ಸಂಕ್ರಾಂತಿ ಹಬ್ಬದಿಂದಲೇ ಶುರುವಾಯ್ತು ಈ ಆರು ರಾಶಿಗಳಿಗೆ ಗುಡ್ ಲಕ್...!!!

14 Jan 2019 2:07 PM | General
3753 Report

ಮಕರ ಸಂಕ್ರಾಂತಿ ಆರಂಭವಾಗಿದೆ.  ಕ್ಯಾಲೆಂಡರ್ ರೂಲ್ಸ್ ಪ್ರಕಾರ ಮೊದಲ ಹಬ್ಬ ಸಂಕ್ರಾಂತಿಗೆ ಕ್ಷಣಗಣನೆ ಆರಂಭವಾಗಿದೆ. ರಾಶಿ, ಭವಿಷ್ಯ ನಂಬುವವರಿಗೆ ಈ ಬಾರಿ ಗುಡ್ ನ್ಯೂಸ್. ಸಂಕ್ರಾಂತಿ ಹಬ್ಬದ ನಂತರ ಆರು ರಾಶಿಗಳಿಗೆ ಶುಕ್ರದೆಸೆ ಆರಂಭವಾಗುತ್ತದೆಯಂತೆ. 2019 ರ ಲೆಕ್ಕಾಚಾರದ ಪ್ರಕಾರ ಈ ಆರು ರಾಶಿಗಳಿಗೆ ಶುಭಫಲ ಸಿಗುತ್ತವೆ. 2018 ರಲ್ಲಿ ಏನೇ ಕಷ್ಟ ಸುಖ ಅನುಭವಿಸಿದ್ದೂ ಮುಗಿದ ಅಧ್ಯಾಯ.2019 ರಲ್ಲಿ ಒಂದೆರಡು ರಾಶಿಗಳಿಗೆ ಕಂಟಕ ಬಿಟ್ಟರೆ ಉಳಿದ ಹತ್ತು ರಾಶಿಗಳಿಗೆ ಶುಭಫಲ. ಅದರಲ್ಲೂ ಈ ಆರು ರಾಶಿಗಳಿಗೆ ಈ ವರ್ಷ ಻ದೃಷ್ಟವೋ ಅದೃಷ್ಟ. ಅವುಗಳು ಯಾವುವು ಅಂದರೆ….

ಮೊದಲ ಅದೃಷ್ಟ ರಾಶಿ ಮೇಷ : ಈ ರಾಶಿಯವರು ಗೊಂದಲದಲ್ಲಿಯೇ ಗದ್ದಲ ಮಾಡಿಕೊಂಡು ಜೀವನ ಮಾಡಿರುತ್ತಾರೆ. ಈ ವರ್ಷ ಈ ರಾಶಿಯವರಿಗೆ ಅರಸರಾಗುವ ಫಲ ವಿರುತ್ತದೆ. ಈ ವರ್ಷ ಏನೇ ಕಾರ್ಯ ಮಾಡಿದ್ರೂ ಸಕ್ಸಸ್ ಗ್ಯಾರಂಟಿ. ಸಂಕಲ್ಪ ಮಾಡಿದ್ರೇ ಸಿದ್ಧಿ ಗ್ಯಾರಂಟಿ ವಿದ್ಯಾರ್ಥಿಗೆ ಶುಭಫಲ.

 ಮಿಥುನ : ಈ  ರಾಶಿಯವರಿಗೆ ಈ ವರ್ಷ ಶುಭಫಲ. ಮುಟ್ಟಿದೆಲ್ಲಾ ಚಿನ್ನವಾಗುತ್ತದೆ. ಹಾಗಂತಾ ಕಲ್ಲು ಕಬ್ಬಿಣ ಮುಟ್ಟಿದ್ದರೆ ಶುಭ ಅಂತಲ್ಲಾ. ಬ್ಯುಸಿನೆಸ್, ಮನೆ, ಸೈಟು ಮದುವೆ ಎಲ್ಲವೂ ಶುಭವಾಗುತ್ತದೆ. ಒಳ್ಳೆಯ ದಾರಿಯಲ್ಲಿ ಪ್ರಯತ್ನ ಮಾಡಿದ್ರೇ ಈ ರಾಶಿಯವರಿಗೆ ಶುಕ್ರದೆಸೆ ಹೊಡೆಯುತ್ತದೆ.

ಕಟಕ : ಎಲ್ಲಾ ಸಂಕಟಗಳು ದೂರಾವಾಗಿ ಅದೃಷ್ಟ ಒಲಿದು ಬರುತ್ತವೆ. ನಿಮ್ಮ ವಿರುದ್ಧ ಯಾವ ಪಿತೂರಿ ನಡೆದ್ರೂ ನೀವು ಜಯಶೀಲರಾಗುತ್ತೀರಿ. ಆದರೆ ಒಳ್ಳೆ ದಾರಿಯಲ್ಲಿದ್ರೆ ಮಾತ್ರ.

ಕನ್ಯಾ : ಯುಗಾದಿ ನಂತರ ಈ ರಾಶಿಯವರಿಗೆ ಭಾಗ್ಯದ ಬಾಗಿಲು ತಟ್ಟಲಿದೆ. ನೆಮ್ಮದಿ ಜೀವನ ನಡೆಸುವಿರಿ. ದೈಹಿಕ –ಮಾನಸಿಕ ಚಿಂತೆ ದೂರವಾಗುತ್ತದೆ. ಹಣಕಾಸಿನ ಸಮಸ್ಯೆ ಇರುವುದಿಲ್ಲ.

ಮಕರ : ಈ ರಾಶಿಯವರು ನೇರ-ನಿಷ್ಠುರವಾದಿಗಳು. 2018 ಮಕರ ರಾಶಿಯವರಿಗೆ ಶುಭಫಲ ಇತ್ತು.ದುಡುಕಿನ ಸ್ವಭಾವ ಬಿಟ್ಟರೇ ಈ ವರ್ಷ ಬಹಳ ಎತ್ತರಕ್ಕೆ ಬೆಳೆಯುತ್ತಾರೆ. ಈ ವರ್ಷವು ಧನಲಕ್ಷ್ಮಿ ಒಲಿದು ಬರುತ್ತಾಳೆ.  ಮದುವೆ- ಮಕ್ಕಳ ಯೋಗವಿದೆ. ಆರೋಗ್ಯದ ಕಡೆ ಗಮನ ಕೊಡಬೇಕು. ದುಡುಕಿನ ನಿರ್ಧಾರ ಮಾಡಬಾರದು. ಈ ವರ್ಷ ರಾಜಕೀಯವಾಗಿ ಎತ್ತರಕ್ಕೆ ಬೆಳೆಯುತ್ತಾರೆ.

ಮೀನ : ನೋವನ್ನುನುಂಗಿ ಜೀವನ ಮಾಡುವ  ಈ ರಾಶಿಯವರಿಗೆ ಸಕಲ ಐಶ್ವರ್ಯ ಜೊತೆಗೆ ನೆಮ್ಮದಿ ಭಾಗ್ಯ ಸಿಗಲಿದೆ. ಸಂಕ್ರಾಂತಿ ನಂತರ ಶುಕ್ರದೆಸೆ ಆರಂಭವಾಗುತ್ತದೆ. ಅನುಮಾನ ಬಿಟ್ಟು ಜಾಗರೂಕತೆಯಿಂದ ನಡೆದ್ರೆ ಈ ವರ್ಷ ಸಿಕ್ಕಾಪಟ್ಟೆ ಖುಷಿಯಲ್ಲಿರುತ್ತೀರಿ.

Edited By

Kavya shree

Reported By

Kavya shree

Comments