ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು..?

12 Jan 2019 12:19 PM | General
1532 Report

ನಾನು ಚಿತ್ರರಂಗ ಬಿಡುವುದಿಲ್ಲ. ಕಲೆ ನನ್ನ ಉಸಿರು. ಆದರೆ ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದರ್ಥವಲ್ಲ. ಎರಡು ಜೊತೆ ಜೊತೆಯಲ್ಲಿ ಸಾಗುತ್ತಿವೆ. ಒಂದು ಕಡೆ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೇ ಅನೇಕ ಸ್ಥಳೀಯ ಜನಪ್ರತಿನಿಧಿಗಳು ನನ್ನನ್ನು ಭೇಟಿ ಮಾಡಿ, ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿಕೊಂಡಿದ್ದಾರೆ. ಇದೆಲ್ಲ ದೊಡ್ಡವರು ತೆಗೆದುಕೊಳ್ಳುವ ತೀರ್ಮಾನ. ನನ್ನದೇನು ಇಲ್ಲ. ಆದರೆ ಆಸಕ್ತಿ ಇದೆ.ಈ ಬಗ್ಗೆ ವರಿಷ್ಠರು, ರಾಜ್ಯಾಧ್ಯಕ್ಷರು, ಪಕ್ಷದ ಮುಖಂಡರು ತೀರ್ಮಾನ ಮಾಡಬೇಕು. ಇದು ನನ್ನ ತೀರ್ಮಾನ ಅಲ್ಲ, ನನ್ನ ಪಕ್ಷದ ತೀರ್ಮಾನ ಎಂದು ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಜಿಲ್ಲೆಯ ಕೆ.ಎಂ.ದೊಡ್ಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಚಿತ್ರ ಸೀತಾರಾಮ ಕಲ್ಯಾಣ ಜನವರಿ 25 ರಂದು ರಿಲೀಸ್ ಇದೆ. ಹೀಗಾಗಿ ಪ್ರಮೋಷನ್‌ಗೆ ಬಂದಿದ್ದೇನೆ. ರಾಜಕೀಯಕ್ಕೆ ಬಂದರೆ ಚಿತ್ರರಂಗ, ರಾಜಕೀಯ ಎರಡರಲ್ಲೂ ಇರುತ್ತೇನೆ. ಮುಖ್ಯಮಂತ್ರಿ ಮಗನಾಗಿ ನನಗೆ ಜವಾಬ್ದಾರಿ ಇದೆ. ಮದುವೆಯಾದ ಗಂಡ ಹೆಂಡತಿಯ ನಡುವೆಯೇ ಅಪಸ್ವರ ಇರುತ್ತೆ. ಆದ್ರೆ ಸಮ್ಮಿಶ್ರ ಸರ್ಕಾರದಲ್ಲಿ ಇದೆಲ್ಲಾ ಮಾಮೂಲು. ಯಾರೀ ಜಗಳ ಆಡದಂತೇ ಇರುವುದು. ನಾವುಗಳೇನು ದೇವರೇ ...ಎಲ್ಲವೂ ತಟಸ್ಥವಾಗಿರುವುದಕ್ಕೆ. ಇನ್ನು ಈ 5 ವರ್ಷ ಇರುತ್ತೆ. ಜನಗಳಿಗಾಗಿ ಸರ್ಕಾರ ಇರಬೇಕು. ರೈತರಿಗಾಗಿ ನಮ್ಮ‌ ಸರ್ಕಾರ ಕೆಲಸ ಮಾಡಲಿದೆ. ನನ್ನನ್ನು ಅಭ್ಯರ್ಥಿ ಆಗಿ ಆಯ್ಕೆ ಮಾಡೋದೆ ಆದ್ರೆ, ನನ್ನ ಮೇಲೆ ಜವಾಬ್ದಾರಿ ಇರುತ್ತದೆ. ನಾನು ರಾಜಕೀಯವಾಗಿ ರಾಜ್ಯಾದ್ಯಂತ ಓಡಾಡುತ್ತೇನೆ. ರಾಜ್ಯದಲ್ಲಿ ಪಕ್ಷ ಕಟ್ಟಲು ನಾನು ಕೆಲಸ ಮಾಡುತ್ತೇನೆ. ಜೊತೆಗೆ ಕಾರ್ಯಕರ್ತರ ಅಭಿಪ್ರಾಯ ಗೌರವಿಸುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

Edited By

Kavya shree

Reported By

Kavya shree

Comments