್ತಿಗಳು ಕಡಿಮೆಯೆ. ಲೆ/ ಕಸ್ತೂರಿ  ಅವರು ಪೆರೇಡ್’ಗಾಗಿ ಮೈ ಕೊರೆಯುವ ಚಳಿಯಲ್ಲಿ  ಮುಂಜಾನೆ 5:30 ಕ್ಕೆ ತಾಲೀಮು ನಡೆಸುತ್ತಿದ್ದಾರೆ. ಅವರು 9 ವರ್ಷ ಹಿಂದೆ ಎನ್‌ಸಿಸಿ ತಂಡದ ಸದಸ್ಯೆಯಾಗಿ ಪರೇಡ್‌ನ‌ಲ್ಲಿ ಹೆಜ್ಜೆ ಹಾಕಿದ್ದರು. ಇದು ನನಗೆ ಜೀವಮಾನದ  ಶ್ರೇಷ್ಟ ಸಾಧನೆ ಎಂದಿದ್ದಾರೆ.

Edited By

Kavya shree

Reported By

Kavya shree

Comments