ಸಿಎಂ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಯುವಕ..!?

11 Jan 2019 1:31 PM | General
1070 Report

ಎಲ್ಲರಿಗೂ ಕೂಡ ನಮ್ಮ ಊರು ಚೆನ್ನಾಗಿರಬೇಕು.. ಅಲ್ಲಿ ಎಲ್ಲವೂ ಕೂಡ ಅನುಕೂಲವಾಗಿರಬೇಕು… ಎಲ್ಲಾ ರೀತಿಯ ಸೌಕರ್ಯಗಳು ಕೂಡ ಇರಬೇಕು ಎನ್ನುವ ಆಸೆ ಇರುತ್ತದೆ..ಅದೇ ರೀತಿ ಸ್ಕೂಲ್ ಕಾಲೇಜ್ ಇದ್ದರೆ ಇನ್ನೂ ಚಂದ ಅಲ್ವ.. ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಪಟ್ಟಣದ ತಮ್ಮ ಊರಿನಲ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಕಾಲೇಜು ಆರಂಭಿಸುವಂತೆ ಯುವಕನೊಬ್ಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಮನವಿಯನ್ನು ಮಾಡಿಕೊಂಡಿದ್ದಾನೆ.

ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ನಿವಾಸಿ ವಿಜಯರಂಜನ್ ಜೋಶಿ ಎಂಬುವವರು ಸಿಎಂ ಕುಮಾರಸ್ವಾಮಿಯವರಿಗೆ ಸೇರಿದಂತೆ ಶಾಸಕರು, ಜಿಲ್ಲಾಧಿಕಾರಿ, ಪದವಿಪೂರ್ವ ನಿರ್ದೇಶಕರು ಹಾಗೂ ಉಪನಿರ್ದೇಶಕರಿಗೆ ರಕ್ತದಲ್ಲಿಯೇ ಪತ್ರವನ್ನು ಬರೆದಿದ್ದಾನೆ. ಇದೇ ವಿಚಾರವಾಗಿ ಜೋಶಿ ಹಿಂದೆಯೂ ಕೂಡ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರಿಗೆ ರಕ್ತದಲ್ಲಿಯೇ ಪತ್ರವನ್ನು ಬರೆದಿದ್ದರು . ಇದನ್ನು ಪರಿಗಣಿಸಿದ ಪ್ರಧಾನಿ ಕಾರ್ಯಾಲಯ ಪರಿಶೀಲನೆ ನಡೆಸುವಂತೆ ರಾಜ್ಯಸರ್ಕಾರಕ್ಕೆ ಪತ್ರವನ್ನು ಬರೆದಿತ್ತುಆದರೆ, ಇದುವರೆಗೂ ಯಾವುದೇ ಶಾಲಾ-ಕಾಲೇಜು ಕಟ್ಟಡ ನಿರ್ಮಾಣ ಆಗದಿರುವುದು ಜೋಶಿಗೆ ಬೇಸರವನ್ನು ತಂದಿದೆ ಎಂದು ಹೇಳಲಾಗುತ್ತಿದೆ.. ಈಗಲಾದರೂ ಹೈಸ್ಕೂಲ್ ಮತ್ತು ಕಾಲೇಜು ನಿರ್ಮಾಣ ಮಾಡಿ ಭಾಗದಲ್ಲಿರುವ ಅನಕ್ಷರತೆ ಹೋಗಲಾಡಿಸಿ ಎಂದು ಸಿಎಂ ಕುಮಾಸ್ವಾಮಿಗೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಮನವಿಯನ್ನು ಮಾಡಿಕೊಂಡಿದ್ದಾನೆ. ಊರಿನ ಬಗ್ಗೆ ಇರುವ ಕಾಳಜಿಯನ್ನು ನಿಜಕ್ಕೂ ಮೆಚ್ಚಲೇಬೇಕಾದದ್ದು…

Edited By

Manjula M

Reported By

Manjula M

Comments