ಬೆಳಗ್ಗೆ ಎದ್ದ ತಕ್ಷಣ ಅಪ್ಪಿ-ತಪ್ಪಿಯೂ ಇವುಗಳನ್ನು ನೋಡಬೇಡಿ : ತಪ್ಪಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ…!!!

22 Jan 2019 5:07 PM | General
916 Report

ಒಮ್ಮೊಮ್ಮೆ ನಮ್ಮ ಕೆಲಸಗಳು ಆಗದೇ ಇದ್ದಾಗ, ಅಥವಾ ಯಾರಿಂದಲೋ ತೊಂದೆಯಾದಾಗ ಇಂದು ಯಾರ ಮುಖ ನೋಡಿ ಎದ್ನೋ ಅಂಥಾ ಶಪಿಸುತ್ತಾರೆ. ಮತ್ತೆ ಕೆಲವರಿಗೆ ದುರಂತ ಸಂಭವಿಸಿದಾಗ ನಾವು ಅವರ ಮುಖ ನೋಡಲೇ ಬಾರದಿತ್ತೇನೋ ಅಂತಾ ಅನ್ಕೊಳ್ತೀವಿ. ಅದಕ್ಕೆ ಕಾರಣ ಬೆಳಗ್ಗೆ ಎದ್ದಾಗ ನಿಮ್ಮ ದಿನ ಚೆನ್ನಾಗಿರ ಬೇಕು ಅಂದ್ರೆ ಎದ್ದ ತಕ್ಷಣ ಹೀಗೆ ಮಾಡಲೇ ಬಾರದಂತೆ. ಈ ವಸ್ತುಗಳನ್ನು ನೋಡಿದ್ರೆ ಅಶುಭ ಕಾದಿದ್ಯಂತೆ…ಅದೇನು ಅಂತಾ ತಿಳಿಸ್ತೀವಿ ಮುಂದೆ ಓದಿ….

ಬೆಳಗ್ಗೆ ಎದ್ದ ತಕ್ಷಣ ನೀವು ನೋಡಲೇ ಬಾರದ ಮುಖ್ಯ ಸಂಗತಿಗಳು. ಬೆಳಗ್ಗೆ ಎದ್ದ ತಕ್ಷಣ ಗಂಡಸರು, ಕೂದಲು ಬಿಟ್ಟ ಹೆಣ್ಣು ಮಕ್ಕಳನ್ನು ನೋಡಬಾರದು. ಅಲ್ಲದೇ ಬರೀ ಹಣೆಯಲ್ಲಿ, ಅಥವಾ ಕುಂಕುಮ ಇಲ್ಲದ ಮಹಿಳೆಯರನ್ನು ನೋಡಿದ್ರೆ ಗಂಡಸರು ಹೋಗೋ ಕೆಲಸ ನೆರವೇರಲ್ವಂತೆ.  ಇನ್ನು ಕೆಲವು ಹೆಂಗಸರು ಎದ್ದ ತಕ್ಷಣ ಅಡುಗೆ ಮನೆಗೆ ಧಾವಿಸುವುದು ಸಾಮಾನ್ಯ. ಅಡುಗೆ ಕೋಣೆಯಲ್ಲಿರುವ ತೊಳೆಯದ ಪಾತ್ರೆಗಳನ್ನು ಅಥವಾ ಶುದ್ಧವಿಲ್ಲದ ಪಾತ್ರೆಗಳನ್ನು ನೋಡಬಾರದಂತೆ. ಇನ್ನು ಕೆಲವು ಕಡೆ ಹಳ್ಳಿಗಳಲ್ಲಿ, ಪಟ್ಟಣದ ಕೆಲ ಮನೆಗಳಲ್ಲಿ  ಎದ್ದ ತಕ್ಷಣ ಕೆಲ ಕ್ರೂರ ಪ್ರಾಣಿಗಳ ಫೋಟೋಗಳನ್ನು ಹಾಕಿಕೊಂಡಿರುತ್ತಾರೆ. ಮಲಗಿ ಎದ್ದ ಮೇಲೆ ಇದನ್ನು ನೋಡುವ ಹವ್ಯಾಸ ಇಟ್ಟುಕೊಂಡಿರುತ್ತಾರೆ. ಅಥವ ಅವರೇ ಸಾಕಿದ ಕೆಲ ಪ್ರಾಣಿಗಳನ್ನು ಎದ್ದ ತಕ್ಷಣ ನೋಡುವುದನ್ನು ರೂಢಿಸಿಕೊಂಡಿರುತ್ತಾರೆ. ಆದರೆ ಇದು ತಪ್ಪು,ಕೆಲವರಿಗೆ ಇದರ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಅಪ್ಪಿ-ತಪ್ಪಿಯೂ ಅವರು ಇವುಗಳನ್ನು ನೋಡಬಾರದು.

ಇನ್ನು ಬೆಳಗ್ಗೆ ಎದ್ದ ತಕ್ಷಣ ನಿಮಗೆ ಶುಭವಾಗಬೇಕು ಅಂದ್ರೆ, ಅಥವಾ  ನೋಡಬೇಕಾದ ವಸ್ತುಗಳು ಯಾವುವುವೆಂದರೆ, ಭೂಮಿತಾಯಿ, ಭೂಮಿತಾಯಿಗೆ ನಮಸ್ಕರಿಸಿ ನಡೆದ್ರೆ ಖಂಡಿತಾ ಶುಭವಾಗುತ್ತದೆ. ಇನ್ನೂ ಕೆಲವು ಜನ ಬ್ರಾಹ್ಮಣರನ್ನು ನೋಡಿದರೆ ಅವರ ಅದೃಷ್ಟ ನಮಗೆ ಸಿಗುತ್ತದೆ ಎನ್ನುತ್ತಾರೆ. ಅವರ ಮುಖದಲ್ಲಿನ ಪಾಸೀಟೀವ್ ಎನರ್ಜಿ ನಮಗೆ ವರ್ಗವಾಗುತ್ತದೆ. ಅದಕ್ಕಾಗಿಯೇ ಬ್ರಾಹ್ಮಣರ ಮುಖವನ್ನು ನೋಡಲಾಗುತ್ತದೆ. ಇನ್ನು ಬೆಳಗ್ಗೆ ಎದ್ದ ತಕ್ಷಣ ಗೋವು ಅಥವಾ ತುಳಸಿಯನ್ನು ನೋಡಿದ್ರೆ ನಮಗೆ ನೇರವಾಗಿ ದೇವರ ದರ್ಶನ ಸಿಗುತ್ತದೆ ಎಂಬ ನಂಬಿಕೆ ಇದೆ. ಇನ್ನು ಬೆಟ್ಟ ಗುಡ್ಡ, ನದಿ , ನಿಸರ್ಗ ನೋಡಿದ್ರೆ ಮಂಗಳಕರ ಎನ್ನುತ್ತಾರೆ. ಇನ್ನು ಕೆಲ ಗಂಡಸರು ತಮ್ಮ ಹೆಂಡತಿಯ ಮುಖ ನೋಡಿಯೇ ಹೇಳುವುದು ಅದು ಕೂಡ ಲಾಭವಾಗುತ್ತದೆ ಎನ್ನುತ್ತಾರೆ. ಇನ್ನು ಕೆಲವರು ತಮ್ಮ ಅಂಗೈನ ನೋಡಿ ಹೇಳುತ್ತಾರೆ. ಇನ್ನು ಈ ರೀತಿ ಮಾಡುವುದರಿಂದ ಶುಭವಾಗುತ್ತದೆ ಎನ್ನುತ್ತಾರೆ.

 

Edited By

Kavya shree

Reported By

Kavya shree

Comments