ನಾಳೆ 3 ಗಂಟೆಯವರೆಗೆ ಸ್ವಾಮೀಜಿಯವರ ಸಾರ್ವಜನಿಕ ದರ್ಶನ :CM HDK

21 Jan 2019 5:57 PM | General
542 Report

ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ತುಮಕೂರು ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ 111 ವರ್ಷ ತುಂಬಿದ್ದು  ಕಳೆದ ತಿಂಗಳಷ್ಟೇ  ಚೆನ್ನೈನಲ್ಲಿ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿತ್ತು.  ಆದರೆ ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಮಠಾಧಿಪತಿಗಳಾದ ತ್ರಿವಿಧ  ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿಗಳು ಇಂದು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ… 12 ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ 'ಕಾಯಕವೇ ಕೈಲಾಸ' ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಡಾ|| ಶ್ರೀ.ಶಿವಕುಮಾರ ಸ್ವಾಮಿಗಳು ಇಂದು  ಲಿಂಗೈಕ್ಯರಾಗಿದ್ದಾರೆ. ಶ್ರೀ ಶಿವಕುಮಾರ ಸ್ವಾಮಿಗಳಿಗೆ 111 ವರ್ಷ ವಯಸ್ಸಾಗಿತ್ತು.

ರಾಜ್ಯದ ಸಿಎಂ ಕುಮಾರಸ್ವಾಮಿಯವರು ಕೂಡ ಇವರ ಸಾವಿಗೆ ಕಂಬನಿ ಮಿಡಿದಿದ್ದಾರೆ. ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದರು ಎಂದು ಹೇಳಲು ನೋವಿನಿಂದ ವಿಷಾಧಿಸುತ್ತೇನೆ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.. ಶ್ರೀಗಳಿಗೆ ಅತ್ಯುತ್ತಮ ಗೌರವ ಸಲ್ಲಿಸಬೇಕಾದದ್ದು ನಮ್ಮ ಕರ್ತವ್ಯ ಇದೆ. ಹಲವಾರು ಮಠಾಧೀಶರುಗಳು ಮತ್ತು ಕಿರಿಯ ಶ್ರೀಗಳು ಇದ್ದಾರೆ. ಯಡಿಯೂರಪ್ಪ, ಸೋಮಣ್ಣ ಎಲ್ಲರೊಂದಿಗೂ ಚರ್ಚಿಸಿದ ಬಳಿಕ ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಸರ್ಕಾರ ಮತ್ತು ಮಠದ ವತಿಯಿಂದ ಕಲ್ಪಿಸಲಾಗುವುದು ಎಂದು ತಿಳಿಸಿದರು. ನಾಳೆ ಮಧ್ಯಾಹ್ನ 4.30 ಕ್ಕೆ ಸ್ವಾಮೀಜಿಗಳ ಅಂತಿಮ ವಿಧಿವಿಧಾನ ನಡೆಯಲಿದೆ. ನಡೆದಾಡುವ ದೇವರು ಇನ್ನಿಲ್ಲ ಎಂಬ ಸುದ್ದಿ ಕೇಳಿ ರಾಜ್ಯವೇ ಶೋಕ ಸಾಗದಲ್ಲಿ ಮುಳುಗಿದೆ ಎಂದು ಕಂಬನಿ ಮಿಡಿದರು.. ರಾಜಕೀಯದ ಎಲ್ಲಾ ಗಣ್ಯರು ಕೂಡ ಸ್ವಾಮೀಜಿ ಯವರ ಸಾವಿಗೆ ಕಂಬನಿ ಮಿಡಿದಿದ್ದಾರೆ…

Edited By

Manjula M

Reported By

Manjula M

Comments