ನಿಮ್ಮಲ್ಲಿ ಬಿಪಿಎಲ್ ಕಾರ್ಡ್ ಇದ್ಯಾ.. ಹಾಗಾದ್ರೆ ಉಚಿತವಾಗಿ ದೊರೆಯಲಿದೆ 35 ಲಕ್ಷ ವೆಚ್ಚ ತಗುಲುವ ಈ ಚಿಕಿತ್ಸೆ..!

19 Jan 2019 3:28 PM | General
1809 Report

ಕಾಯಿಲೆ ಎನ್ನುವುದು ಬಡವರು ಶ್ರೀಮಂತರು ಎನ್ನುವುದನ್ನು ನೋಡುವುದಿಲ್ಲ… ಯಾರಿಗೆ ಬರಲಿ ಆದ್ರೆ ಅದನ್ನು ಗುಣ ಪಡಿಸಿಕೊಳ್ಳುವುದು ಮುಖ್ಯ… ಆದರೆ ಬಡವರಿಗೆ ಕಾಯಿಲೆ ಬಂದರೆ ವಾಸಿ ಮಾಡಿಕೊಳ್ಳುವುದು ಕಷ್ಟ… ಅದರಲ್ಲೂ ಕ್ಯಾನ್ಸರ್’ನಂತಹ ಮಾರಕ ಕಾಯಿಲೆ ಬಂದರೆ ಬಡವರ ಜೀವಕ್ಕ ಕುತ್ತು ಬಂದಂತೆ… ಹಾಗಾಗಿಯೇ  ಬಡ ಕ್ಯಾನ್ಸರ್‌ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆಯಲ್ಲಿ ಸ್ಥಾಪನೆಯಾಗುತ್ತಿರುವ ದೇಶದ ಅತ್ಯಂತ ಬೃಹತ್‌ 'ಅಸ್ಥಿಮಜ್ಜೆ ಕಸಿ ಚಿಕಿತ್ಸಾ ಘಟಕ'ದ ಕಟ್ಟಡ ನಿರ್ಮಾಣಕ್ಕೆ ಶುಕ್ರವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಶಂಕು ಸ್ಥಾಪನೆ ಮಾಡಿದರು..

ಘಟಕ ಸ್ಥಾಪನೆ ಪೂರ್ಣಗೊಂಡ ನಂತರ ಖಾಸಗಿ ಆಸ್ಪತ್ರೆಗಳಲ್ಲಿ .35 ಲಕ್ಷದವರೆಗೆ ವೆಚ್ಚವಾಗುವ ದುಬಾರಿ ಅಸ್ಥಿಮಜ್ಜೆ ಕಸಿ ಚಿಕಿತ್ಸೆಯು ಕಿದ್ವಾಯಿಯಲ್ಲಿ ಬಿಪಿಎಲ್‌ ಕಾರ್ಡುದಾರರಿಗೆ ಉಚಿತವಾಗಿ ಹಾಗೂ ಇತರ ನಾಗರಿಕರಿಗೆ ಖಾಸಗಿ ಆಸ್ಪತ್ರೆಗಳ ದರದ ಶೇಕಡ 50ರಷ್ಟು ಕಡಿಮೆ ದರದಲ್ಲಿ ದೊರೆಯಲಿದೆ..ಬಿಪಿಎಲ್ ಕಾರ್ಡು ಇರುವವರಿಗೆ ಈ ಯೋಜನೆಯು ತುಂಬ ಅನುಕೂಲಕರವಾಗಿರುತ್ತದೆ.. ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ ಎಂದು ಕುಮಾರಸ್ವಾಮಿಯವರು ತಿಳಿಸಿದರು..

Edited By

Manjula M

Reported By

Manjula M

Comments