ಸಿದ್ಧಗಂಗಾ ಸ್ವಾಮೀಜಿಗಳಿಗೆ ತಮ್ಮ ಸಾವಿನ ಮುನ್ಸೂಚನೆ ಸಿಕ್ಕಿತ್ತಾ : ಕಾರಣ....!!!

22 Jan 2019 9:59 AM | General
1177 Report

ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು ನಮ್ಮನ್ನಗಲಿದ್ದಾರೆ. ಅಪಾರ ಭಕ್ತವೃಂದವನ್ನು ಶೋಕ ಸಾಗರದಲ್ಲಿ ಮುಳುಗಿಸಿರುವ ಹಿರಿಯ ಚೇತನಕ್ಕೆ 111 ವರ್ಷ ತುಂಬಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಮಠದ ದೇವರಿಗೆ ಕೊನೆಗಾಲದಲ್ಲಿ ಒಂದು ಆಸೆಯಿತ್ತಂತೆ. ತಮ್ಮ ಆಸೆಯನ್ನು ನೆರವೇರಿಸಿಕೊಂಡ ಸ್ವಾಮೀಜಿಗೆ ಈ ಮೊದಲೇ  ತಮ್ಮ ಸಾವಿನ ಮುನ್ಸೂಚನೆ ಸಿಕ್ಕಿತ್ತೇನೋ ಅನಿಸುತ್ತದೆ.ಅದಕ್ಕೆ ಕಾರಣ ಕೂಡ ಇದೆ.

ಶಿವಕುಮಾರ ಸ್ವಾಮೀಜಿ ಬದುಕಿನುದ್ದಕ್ಕೂ ಪರರ ಸೇವೆಗಾಗಿ ಬದುಕು ಸವೆಸಿದವರು. ತಮ್ಮ ಮಠವೇ ಅವರಿಗೆ ಸರ್ವಸ್ವವಾಗಿತ್ತು. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಳ್ಳುವ ಅನಿವಾರ್ಯವಿತ್ತಾದ್ರೂ ಅವರು ತಮ್ಮ ಕೊನೆಯ ಕ್ಷಣಗಳನ್ನು  ಮಠದಲ್ಲೇ  ಕಳೆಯಬೇಕೆಂಬ ಆಸೆಯಿತ್ತು. ಅಂದಹಾಗೇ ತಾವು ತಮ್ಮ ಇಹಲೋಕದ ಯಾತ್ರೆಯನ್ನು ಮುಕ್ತಾಯ ಮಾಡುತ್ತೀನಿ ಎಂಬ ಸೂಚನೆ ಸಿಕ್ಕಿತ್ತು ಎನಿಸುತ್ತದೆ. ಅದರಂತೇ ಆಸ್ಪತ್ರೆಯಲ್ಲಿ ನಾನಿರುವುದು ಬೇಡ, ನನ್ನನ್ನು ಮಠಕ್ಕೆ ಕರೆದುಕೊಂಡು ಹೋಗಿ. ನ್ನನ ಮಕ್ಕಳೊಂದಿಗೆ ಇರಲು ಬಿಡಿ ಎಂದು ಹೆಚ್ಚು ಒತ್ತಾಯ ಮಾಡಿದ್ದರಂತೆ. ಸಿಗಬೇಕಿದ್ದ ಎಲ್ಲಾ ಚಿಕಿತ್ಸೆಗಳನ್ನು ಮಠದಲ್ಲೇ ಕೊಡಿಸಲಾಗುತ್ತಿತ್ತು. ಅಲ್ಲಿ ಎಂದಿನಂತೆ ತಮ್ಮ ಕೊನೆಯ ಉಸಿರು ಇರುವವರೆಗೂ ತಮ್ಮ ನಿತ್ಯದ ಪೂಜೆ ಮಾಡುತ್ತಲೇ ಪ್ರಾಣ ತೊರೆದಿದ್ದಾರೆ. ಅವರ ಕೊನೆ ಆಸೆಯನ್ನುಈಡೇರಿಸಲು ಅವರು ಒತ್ತಾಯ ಮಾಡಿದ್ರಂತೆ.ಅದರಂತೇ ಮಠದಲ್ಲೇ  ಸಿದ್ದಗಂಗಾ ಮಠದ ಶ್ರೀಗಳು ತಮ್ಮ ಕೊನೆಯ ಕ್ಷಣಗಳನ್ನು ಅಲ್ಲಿಯೇ ಕಳೆದಿದ್ದಾರೆ.

Edited By

Kavya shree

Reported By

Kavya shree

Comments