ನೆನ್ನೆ ಮಧ್ಯರಾತ್ರಿಯೇ ಮನೆಯಿಂದ ಎಲಿಮಿನೇಟ್ ಆದ ಬಿಗ್ ಬಾಸ್ ಸ್ಪರ್ಧಿ..!!

21 Jan 2019 4:07 PM | General
8981 Report

ಕನ್ನಡದ ಅ ತೀ ದೊಡ್ಡ ರಿಯಾಲಿಟಿ ಷೋಗಳಲ್ಲಿ ಬಿಗ್ ಬಾಸ್ ಕೂಡ ಒಂದು..  ಬಿಗ್ಬಾಸ್ ಸೀಸನ್-6 ನಿಂದ ಕಳೆದ  ಶನಿವಾರವಷ್ಟೆ ರಾಕೇಶ್ ನಾಮಿನೇಟ್ ಆಗಿದ್ದರು.. ಇನ್ನೊಂದು ವಾರ ಬಾಕಿ ಇರುವ ಕಾರಣದಿಂದ ಭಾನುವಾರದ ಮಧ್ಯರಾತ್ರಿ ಎಲಿಮಿನೇಷನ್​ ನಡೆದಿದ್ದು, ಧನರಾಜ್​  ಮನೆಯಿಂದ ಹೊರ ಬಂದಿದ್ದಾರೆ.. ಇದರಿಂದ ಅಭಿಮಾನಿಗಳಲ್ಲಿ ತೀವ್ರ ನೋವನ್ನು ಉಂಟು ಮಾಡಿದೆ. ಈ ಬಾರಿಯ ಬಿಗ್​ಬಾಸ್​ನಲ್ಲಿ ಧನರಾಜ್​ ಅವರೇ ವಿನ್​ ಆಗುತ್ತಾರೆ ಎನ್ನುವ ಆತ್ಮ ವಿಶ್ವಾಸವನ್ನು ಅವರ ಅಭಿಮಾನಿಗಳು ಇಟ್ಟುಕೊಂಡಿದ್ದರು..

ಆದರೆ ಬಿಗ್​ ಬಾಸ್​ ನಿರ್ಧಾರದಿಂದ ಫಿನಾಲೆ ತಲುಪುವ ಧನರಾಜ್​ ಆಸೆ ನುಚ್ಚು ನೂರಾಗಿದೆ..  ನವೀನ್​, ಕವಿತಾ, ಶಶಿ,, ರಶ್ಮಿ, ಆ್ಯಂಡಿ, ಧನರಾಜ್​ ಇವರಲ್ಲಿ ಧನರಾಜ್​ ಮತ್ತು ನವೀನ್​ ಫಿನಾಲೆಗೆ ಎಂಟ್ರಿ ಪಡೆದುಕೊಂಡಿದ್ದರು. ಆದರೆ ಇದೀಗ ಧನರಾಜ್​ ಮನೆಯಿಂದ ಎಲಿಮಿನೇಟ್​ ಆಗಿರುವ ಕಾರಣ ಉಳಿದಂತಹ ಐದು ಮಂದಿ ಮನೆಯಲ್ಲಿ ತಮ್ಮ ಆಟವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಮನೆಯಿಂದ ಯಾರು ಹೊರ ಬರುತ್ತಾರೆ ಎಂದು ಜನ ಕುತೂಹಲದಿಂದ ಕಾಯುತ್ತಿದ್ದಾರೆ. ಈ ಬಾರಿ ವಿನ್ನರ್ ಯಾರು ಎನ್ನುವುದನ್ನು ಯಾರು ಕೂಡ ಊಹಿಸಲು ಸಾಧ್ಯವಾಗುತ್ತಿಲ್ಲ..

Edited By

Manjula M

Reported By

Manjula M

Comments