ಪರ್ವತ ಏರುವಾಗ ಜಾರಿಬಿದ್ದು ಸಾವಿಗೀಡಾದಳು ಬಿಕಿನಿ ಸುಂದರಿ...!!!

22 Jan 2019 3:32 PM | General
524 Report

ತಾವು ಏನಾದರು ಜೀವನದಲ್ಲಿ ಸಾಧಿಸಬೇಕು ಎನ್ನುವವರು ಅದೆಷ್ಟು ಮಂದಿ ನಮ್ಮೊಂದಿಗಿದ್ದಾರೆ,ಎಷ್ಟೋ ಬಾರಿ ಸಾಹಸಕ್ಕೆ ಕೈ ಹಾಕುತ್ತಾ  ಪ್ರಾಣ ಕಳೆದುಕೊಂಡವರು ಇದ್ದಾರೆ . ಬಿಕಿನಿ ಗರ್ಲ್ ಅಂತಾನೇ ಫೇಮಸ್ ಆಗಿದ್ದ ಗಿಗಿ ಎಂಬಾಕೆ ಪರ್ವತ ಏರುವಾಗ ನಿಯಂತ್ರಣ ತಪ್ಪಿ ಸಾವನ್ನಪ್ಪಿದ್ದಾಳೆ. 36 ವರ್ಷದ ಗಿಗಿ ಕನಿಷ್ಟ ಉಡುಪು ತೊಟ್ಟೇ ಪರ್ವತ ಏರುತ್ತಿದ್ದಳು, ಬಹಳ ಹೆಸರು ಮಾಡಿದ  ಗಿಗಿ ದುರಂತ ಸಾವಿಗೀಡಾಗಿದ್ದಾರೆ.

 ತೈವಾನ್ ನ ಎತ್ತರದ ಪರ್ವತ ಏರುವಾಗ ಆಯತಪ್ಪಿ ಪ್ರಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಗಿಗಿ ತಮ್ಮ ರೂಪ ಮತ್ತು ಮೈಮಾಟದಿಂದ ಬಹಳ ಹೆಸರು ಮಾಡಿದ್ದರು. ಒಳ ಉಡುಪಿನಲ್ಲೇ ಶಿಖಾರೋಹಣ ಮಾಡುತ್ತಿದ್ದ  ಗಿಗಿ ಕಪ್ಪು ಕನ್ನಡಕ ತೊಟ್ಟು ಹೊರಟರೇ ಒಂದು ಎತ್ತರದ ಪರ್ವತ  ಜಯಿಸಿದರೆಂದೇ ಅರ್ಥ. ಆದರೆ ತೈವಾನ್ ಹೃದಯ ಭಾಗದಲ್ಲಿರುವ ನನ್‍ಟಾವೋ ಕೌಂಟಿಯಲ್ಲಿನ ದೇಶದ ಅತಿ ಎತ್ತರದ ಯುಶಾನ್ (ಜೇಡ್ ಮೌಂಟೇನ್) ಪರ್ವತಾರೋಹಣಕ್ಕಾಗಿ ಜ.11ರಂದು ಈ ದಿಟ್ಟ ಸಾಹಸಿ ತೆರಳಿದ್ದರು. ಈ ಪರ್ವತ 12,966 ಅಡಿಗಳಷ್ಟು ಎತ್ತರದಲ್ಲಿದೆ. ಏಕಾಂಗಿಯಾಗಿಯೇ ಪರ್ವತ  ಏರಿದ  ಗಿಗಿ ಪ್ರಪಾತಕ್ಕೆ ಆಯತಪ್ಪಿ ಉರುಳಿ ಬಿದ್ದಿದ್ದಾಳೆ. ಜ.19 ರಂದು ಆಕೆ ತನ್ನ ಸ್ಯಾಟಲೈಟ್ ಫೋನ್ನಿಂದ ಕರೆ ಮಾಡಿ ತಾನು ಅಪಾಯದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ ಎಂದು ಹೇಳಿದ್ದರಂತೆ. ಆದರೆ ಸಮಯಕ್ಕೆ ಸರಿಯಾಗಿ ರಕ್ಷಣಾ ಕಾರ್ಯಕರ್ತರು ಅಲ್ಲಿಗೆ ತಲುಪಲು ಸಾಧ್ಯವಾಗದೇ ಇದ್ದುದ್ದರಿಂದ  ಗಿಗಿ ಸಾವನ್ನಪ್ಪಿದ್ದಾರೆ.ತೀವ್ರ ಶೋಧ ನಡೆಸಿದ ನಂತರ ಹಿಮ ಕಂದಕವೊಂದರಲ್ಲಿ ಆಕೆಯ ಮೃತದೇಹ ಕಂಡುಬಂದಿದೆ.

Edited By

Kavya shree

Reported By

Kavya shree

Comments