ಗೃಹಿಣಿಯರಿಗೆ ಬಿಗ್ ಶಾಕ್ : ಅಡುಗೆ ಮಾಡೋ ಮುನ್ನ ಇದನ್ನೊಮ್ಮೆ ಓದಿ...

10 Jan 2019 12:39 PM | General
267 Report

ಕಾಲ ಯಾವುದು ಬಂದ್ರೂ, ಹೋದ್ರೂ  ರೈತರ ಗೋಳು ಮಾತ್ರ ಹೇ ತೀರದು. ವರ್ಷವಿಡೀ ದುಡಿದ್ರೂ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ ಆಗುತ್ತದೆ. ಆದರೆ ಈ ಬಾರಿ ಟೊಮ್ಯಾಟೋ ಬೆಳೆಯುವ ರೈತರಿಗೆ ಬಂಪರ್ ಲಾಟರಿ ಸಿಕ್ಕಿದಂತಿದೆ. ಸದ್ಯ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಲೇ, ರೈತರ ಮೊಗದಲ್ಲಿ ಖುಷಿ ಹೆಚ್ಚಾಗುತ್ತಿದೆ. ಚಳಿಗಾಲದ ಹಿನ್ನಲೆಯಲ್ಲಿ ಟೊಮ್ಯಾಟೋ ಬೆಳೆದ ರೈತರಿಗೆ ಭಾರೀ ಹೊಡೆತ ಬಿದ್ದಿದ್ದು, ಕೆಜಿ 10-20 ರೂ. ನಲ್ಲಿದ್ದ ಟೊಮ್ಯಾಟೋಗೆ ಚಿನ್ನದ ಬೆಲೆ ಸಿಕ್ಕಿದೆ. ಸದ್ಯ ಕೆಜಿ 70. ರೂಗೆ ಟೊಮ್ಯಾಟೋ ಮಾರಲಾಗುತ್ತಿದೆ. ಇನ್ನು ಕೊಂಡುಕೊಳ್ಳುವ ಗ್ರಾಹಕರಿಗೆ ಬೆಲೆ ಕೇಳಿದ್ರೆ ಕಣ್ಣೀರು ಬರೋದಂತು ಸತ್ಯ.

ಹೌದು, ಚಳಿಗೆ ಟೊಮ್ಯಾಟೊ ಇಳುವರಿ ಶೇಕಡ 60% ರಷ್ಟು ಇಳಿಕೆಯಾಗಿದೆ ಹಾಗಾಗಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಟೊಮ್ಯಾಟೊ ಬೆಲೆ ಏರಿಕೆ ಕಂಡಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ಇನ್ನು 1 ರಿಂದ 2 ತಿಂಗಳುಗಳ ಕಾಲ ಟೊಮ್ಯಾಟೊ ದುಬಾರಿಯಾಗಲಿದ್ದು, ಟೊಮ್ಯಾಟೊ ಬೆಳೆಗಾರರಿಗೆ ಬಂಪರ್ ಲಾಟರಿ ಹೊಡದಂತೆ ಆಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಟಮ್ಯಾಟೋ ಬೆಳೆಯುವ ಜಿಲ್ಲೆಯಾದ ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಮಂಡ್ಯದಲ್ಲಿ ಇಳುವರಿ ಕುಂಠಿತಗೊಂಡಿದ್ದು, ಬಂದಿರುವ ಅಲ್ಪಸ್ವಲ್ಪ ಬೆಳೆಗಾದರೂ ಉತ್ತಮ ದರ ಸಿಗುತ್ತಿರುವುದು ರೈತರ ಖುಷಿಗೆ ಕಾರಣವಾಗಿದೆ.

Edited By

Kavya shree

Reported By

Kavya shree

Comments