ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀ ಸ್ವಾಮೀಜಿಗಳು ಇನ್ನಿಲ್ಲ...!!!

21 Jan 2019 2:17 PM | General
186 Report

 ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀ ಸಿದ್ದಗಂಗಾ ಶ್ರೀಗಳು ವಿಧಿವಶರಾಗಿದ್ದಾರೆ. ಕೆಲವು ದಿಗಳಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆದರೆ ಪವಾಡದ ರೀತಿಯಲ್ಲಿ ನಿನ್ನೆ ಮೊನ್ನಯತನಕವೂ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಆದರೆ ಇದೀಗ ಬಂದ ಮಾಹಿತಿ ಪ್ರಕಾರ ಶ್ರೀ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ.

ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ತುಮಕೂರು ಶ್ರೀ ಶಿವಕುಮಾರ  ಸ್ವಾಮೀಜಿ ಅವರಿಗೆ 111 ವರ್ಷ ತುಂಬಿದ್ದು  ಕಳೆದ ತಿಂಗಳಷ್ಟೇ  ಚೆನ್ನೈನಲ್ಲಿ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿತ್ತು. ಅವರು ಸದ್ಯಕ್ಕೆ ತುಮಕೂರಿನ ಮಠದಲ್ಲೇ  ಚಿಕಿತ್ಸೆ ಪಡೆಯುತ್ತಿದ್ದರು.ಈಗಾಗಲೇ ತುಮಕೂರಿನಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸಾಗರೋಪಾದಿಯಲ್ಲಿ ಭಕ್ತಸಾಗರ ಮಠದತ್ತ ಧಾವಿಸಿ ಬರುತ್ತಿದೆ.

Edited By

Kavya shree

Reported By

Kavya shree

Comments