ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಭರ್ಜರಿ ಮಾಸ್ಟರ್ ಪ್ಲ್ಯಾನ್ : ಲೀಕ್ ಆಯ್ತು ಸಣ್ಣ ಸುಳಿವು ...!!!

12 Jan 2019 11:53 AM | General
186 Report

ಲೋಕಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ಅಸ್ತ್ರ ರೂಪಿಸಿದಂತೆ ಕಾಣುತ್ತಿದೆ. ರಾಷ್ಟ್ರೀಯ ಅಧ್ಯಕ್ಷ, ಬಿಜೆಪಿ ಚಾಣಕ್ಷ ಸದ್ಯ ಈ ಸಲ ಡಿಫರೆಂಟ್ ಆಗಿ ಪ್ಯಾನ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಆಪ್ತ ಮೂಲಗಳಿಂದ ತಿಳಿದು ಬಂದಿದೆ.ಬಿಜೆಪಿ ರಾಜ್ಯ ಘಟಕಕ್ಕೆ ಇದೀಗ ಹೈಕಮಾಂಡೇ ಖುದ್ದಾಗಿ ಮಾಸ್ಟರ್ ಪ್ಲಾನ್ ರೂಪಿಸಿದ್ದು, ಟಿಕೆಟ್ ಹಂಚಿಕೆಗಾಗಿಯೇ ಪ್ಲಾನ್ ಎ, ಪ್ಲಾನ್ ಬಿ, ಪ್ಲಾನ್ ಸಿ ಫಾರ್ಮುಲಾ ಸಿದ್ದಪಡಿಸಿರುವುದು ತಿಳಿದು ಬಂದಿದೆ. ಆದರೆ ಈ ಬಾರಿ ಬೇರೆ ರೀತಿಯಲ್ಲಿಯೇ ವಿರೋಧ ಪಕ್ಷಗಳಿಗೆ ಸೆಡ್ಡು ಹೊಡೆಯಲು ತಯಾರಿ ಮಾಡಿಕೊಳ್ಳಲಾಗಿದೆ ಎಂಬುದು ತಿಳಿದು ಬಂದಿದೆ.ಈ ಬಾರಿ ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆಗೆ ಬಿಜೆಪಿ ಮೊದಲ ಬಾರಿ ಮೂರು ಯೋಜನೆಗಳನ್ನು ರೂಪಿಸಿದೆ. ಈ ಸಲ ಒಂದಲ್ಲ, ಎರಡಲ್ಲ ಮೂರು ರಹಸ್ಯ ಸಮೀಕ್ಷೆಗಳನ್ನು ನಡೆಸಿದೆ. ಅದಕ್ಕೆ ಅನುಗುಣವಾಗಿ ಫಾರ್ಮುಲಗಳನ್ನು ತಯಾರು ಮಾಡಿದೆ.

ಈ ಮೂರು ಹಂತದ ಸಮೀಕ್ಷೆಯಿಂದ ರಾಜ್ಯ ಸರ್ಕಾರ ಹೊಸದೊಂದು ಟಾಸ್ಕ್ ನ್ನೇ ಸ್ವೀಕರಿಸಿದೆ ಎನ್ನಬಹುದು. ಈ ರಹಸ್ಯ ಸಮೀಕ್ಷೆ ಅನ್ವಯ ವಿರೋಧ ಪಕ್ಷಗಳಿಗೆ ಯಾವ ರೀತಿ ಬುಲೆಟ್ ಹಾರಿಸುತ್ತೆ ಎಂಬುದನ್ನು ಕಾದು ನೋಡಬೇಕಷ್ಟೆ.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತನ್ನ ರಹಸ್ಯ ಸಮೀಕ್ಷಾ ನೇತೃತ್ವದ ತಂಡಕ್ಕೆ ಕರ್ನಾಟಕ ರಾಜ್ಯದ ಮಟ್ಟಿಗೆ ಹೊಸ ಟಾಸ್ಕ್ ನೀಡಿದ್ದಾರೆ. ರಹಸ್ಯ ಸಮೀಕ್ಷೆಯಲ್ಲಿ ಮೂರು ಹಂತ ರೂಪಿಸಿದ್ದು, ಪ್ಲಾನ್ ಎ, ಪ್ಲಾನ್ ಬಿ ಮತ್ತು ಪ್ಲಾನ್ ಸಿ ಹೆಸರಿನಲ್ಲಿ ಸಮೀಕ್ಷೆ ನಡೆಯಲಿದೆ. ಪ್ಲಾನ್ ಎ- ಬಿಜೆಪಿ ನೂರಕ್ಕೆ ನೂರು ಗೆಲ್ಲಬಹುದಾದ ಲೋಕಸಭಾ ಕ್ಷೇತ್ರಗಳು, ಪ್ಲಾನ್ ಬಿ- ಗೆಲ್ಲಲು ಪ್ರಯತ್ನಿಸಬಹುದಾದ ಲೋಕಸಭಾ ಕ್ಷೇತ್ರಗಳು, ಪ್ಲಾನ್ ಸಿ- ಬಿಜೆಪಿಗೆ ಗೆಲುವ ಸಾಧ್ಯವಿರದ ಲೋಕಸಭಾ ಕ್ಷೇತ್ರಗಳು ಈ ರೀತಿ ಹೊಸದಾದ ಪಾರ್ಮುಲಕ್ಕೆ ಬಿಜೆಪಿ ಕೈ ಹಾಕಿದೆ.
ಒಂದು ವೇಳೆ ಯಾವುದಾದರೂ ಕ್ಷೇತ್ರದಲ್ಲಿ ಬಂಡಾಯವೆದ್ದರೆ, ಭಿನ್ನಮತ ತಲೆದೂರಿದರೆ ಆಗ ಕೈಗೊಳ್ಳಬೇಕಾದ ನಿರ್ಧಾರ, ಪಕ್ಷದ ಅಭ್ಯರ್ಥಿ ಗೆಲುವಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಹೇಗೆ, ಎಲ್ಲಿ ಯಾವ ಅಭ್ಯರ್ಥಿ ಬಂಡೆದ್ದರೆ ಹೆಚ್ಚಿನ ಹಾನಿಯಾಗಲಿದೆ ಎನ್ನುವ ಕುರಿತು ರಹಸ್ಯ ಸಮೀಕ್ಷಾ ವರದಿ ಕೈ ಸೇರಿದ ನಂತರ ಚರ್ಚೆ ನಡೆಸಲಿದ್ದಾರೆ ಎಂದು ಬಿಜೆಪಿ ಆಪ್ತ ಮೂಲಗಳು ಖಚಿತ ಮಾಹಿತಿ ನೀಡಿವೆ. ಒಟ್ಟಾರೆ ಈ ಪ್ಲ್ಯಾನ್ ರುವಾರಿಗಳು ಇಬ್ಬರು ಮಾತ್ರ. ಒಂದು ಬಿಎಸ್ ಯಡಿಯೂರಪ್ಪ, ಇನ್ನೊಂದು ಅಮಿತಾ ಷಾ. ಒಟ್ಟಾರೆ ಈಗಾಗಲೇ ಯಡಿಯೂರಪ್ಪ ಏನೆಲ್ಲಾ ಡಾಕ್ಯುಮೆಂಟ್ಸ್ ಸಲ್ಲಿಸಬೇಕೋ ಅದನ್ನೆಲ್ಲಾ ಅಮಿತ್ ಷಾ ಗೆ ನೀಡಲಾಗಿದೆ. ಇನ್ನು ಅವರು ಕೊಡುವ ಬಾಣ ಬಿರುಸುಗಳನ್ನು ರಾಜ್ಯ ಬಿಜೆಪಿ ಬಿಡಬೇಕಷ್ಟೇ. ಈ ಬಾರಿ ಹಿಂದೆ ಆಗಿದ್ದ ಎಡವಟ್ಟನ್ನು ಮಾಡದೇ , ಬಹಳ ಜಾಗರೂಕತೆಯಿಂದ  ಬಿಜೆಪಿ ಮುಂದಿನ ಹೆಜ್ಜೆ ಇಡುತ್ತಿದೆ ಎನ್ನಲಾಗುತ್ತಿದೆ.

Edited By

Kavya shree

Reported By

Kavya shree

Comments