ಈ ಮಹಿಳೆಗಿದೆ ವಿಚಿತ್ರ ಖಾಯಿಲೆ..!!  ಈ ಮಹಿಳೆಗೆ ಪುರುಷರ ಧ್ವನಿ ಮಾತ್ರ ಕೇಳಿಸುವುದೇ ಇಲ್ಲವಂತೆ…!

16 Jan 2019 4:25 PM | General
212 Report

ಮನುಷ್ಯ ಅಂದ ಮೇಲೆ ಸಾಕಷ್ಟು ಸಮಸ್ಯೆಗಳು ಬರುತ್ತಲೆ ಇರುತ್ತವೆ.. ಒಂದಲ್ಲಾ ಒಂದು ಸಮಸ್ಯೆಗಳು ಇದ್ದೆ ಇರುತ್ತವೆ.. ಕೆಲವರಿಗೆ ಮಾತು ಬರದೇ ಇರಬಹುದು, ಇನ್ನೂ ಕೆಲವರಿಗೆ ನಡೆಯುವುದಕ್ಕೆ ಸಾಧ್ಯವಿರುವುದಿಲ್ಲ, ಇನ್ನೂ ಕೆಲವರಿಗೆ ಕೈ ಇರುವುದಿಲ್ಲ… ಇನ್ನೂ ಕೆಲವರಿಗೆ ಕಿವಿ ಕೇಳಿಸುವುದಿಲ್ಲ.. ಹೀಗೆ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಲೆ ಇರುತ್ತವೆ.. ಕಿವಿ ಕೇಳದೆ ಇರಬಹುದು… ಕಿವಿ ಕೇಳದೆ ಇರುವುದಕ್ಕೆ ನಾನಾ ಕಾರಣಗಳು ಇರುತ್ತವೆ.. ಕಿವಿ ಕೇಳದೆ ಇರುವಂತಹ ಜನರಿಗೆ ಸಾಮಾನ್ಯವಾಗಿ ಯಾವುದೆ ಶಬ್ದಗಳು ಕೂಡ ಕೇಳಿಸುವುದಿಲ್ಲ.. ಆದರೆ ಇಲ್ಲಿರುವ ಆಕೆಗೆ ಪುರುಷರ ಧ್ವನಿ ಮಾತ್ರ ಕೇಳುವುದಿಲ್ಲವಂತೆ…

ಬೆಳಗ್ಗೆ ಎದ್ದ ವೇಳೆ ಈ ಮಹಿಳೆಗೆ ತನ್ನ ಸಂಗಾತಿ ಮಾತನಾಡುತ್ತಿರುವುದು ಕೇಳಿಸುತ್ತಿರಲೇ ಇಲ್ಲವಂತೆ... ಇದು ಕೇಳೋದಕ್ಕೆ ತುಂಬಾ ತಮಾಷೆ ಅನಿಸಬಹುದು ನಿಮಗೆ…  ಆದರೆ ಇದು ನಿಜವಾಗಿ ನಡೆದಿರುವಂತಹ ಘಟನೆ. ಆ ಮಹಿಳೆಗೆ ಪುರುಷರ ಸ್ವರ ಮಾತ್ರ ಕೇಳುತ್ತಾ ಇರಲಿಲ್ಲ. ತುಂಬಾ ಒತ್ತಡಕ್ಕೆ ಒಳಗಾಗಿದ್ದ ಕಾರಣ ಮತ್ತು ನಿದ್ರೆ ಕೂಡ ಸರಿಯಾಗಿ ಮಾಡದೆ ಇರುವ ಕಾರಣದಿಂದಾಗಿ ಆಕೆಯ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟಾಗಿತ್ತು ಮತ್ತು ಆಕೆಗೆ ತುಂಬಾ ಅಪರೂಪದ ಕಿವಿ ಕೇಳದ ಸಮಸ್ಯೆಯು ಕೂಡ ಕಾಡಿತ್ತು. ಬೆಳಗ್ಗೆ ಎದ್ದು ತನ್ನ ಬಾಯ್ ಫ್ರೆಂಡ್ ಏನೋ ಮಾತನಾಡುತ್ತಿದ್ದಂತೆ ಆದರೆ ಆಕೆಗೆ ಏನು  ಕೇಳಿಸುತ್ತಾ ಇರಲಿಲ್ಲವಂತೆ..ಇಎನ್ ಟಿ ತಜ್ಞರನ್ನು ಭೇಟಿಯಾದ ವೇಳೆ ಆಕೆಗೆ ವೈದ್ಯರ ಮಾತುಗಳು ಸರಿಯಾಗಿ ಕೇಳು...ಆದರೆ ಪುರುಷ ರೋಗಿಗಳು ವೈದ್ಯರ ಕೋಣೆಗೆ ಪ್ರವೇಶ ಮಾಡಿದ ವೇಳೆ ಆಕೆಗೆ ಅವರು ಏನು ಮಾತನಾಡುತ್ತಿದ್ದರು ಎಂದು ಕೇಳುತ್ತಿರಲಿಲ್ಲ.ಆ ಮಹಿಳೆಯ ಪರಿಸ್ಥಿತಿ ಬಗ್ಗೆ ತುಂಬಾ ಗೊಂದಲಕ್ಕೆ ಒಳಗಾದ ವೈದ್ಯರು, ಆಕೆ `ರಿವರ್ಸ್ ಸ್ಲೊಪೆ ಹಿಯರಿಂಗ್ ಲಾಸ್' ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಕಂಡುಕೊಂಡರು. ಈ ಸಮಸ್ಯೆ ಇದ್ದರೆ ಆಕೆ ಕೇವಲ ಹೆಚ್ಚು ಆವರ್ತನದ ಶಬ್ದಗಳನ್ನು ಮಾತ್ರ ಕೇಳಬಲ್ಲರು. ಈ ಪರಿಸ್ಥಿತಿಯು 13 ಸಾವಿರದಲ್ಲಿ ಒಬ್ಬರಿಗೆ ಮಾತ್ರ ಬರುವುದು ಮತ್ತು ಇದರಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.. ಒಟ್ಟಾರೆಯಾಗಿ ಈ ಮಹಿಳೆ ಪುಣ್ಯವಂತೆ ಅನ್ನಿಸುತ್ತದೆ.. ಪುರುಷರ ಧ್ವನಿ ಕೇಳದೆ ಇರೋ ಆಕೆಗೆ ಪುಣ್ಯವಂತೆ…

Edited By

Manjula M

Reported By

Manjula M

Comments