ಐಟಿ ಇಲಾಖೆಯಿಂದ ಬಿಗ್ ಶಾಕ್ : ಹಣ ಕಟ್ಟದವರಿಗೆ ಗಡುವು ಕೇವಲ….?

23 Jan 2019 10:13 AM | General
577 Report

ಇತ್ತೀಚೆಗೆ ಇಡೀ ಸ್ಯಾಂಡಲ್’ವುಡ್’ನ್ನೇ ಮೂರು ದಿನಗಳ ಕಾಲ ನಡುಗಿಸಿದ ಐಟಿ ಅಧಿಕಾರಿಗಳ ವರದಿ ರಾಜ್ಯದಲ್ಲಿ ದೊಡ್ಡಮಟ್ಟದ ಸುದ್ದಿಯಾಗಿತ್ತು. ಇದೀಗ ಟ್ಯಾಕ್ಸ್ ಕಟ್ಟದವರಿಗೆ ತೆರಿಗೆ ಇಲಾಖೆ ಬಿಗ್ ಶಾಕ್ ಕೊಡಲಿದೆ. ತಾವು ಪಡೆಯುವ ಆದಾಯದಲ್ಲಿ ಇಷ್ಟು ಶೇಕಡವಾರು ಹಣವನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕು.

ಇದೀಗ ಹಣಕಾಸು ಇಲಾಖೆ ಟ್ಯಾಕ್ಸ್ ಹಣ ಕಟ್ಟದವರಿಗೆ, ಆನ್‌ ಲೈನ್ ಮೂಲಕ ಟ್ಯಾಕ್ಸ್ ರಿಟರ್ನ್ಸ್ ಫೈಲ್ ನ್ನು ಸಲ್ಲಿಸುವಂತೆ ಸೂಚನೆ ನೀಡಿದೆ. ಆದರೆ ಅದಕ್ಕೆ ಗಡುವು ಕೂಡ ನೀಡಲಾಗಿದ್ದು, ಕೇವಲ 21 ದಿನ ಮಾತ್ರ ನೀಡಿದೆ. ಈ ರೀತಿ ಮಾಹಿತಿಯನ್ನು ಸರಣಿ ಟ್ವೀಟ್ ಮೂಲಕ ತಿಳಿಸಿದ್ದು ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ತಿಳಿಸಲಾಗಿದೆ. 2017-18ನೇ ಸಾಲಿನ ಆರ್ಥಿಕ ವರ್ಷದ ರಿಟರ್ನ್ಸ್ ಫೈಲ್ ನ್ನು 2018-19 ರ ಮೌಲ್ಯಮಾಪನ ವರ್ಷ ಬಂದರೂ ಕಟ್ಟಿಲ್ಲ. ಆದ್ದರಿಂದ ಕೂಡಲೇ ಆನ್ ಲೈನ್ ನಲ್ಲಿ ಈ ಅರ್ಜಿ ತುಂಬುವಂತೆ ಸೂಚನೆ ನೀಡಿದೆ. 21 ದಿನದೊಳಗೆ ಅರ್ಜಿಗೆ ಪ್ರತಿಕ್ರಿಯೆ ನೀಡಬೇಕು. ಒಂದು ವೇಳೆ ಅರ್ಜಿದಾರರು ಈ ಕುರಿತಂತೆ ಸರಿಯಾದ ಮಾಹಿತಿನ್ನು ಕೊಟ್ಟರೆ ಆನ್’ಲೈನ್ನಲ್ಲಿ ಪ್ರಕ್ರಿಯೆ ಮುಕ್ತಾಯವಾಗುತ್ತದೆ. 2017-18 ನೇ ಸಾಲಿನ ರಿಟರ್ನ್ ಫೈಲ್’ನ್ನೇ ಇನ್ನು  ಕೆಲವರು ಕೊಟ್ಟಿಲ್ಲ.

Edited By

Kavya shree

Reported By

Kavya shree

Comments