ಹೊಸ ವರ್ಷಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಸಿಕ್ತು ಬಂಪರ್ ಗಿಫ್ಟ್...!

12 Jan 2019 10:08 AM | General
2610 Report

ರಾಜ್ಯ ಸರ್ಕಾರದಿಂದ ರಾಜ್ಯ ನೌಕಕರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಪಿಂಚಣಿದಾರರಿಗೆ ಈ ಬಾರಿ ಹೊಸ ವರ್ಷದಿಂದ ಸೇವಾವಧಿಯನ್ನು ಕಡಿಮೆಗೊಳಿಸಿದೆ. ರಾಜ್ಯ ಸರ್ಕಾರವು ಪೂರ್ಣ ಪ್ರಮಾಣದಲ್ಲಿ ಪಿಂಚಣಿ ಪಡೆಯಲು ನಿಗಧಿಯಾಗಿದ್ದ ಅರ್ಹತಾ ಸೇವಾವಧಿಯನ್ನು 33 ರಿಂದ 30 ವರ್ಷಗಳಿಗೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ.ಹೊಸ ವರ್ಷದ ಜನವರಿ 1 ರಿಂದಲೇ ಇದು ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ. 6 ನೇ ವೇತನ ಆಯೋಗ ಈ ಸಂಬಂಧ ಶಿಫಾರಸು ಮಾಡಿತ್ತು.

ಅರ್ಹತಾ ಸೇವಾವಧಿಯನ್ನು 33 ರಿಂದ 30 ವರ್ಷಗಳಿಗೆ ಇಳಿಕೆ ಮಾಡುವ ಉದ್ದೇಶಕ್ಕಾಗಿ ಕರ್ನಾಟಕ ನಾಗರಿಕ ಸೇವಾ ನಿಯಮಗಳಲ್ಲೂ ಅವಶ್ಯಕ ತಿದ್ದುಪಡಿ ಮಾಡುವ ನಿರ್ಧಾರ ಪ್ರಕಟಿಸಿದೆ. ಹೊಸ ವರ್ಷಕ್ಕೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪಿಂಚಣಿದಾರರಿಗೆ ಈ ರೀತಿಯ ಉಡುಗೊರೆಯಾಗಿ ನೀಡಿದೆ.

Edited By

Kavya shree

Reported By

Kavya shree

Comments