ರಾಜ್ಯ ಸರ್ಕಾರದಿಂದ ನಿರ್ಮಾಣವಾಗ್ತಿದೆ ಎದೆ ಹಾಲಿನ ಬ್ಯಾಂಕ್..!! ಎಲ್ಲಿ ಗೊತ್ತಾ..?

14 Jan 2019 9:34 AM | General
480 Report

ನಮ್ಮ ಫ್ಯಾಷನ್ ಯುಗದಲ್ಲಿ ಎಲ್ಲವೂ ಕೂಡ ರೆಡಿಮೆಡ್ ಆಗಿ ಸಿಗುವಂತೆ ಆಗಿಬಿಟ್ಟಿದೆ.. ಎಲ್ಲಾ ರೀತಿಯ ವಸ್ತುಗಳನ್ನು, ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಾರೆ. ಆದರೆ  ಕೆಲವೊಂದು ಮಾತ್ರ ಎಷ್ಟು ದುಡ್ಡು ಕೊಟ್ಟರು ಕೂಡ ಸಿಗುವುದಿಲ್ಲ,,, ಅದರಲ್ಲಿ ತಾಯಿಯ ಎದೆಹಾಲು ಕೂಡ ಒಂದು.. ಎದೆ ಹಾಲು ಎಲ್ಲಿಯೂ ಕೂಡ ಸಿಕ್ಕುವುದಿಲ್ಲ..  ಇದೀಗ ಉದ್ಯಾನನಗರಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಎದೆ ಹಾಲು ಬ್ಯಾಂಕ್ ಸ್ಥಾಪನೆಗೆ ಸಿದ್ಧತೆಯನ್ನು ನಡೆದಿದೆ ಎನ್ನಲಾಗಿದೆ. ತಾಯಿ ಎದೆ ಹಾಲು ಕೊರತೆಯಿಂದ ಸಾವಿಗೀಡಾಗುವ ಮಕ್ಕಳ ರಕ್ಷಣೆಗೆ ವಾಣಿವಿಲಾಸ್ ಆಸ್ಪತ್ರೆ ಯಲ್ಲಿ ಸ್ಥಾಪನೆಯಾಗಲಿರುವ ಎದೆ ಹಾಲು ಬ್ಯಾಂಕ್ ಹಾಲಿನ ಕೊರತೆ ಎದುರಿಸುತ್ತಿರುವ ಮಕ್ಕಳಿಗೆ ವರದಾನವಾಗಲಿದೆ.

ಏನಿಲ್ಲ ಎಂದರೂ ಸತತ ಮೂರು ವರ್ಷದಿಂದಲೂ ಕೂಡ ಎದೆ ಹಾಲು ಬ್ಯಾಂಕ್ ಸ್ಥಾಪನೆಯ ಪ್ರಕ್ರಿಯೆಯು ನಡೆಯುತ್ತಿದೆ. ಕಳೆದ ವರ್ಷ ೩೫ ಲಕ್ಷ ರೂ ಮಂಜೂರಾಗಿದ್ದು, ಪರಿಕರಗಳಿಗೆ ಅಗತ್ಯವಿರುವ ೯೦ ಲಕ್ಷ ರೂ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸದ್ಯದಲ್ಲೇ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಹೀಗಾಗಿ ಕೆಲವೇ ತಿಂಗಳುಗಳಲ್ಲಿ ಕೇಂದ್ರ ಪ್ರಾರಂಭವಾಗಲಿದೆ. ತಾಯಿ ಎದೆಹಾಲು ಸಂರಕ್ಷಣೆ ಮಾಡುವುದಕ್ಕೆ ಸಾಕಷ್ಟು ಮುತುವರ್ಜಿ ವಹಿಸಬೇಕು. ಹೀಗಾಗಿ ಕೆಲಸ ನಿದಾನವಾದರೂ ಎಲ್ಲಾ ಸಿದ್ಧತೆಯನ್ನೂ ಸುಸಜ್ಜಿತವಾಗಿ ಮಾಡಲಾಗುತ್ತಿದೆ ಎಂದು ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಎಂ.ಎಸ್.ಗೀತಾ ಶಿವಮೂರ್ತಿ ಹೇಳಿದ್ದಾರೆ. ನಗರದಲ್ಲಿ ಈಗಾಗಲೇ ಹಲವು ಖಾಸಗಿ ಎದೆ ಹಾಲಿನ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿವೆ. ವಾಣಿವಿಲಾಸ್ ಹಾಗೂ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿನ ನವಜಾತ ಶಿಶುಗಳಿಗೆ ಅಗತ್ಯವಿರುವ ಎದೆ ಹಾಲನ್ನೂ ಅದೇ ಕೇಂದ್ರಗಳಿಂದ ತರಲಾಗುತ್ತಿದೆ. ಈ ಕೆಲಸದಿಂದ ಆಗ ತಾನೆ ಹುಟ್ಟಿದ ಮಕ್ಕಳಿಗೆ ಅನುಕೂಲವಾಗುತ್ತದೆ.

Edited By

Manjula M

Reported By

Manjula M

Comments