ಈ ನಾಲ್ಕು ಕಾರಣಗಳಿಂದ ದೂರವಿದ್ರೆ, ಖಂಡಿತಾ ಹಣ ತಾನಾಗಿಯೇ ನಿಮ್ಮಲ್ಲಿಗೆ ಬರುತ್ತದೆ...!!!

18 Jan 2019 11:31 AM | General
273 Report

ಇಂದಿನ ಪ್ರಪಂಚದಲ್ಲಿ ದುಡ್ಡೇ ಎಲ್ಲಾ…. ಎಷ್ಟೇ ಸಂಪಾದಿಸಿದ್ರೂ ನಮ್ಮ ಕೈಯಲ್ಲಿ ದುಡ್ಡು ನಿಲ್ಲುವುದಿಲ್ಲ. ಎಷ್ಟೇ ಕಷ್ಟಪಟ್ಟರೂ ನಾವು ಶ್ರೀಮಂತರಾಗುವುದೇ ಇಲ್ಲ. ಬೇರೆಯವರು ನಮ್ಮ ಕೈ ಕೆಳಗೆ ದುಡಿಯುತ್ತಿರುತ್ತಾರೆ, ನೋಡು ನೋಡುತ್ತಿದ್ದಂತೇ ನಮಗಿಂತಲೂ ಚೆನ್ನಾಗಿ ಲೈಫ್ ಲೀಡ್ ಮಾಡ್ತಿರುತ್ತಾರೆ. ಆದರೆ ಯಾಕೆ..? ನಾನು ಎಷ್ಟು ದುಡಿದ್ರೂ ಒಂದು ಪೈಸೆ ಉಳಿಯಲ್ಲ. ಅಲ್ಲದೇ ಏನೂ ಸಂಪಾದಿಸಲಾಗುತ್ತಿಲ್ಲ. ಎಂಬ ಕೊರಗು ನಮಗೂ ಇದೆ ಅಲ್ಲವೇ. ಈ ಕೆಳಗಿರುವ ನಾಲ್ಕು ಕಾರಣಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ. ಲಕ್ಷ್ಮಿ ನಮ್ಮಲ್ಲಿಯೇ ಉಳಿಯುವಂತೆ ಮಾಡಿಕೊಳ್ಳಿ.

ದುಡ್ಡು ಮಾಡಲು ಎಲ್ಲೆಲ್ಲೋ ಹೋಗಿ ದೇವರನ್ನು ಮಾಡ್ತೇವೆ ಆದರೆ ಯಾವುದರಿಂದನೂ ಪ್ರಯೋಜನವಾಗಲ್ಲ. ಆದರೆ ನಮ್ಮ ಕೈಯಲ್ಲಿ ಯಾಕೆ ದುಡ್ಡು ಉಳಿಯುವುದಿಲ್ಲ ಎಂಬುದನ್ನು ಎಂದಾದರು ಯೋಚಿಸಿದ್ದೀರಾ…? ಅಂದಹಾಗೇ ಈ ನಾಲ್ಕು ಕಾರಣಗಳನ್ನು ಸ್ವಲ್ಪ ಗಮನದಲ್ಲಿಡಿ. ಈ ಕಾರಣಗಳನ್ನು ಅವಾಯ್ಡ್ ಮಾಡಿದ್ರೆ ಖಂಡಿತಾ ನಿಮ್ಮ ದುಡ್ಡು , ಅಥವಾ ಲಕ್ಷ್ಮಿ ನಿಮ್ಮಲ್ಲಿಯೇ ನೆಲೆಯೂರುತ್ತಾಳೆ. ಚಾಣಕ್ಯ ಹೇಳುವ ಪ್ರಕಾರ ನಾಲ್ಕು ಕಾರಣಗಳಿಂದ ಲಕ್ಷ್ಮಿ ನಿಮ್ಮೊಂದಿಗೆ ಇರುವುದಿಲ್ಲ….

  • ಯಾರ ಮನೆಯಲ್ಲಿ ಅಜ್ಞಾನಿಗಳ ಸನ್ಮಾನವಾಗುತ್ತದೆಯೋ... ಮೂರ್ಖರ ಜನರ ಸನ್ಮಾನವಾಗುತ್ತದೆಯೋ…ಅಲ್ಲಿ ಕಂಡಿತಾ ಧನಲಕ್ಷ್ಮಿ ಇರುವುದಿಲ್ಲ.  ಇಲ್ಲಿ ಮೂರ್ಖರು ಅಂದರೆ ಮಾಟ ಮಂತ್ರ ಮಾಡುವವರು, ಭವಿಷ್ಯ ಹೇಳುವವರು. ಯಾರು ಈ ಇವರ ಮಾತಿನ ಮೇಲೆ ನಿಗಾವಹಿಸಿದ್ರೆ, ಅವರ ಹೇಳುವ ಕೆಲಸ ಮಾಡಿದ್ರೆ ಖಂಡಿತಾ ಅವರಲ್ಲಿಗೆ ಲಕ್ಷ್ಮಿ ಬರುವುದಿಲ್ಲ. ಅವರ ಮಾತಿನಂತೇ , ಅವರು ಹೇಳಿದವರನ್ನ ಪೂಜೆ ಮಾಡುವುದು, ಅವರು ಹೇಳುವ ಕೆಲಸ ಮಾಡಿದ್ರೆ ಖಂಡಿತಾ ಲಕ್ಷ್ಮಿ ಖರ್ಚಾಗುತ್ತಾಳೆ. ಅವರ ಮಾತಿನಲ್ಲಿ ಅರ್ಥವಿರುವುದಿಲ್ಲ, ಅಥವಾ ಶಾಶ್ವತವಾದ ಆಧಾರ ಇರುವುದಿಲ್ಲ. ಯಾರ, ಮನೆಯಲ್ಲಿ ಜ್ಞಾನಿ ವ್ಯಕ್ತಿಯ ಪೂಜೆ ಆಗುತ್ತದೆಯೋ. ಸಾಧಕರ ಮಾರ್ಗದರ್ಶನ ಪಡೆದು ಕೆಲಸ ಮಾಡುತ್ತಾರೋ, ಅವರನ್ನು ಅನುಸರಿಸುತ್ತಾರೋ ಅಲ್ಲಿ ಖಂಡಿತಾ ಲಕ್ಷ್ಮಿ ಬರುತ್ತಾಳೆ. ಯಾವಾಗಲೂ ಅಲ್ಲಿಯೇ ನೆಲೆಸುತ್ತಾಳೆ.
  • ಚಾಣಕ್ಯನ ಪ್ರಕಾರ ಎರಡನೇ ಕಾರಣ ದುಡ್ಡಿನ ಸಂಗ್ರಹ. ಯಾವ ಮನೆಯಲ್ಲಿ ದುಡ್ಡಿನ ಸಂಗ್ರಹ ಮಾಡುತ್ತಾರೋ ಅಲ್ಲಿ ಕಷ್ಟಕ್ಕೆ ಬೆಲೆ ಇರುತ್ತದೆ. ಯಾರ ಮನೆಯಲ್ಲಿ ಉಳಿತಾಯದ ವ್ಯಾಲ್ಯು ಗೊತ್ತಿರಲ್ವೋ ಅವರು ಕಷ್ಟಕ್ಕೆ ಸಿಲುಕುತ್ತಾರೆ. ಕಷ್ಟ ಬಂದಾಗ ಅಷ್ಟೇ ಕುಗ್ಗಿ ಹೋಗಿಬಿಡುತ್ತಾರೆ. ಆ ವ್ಯಕ್ತಿಯ ಮನಸ್ಸು ಬರೇ ಖರ್ಚು ಮಾಡುವ ಮನಸ್ಥಿತಿ ಇರುತ್ತೆ. ಅಲ್ಲದೇ ಯಾವ ಸಣ್ಣ ಕಷ್ಟವನ್ನು ಕೂಡ ಅವರು ಎದುರಿಸಲು ಆಗಲ್ಲ. ಅವರ ಮನಸ್ಥಿತಿ ಕೂಡ ಹಾಗೇ ಇರುತ್ತದೆ. ನಾಳಿನ ಚಿಂತೆಯಲ್ಲಿ ಇರುವುದಕ್ಕಿಂತ ಇಂದೇ ನಾವು ಎಂಜಾಯ್ ಮಾಡೋಣ ಅನ್ನೋವಂತಹವರು ಎಂದಿಗೂ ಬೆಳೆಯಲಾಗುವುದೇ ಇಲ್ಲ. ಅವರ ಬಳಿ ಹಣ ನಿಲ್ಲಲ್ಲ.
  • ಚಾಣಕ್ಯ ಹೇಳುವ ಪ್ರಕಾರ ಮೂರನೇ ಕಾರಣ ಗಂಡ-ಹೆಂಡತಿ ಮಧ್ಯೆ ಜಗಳ. ಸತಿ-ಪತಿಗಳು ಜಗಳ ಮಾಡಿದ್ರೆ ಅಲ್ಲಿ ಲಕ್ಷ್ಮಿ ಇರುವುದಿಲ್ಲವಂತೆ. ಸದಾ ಜಗಳ ಮಾಡುತ್ತಿದ್ದರೇ ಗಂಡ ಟೆನ್ಶನ್ ನಿಂದ ಬಾರ್ ಗೆ ಹೋಗುತ್ತಾನೆ, ಹೆಂಡತಿ ಜ್ಯೋತಿಷಿಗಳ ಹತ್ತಿರ ಹೋಗುತ್ತಾರೆ. ಇಲ್ಲಿಯೇ ಇವರ ಹಣ ಖರ್ಚಾಗುತ್ತದೆ. ಮತ್ತೆಲ್ಲಿಂದ ಬಂತು ನಿಮ್ಮ ಸಂಪಾದನೆಯು ಹಣ. ಮನೆಯಲ್ಲಿ ಮಕ್ಕಳಿದ್ದರೆ ಅವರ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಯಾವುದಾದರು ವಿಷಯಕ್ಕೆ ಸದಾ ಮನೆಯಲ್ಲಿ ಕಿರಿಕಿರಿ ಮಾಡುತ್ತಿದ್ದರೆ ಅಲ್ಲಿಂದ ಲಕ್ಷ್ಮಿ ಎದ್ದು ಹೋಗುತ್ತಾಳಂತೆ.
  • ಇನ್ನು ಚಾಣಕ್ಯ ಹೇಳುವ ಪ್ರಕಾರ ನಾಲ್ಕನೆಯ ರೀಸನ್ : ನಮ್ಮ ಹಣ ಕೆಟ್ಟ ಜನರ ಕೈಗೆ ಹೋದರೆ, ಅಥವಾ ಶತೃಗಳ ಕೈ ಸೇರಿದ್ರೆ ಖಂಡಿತಾ ನಾವು ಮೇಲೇಳಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಹಣ  ನಿಮ್ಮ ಕೈ ಸೇರಬೇಕಾದ್ರೆ ದಯವಿಟ್ಟು ಈ ನಾಲ್ಕು ಕಾರಣಗಳನ್ನು ಪಾಲಿಸಬೇಡಿ.

Edited By

Kavya shree

Reported By

Kavya shree

Comments