O MY GOD..!! ಈ ರೀತಿಯ ಹುಡುಗ್ರು ಇರ್ತಾರ…!! ಐಫೋನ್’ಗಾಗಿ ಈತ ಮಾಡಿದ್ದೇನು ಗೊತ್ತಾ..!!!

08 Jan 2019 4:26 PM | General
527 Report

ಐಫೋನ್ ಕೈಯಲ್ಲಿದ್ರೆ ಸಾಕು ಹುಡುಗರು ಕೊಡೋ ಬಿಲ್ಡಫ್ ಅಷ್ಟಿಷ್ಟಲ್ಲ.. ಶೋಕಿ ಮಾಡೋಕೆ ಅಂತಾನೆ ಕೆಲವರು ಐಫೋನ್ ಖರೀದಿ ಮಾಡ್ತಾರೆ..  iPhone  ಬೆಲೆ ಹೆಚ್ಚು ದುಬಾರಿ ಅನ್ನೋದು ಎಲ್ಲರಿಗೂ ಕೂಡ ಗೊತ್ತು..? ಆದರೂ ಐಫೋನ್ ಯುವಜನರ ಕ್ರೇಜ್ ಅನ್ನೋದು ಎಲ್ಲರಿಗೂ ಗೊತ್ತು.. ಈ ರೀತಿಯ ಪೋನ್ ಕೈಯ್ಯಲ್ಲಿ ಇರಬೇಕೆಂಬ ಯುವಕರ ಮಹದಾಸೆ. ಆ ರೀತಿಯ ಪೋನ್ ತಗೋಬೇಕು ಅಂತಾ ಚೀನಾದ ಒಬ್ಬ ಹುಡುಗ ಏನ್ ಮಾಡಿದ್ದಾನೆ ಗೊತ್ತಾ..?  ಕಿಡ್ನಿ ಮಾರಿ ಐಫೋನ್ ಖರೀದಿಸಲು ನಿರ್ಧಾರ ಮಾಡಿಬಿಟ್ಟಿದ್ದಾನೆ ಹಾಗಾಗಿ ಒಂದು ಕಿಡ್ನಿಯನ್ನೂ ಕೂಡ ಮಾರಿದ್ದಾನೆ.

ಚೀನಾದ 17 ವರ್ಷದ ಜವಾವೋ ಎಂಬ ಹುಡುಗ ಕಾಲೇಜಿನಲ್ಲಿ ಎಲ್ಲರಿಗಿಂತಲೂ ಕೂಲ್ ಆಗಿ ಕಾಣಬೇಕೆಂಬ ಆಸೆಯಿಂದ ಐಫೋನ್ 4 ಖರೀದಿ ಮಾಡಲು ತನ್ನ ಕಿಡ್ನಿಯನ್ನೇ ಮಾರಿಕೊಂಡಿದ್ದಾನೆ.. ಮನುಷ್ಯನಿಗೆ ಬದುಕಲು ಎರಡು ಕಿಡ್ನಿಗಳು ಬೇಕೆಂದಿಲ್ಲ, ಒಂದು ಕಿಡ್ನಿ ಇದ್ದರೂ ಬದುಕಲು ಸಾಧ್ಯ ಎಂದು ಜವಾವೋಗೆ ಗೆಳೆಯರು ಮಾತನಾಡುವ ಸಂದರ್ಭದಲ್ಲಿ ಹೇಳಿದನ್ನ ಕೇಳಿಸಿಕೊಂಡಿದ್ದಂತೆ..  ಹೀಗಾಗಿ ಬೇರೇನನ್ನೂ ಯೋಚಿಸದ ಆತ ತನ್ನ 17ನೇ ವಯಸ್ಸಿಗೆ ಕಿಡ್ನಿ ಮಾರಿ ಐಫೋನ್ ಖರೀದಿಸಿದ್ದ. ಸದ್ಯ 24 ವರ್ಷ ವಯಸ್ಸಾಗಿರುವ ಜವಾವೋಗೆ ಬೆಡ್ ಮೇಲಿನಿಂದ ಎದ್ದು ನಡೆದಾಡಲೂ ಕೂಡ ಸಾಧ್ಯವಾಗುತ್ತಿಲ್ಲ. ಡಯಾಲಿಸಿಸ್ ನಿಂದ ಜೀವನ ಸಾಗಿಸುತ್ತಿದ್ದಾನೆ. ಮಾರಾಟ ಮಾಡಿದ ಕಿಡ್ನಿಗೆ ಆಸ್ಪತ್ರೆ ಸಿಬ್ಬಂದಿ ಆತನಿಗೆ 2.24 ಲಕ್ಷ ಕೊಟ್ಟಿದ್ದರಂತೆ..ಅಷ್ಟೆ. ಅಲ್ಲದೇ ಕೆಲವೇ ವಾರಗಳೊಳಗೆ ಎಲ್ಲವೂ ಮೊದಲಿನಂತಾಗುತ್ತದೆ ಎಂಬ ಭರವಸೆಯನ್ನೂ ಆಸ್ಪತ್ರೆಯವರು  ನೀಡಿದ್ದರಂತೆ. ಆದರೆ ಹೀಗಾಗಲಿಲ್ಲ, ಹಾಗೂ ತೆಗೆದುಕೊಂಡ ನಿರ್ಧಾರ ಜೀವಕ್ಕೇ ಹಾನಿಯುಂಟು ಮಾಡಿದೆ.. ಬೇರೆ ವಿಧಿ ಇಲ್ಲದ ಕುಟುಂಬ ಡಯಾಲಿಸಿಸ್ ಮಾಡಿಸಲು ಹಣ ಕೂಡಿಸಲಾರಂಭಿಸಿದ್ದಾರೆ. ಅಂತಿಮವಾಗಿ ಜವಾವೋಗೆ ನ್ಯಾಯ ಸಿಕ್ಕಿದ್ದು, ಆತನ ಕಿಡ್ನಿ ಖರೀದಿಸಿದ್ದ ಆಸ್ಪತ್ರೆಯೇ ಚಿಕಿತ್ಸೆಯ ವೆಚ್ಚ ಭರಿಸಲು ಮುಂದಾಗಿದೆ ಎನ್ನಲಾಗಿದೆ.. ಐಫೋನ್ ಆಗಿ ಈತ ಮಾಡಿರೋದು ಎಷ್ಟರ ಮಟ್ಟಿಗೆ ಸರಿ ಎನಿಸುತ್ತದೆ ನೀವೆ ಯೋಚಿಸಿ..?

Edited By

Manjula M

Reported By

Manjula M

Comments