ಅನಾಥ ಕಂದಮ್ಮನಿಗೆ ಆ ಪೊಲೀಸ್ ಪೇದೆ ಮಾಡಿದ್ದೇನು ಗೊತ್ತಾ...? ಮನಕಲಕುವ ಸ್ಟೋರಿ ಇಲ್ಲಿದೆ...

17 Jan 2019 1:07 PM | General
1148 Report

ಪೊಲೀಸರನ್ನು ಆರಕ್ಷಕರು ಎಂದು ಕೂಡ ಕರೆಯುತ್ತೇವೆ. ಸಮಾಜದಲ್ಲಿನ ಸ್ವಾಸ್ಥ್ಯ ಕಾಪಾಡುವಲ್ಲಿ ಪೊಲೀಸರದ್ದು ಮೇಲು ಗೈ. ಪೊಲೀಸ್ ಪೇದೆಯೊಬ್ಬರು ಮಾನವೀಯತೆ ಮೆರೆದಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಮಹಿಳಾ ಪೊಲೀಸ್ ಪೇದೆಯೊಬ್ಬರು ತಂದೆ ತಾಯಿ ಯಾರು ಇಲ್ಲದ ಆ ಅನಾಥ ಮಗುವಿಗೆ ಎದೆಹಾಲುಣಿಸಿ, ತಾಯಿ ಮಮತೆ ತೋರಿ ಮಾನವೀಯತೆ ಮೆರೆದಿದ್ದಾರೆ.

ಯಲಹಂಕ ಠಾಣೆಯ ಸಂಗೀತ ಹಳಿಮನಿ ಎಂಬ ಮಹಿಳಾ ಪೊಲೀಸ್ ಪೇದೆಯೇ ಮಾನವೀಯತೆ ಮೆರೆದಿರುವ ತಾಯಿ.  ಬುಧವಾರ ಜಿಕೆವಿಕೆ ಉದ್ಯಾನವನದ ಬಳಿ ಅನಾಥ ಹೆಣ್ಣು ಮಗುವೊಂದು ಪತ್ತೆಯಾಗಿತ್ತು. ಕೂಡಲೇ ಅಲ್ಲೇ ಇದ್ದ ಸಿವಿಲ್ ಡಿಫೆನ್ಸ್ ಮಂದಿ ಮಗುವನ್ನ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಹಾಲು ಹಾಗೂ ಗ್ಲೂಕೋಸ್ ಇಲ್ಲದೆ ಮಗುವಿನ ಶಕ್ತಿ ಕುಂದಿದ್ದು, ಹೀಗಾಗಿ ಸ್ಥಳದಲ್ಲೆ ಇದ್ದ ಪೇದೆ ಸಂಗೀತ ಕೂಡಲೇ ಮಗುವಿಗೆ ಹಾಲು ಉಣಿಸಿ ಸಾರ್ಥಕತೆ ಮೆರೆದಿದ್ದಾರೆ. ಪೊಲೀಸ್ ಪೇದೆಯ ಈ ಮಾನವೀಯತೆಯನ್ನು ನೋಡಿ ಪೊಲೀಸ್ ಸಿಬ್ಬಂದಿ ವರ್ಗ ಸಂಗೀತ ಅವರನ್ನು ಶ್ಲಾಘಿಸಿದ್ದಾರೆ. ಮಗುವಿನ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು ವಾಣಿ ವಿಲಾಸ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.  ಆ ನಂತರ ಮಹಿಳಾ ಮತ್ತು ಮ್ಕಕಳ ಕಲ್ಯಾಣ ಇಲಾಖೆಗೆ  ಬಿಡಲಾಗುವುದು ಎಂದು ತಿಳಿಸಿದ್ದಾರೆ.

Edited By

Kavya shree

Reported By

Kavya shree

Comments