ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಹಕ್ಕು : ಸುಪ್ರೀಂ ತೀರ್ಪಿನಲ್ಲಿ ಮತ್ತೆ ತಿದ್ದುಪಡಿ...!!!

08 Jan 2019 11:33 AM | General
28486 Report

ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ತೀರ ಇತ್ತೀಚಿನವರೆಗೆ ಯಾವುದೇ ಹಕ್ಕು ಇರಲಿಲ್ಲ, ಆದರೆ ಸುಪ್ರೀಂ ಕೋರ್ಟು ಪಿತ್ರಾರ್ಜಿತ ಆಸ್ತಿಯ ಮೇಲೆ ಹೆಣ್ಣುಮಕ್ಕಳಿಗೂ ಅದೇ ಸಮಾನವಾದ ಹಕ್ಕು ಇದೆ ಎಂದು ಘೋಷಿಸಿತು. ಆದರೆ ಕೆಲ ಅಧೀನ ನ್ಯಾಯಾಲಯಗಳಲ್ಲಿ ಈ ತೀರ್ಪಿನ ಅನ್ವಯ ವ್ಯತಿರಿಕ್ತ ಕೇಸ್​ಗಳು ದಾಖಲಾಗ ತೊಡಗಿದವು. ಇದರಿಂದ ಮತ್ತೆ ಸುಪ್ರೀಂ ಕೋರ್ಟು 2005 ರಲ್ಲಿ ತೀರ್ಪು ತಿದ್ದುಪಡಿ ಮಾಡಲಾಯಿತು. ಅದಂತೇ 2005 ರ ಮುಂಚೆ ಹುಟ್ಟಿದ ಹೆಣ್ಣುಮಕ್ಕಳಿಗೆ ತಂದೆಯ ಆಸ್ತಿಯ ಮೇಲೆ ಯಾವ ಹಕ್ಕು ಇರುವುದಿಲ್ಲ ಎಂದು ಘೋಷಣೆ ಮಾಡಲಾಯಿತು.

ಈ ಹಿನ್ನೆಲೆಯಲ್ಲಿ, ಕಾನೂನಿಗೆ ತಿದ್ದುಪಡಿ ಮಾಡಿ ಪಿತ್ರಾರ್ಜಿತ ಆಸ್ತಿಯಲ್ಲಿಯೂ ಹೆಣ್ಣು ಮಕ್ಕಳಿಗೆ ಪುರುಷರಿಗೆ ಇರುವಂತೆಯೇ ಸಮಾನವಾದ ಹಕ್ಕು ನೀಡಲಾಗಿದೆ.

ಹೆಣ್ಣುಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು

ಹೆಣ್ಣುಮಕ್ಕಳು ಪಿತ್ರಾರ್ಜಿತ ಆಸ್ತಿಗೆ ಸಮಾನ ಹಕ್ಕುದಾರಿಗಳು ಈಗಾಲೇ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ, ಹೆಣ್ಣುಮಕ್ಕಳು 2005ಕ್ಕಿಂತ ಮೊದಲು ಜನಿಸಿದ್ದರೂ ಅವರಿಗೆ ಪಿತ್ರಾರ್ಜಿತ ಆಸ್ತಿಯ ಮೇಲೆ ಗಂಡು ಮಕ್ಕಳಿಗೆ ಇರುವಷ್ಟೇ ಹಕ್ಕು ಮತ್ತು ಬಾಧ್ಯತೆಯಿದೆ ಎಂದು ತೀರ್ಪು ನೀಡಿದೆ.2005ರಲ್ಲಿ ಹಿಂದು ಉತ್ತರಾಧಿಕಾರ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದು ‘ಪಿತ್ರಾರ್ಜಿತ ಆಸ್ತಿಗೆ ಹೆಣ್ಮಕ್ಕಳೂ ಸಮಾನ ಉತ್ತರಾಧಿಕಾರಿಗಳು’ ಎಂದು ನಿಯಮ ರೂಪಿಸಿತ್ತು., ಆದರೆ, ಕೆಲ ಅಧೀನ ಕೋರ್ಟುಗಳಲ್ಲಿ ಈ ತಿದ್ದುಪಡಿಯನ್ನು ವ್ಯತಿರಿಕ್ತವಾಗಿ ವ್ಯಾಖ್ಯಾನಿಸುವ ಮೂಲಕ 2005 ಕ್ಕಿಂತ ಮೊದಲು ಹುಟ್ಟಿದ ಅಂದರೆ ಕಾಯ್ದೆಗೆ ತಿದ್ದುಪಡಿ ಆಗುವುದಕ್ಕಿಂತ ಮೊದಲು ಜನಿಸಿದ, ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿಲ್ಲ ಎಂಬಂತಹ ತೀರ್ಪುಗಳನ್ನು ನೀಡಲಾಗುತ್ತಿತ್ತು.ಇಂತಹುದೇ ಮೇಲ್ಮನವಿಯೊಂದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ಎ.ಕೆ.ಸಿಕ್ರಿ ಹಾಗೂ ಅಶೋಕ್ ಭೂಷಣ್ ಅವರ ಪೀಠವು ‘2005ಕ್ಕಿಂತ ಮೊದಲು ಜನಿಸಿದ ಹೆಣ್ಣು ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯ ಮೇಲೆ ಸಮಾನ ಹಕ್ಕು ಮತ್ತು ಬಾಧ್ಯತೆಯಿದೆ, ಏಕೆಂದರೆ ಹಿಂದು ಉತ್ತರಾಧಿಕಾರ ಕಾಯ್ದೆಯಲ್ಲಿ ಹೆಣ್ಣುಮಕ್ಕಳು ಹುಟ್ಟಿ ನಿಂದಲೇ ಪಿತ್ರಾರ್ಜಿತ ಆಸ್ತಿಗೆ ಸಮಾನ ಉತ್ತರಾಧಿಕಾರಿಗಳು ಎಂದು ಹೇಳಲಾಗಿದೆ’ ಎಂದು ಸ್ಪಷ್ಟಪಡಿಸಿದೆ.

ಕಾಯ್ದೆಗೆ ತಿದ್ದುಪಡಿಯಾಗುವುದಕ್ಕಿಂತ ಮೊದಲು ಜನಿಸಿದ್ದಾರೆ ಎಂಬ ಕಾರಣಕ್ಕೆ ಯಾವುದೇ ಮಹಿಳೆಗೆ ಆಕೆಯ ಪಿತ್ರಾರ್ಜಿತ ಆಸ್ತಿಯ ಮೇಲಿನ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ, 2005ಕ್ಕಿಂತ ಮೊದಲು ದಾಖಲಾದ ವ್ಯಾಜ್ಯಗಳಿಗೂ ಹಿಂದು ಉತ್ತರಾಧಿಕಾರ ಕಾಯ್ದೆಯ ತಿದ್ದುಪಡಿ ಅನ್ವಯಿಸುತ್ತದೆ, ಏಕೆಂದರೆ ಗಂಡುಮಕ್ಕಳಿಗೆ ಇರುವಷ್ಟೇ ಹಕ್ಕನ್ನು ಹೆಣ್ಣುಮಕ್ಕಳಿಗೂ ನೀಡುವ ಉದ್ದೇಶ ದಿಂದಲೇ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ನ್ಯಾಯಪೀಠ ಹೇಳಿದೆ.2002ರಲ್ಲಿ ಇಬ್ಬರು ಹೆಣ್ಣುಮಕ್ಕಳು ತಮ್ಮ ಮೃತ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಸೋದರರು ಪಾಲು ನೀಡುತ್ತಿಲ್ಲ ಎಂದು ಕೋರ್ಟ್‌ಗೆ ಹೋಗಿದ್ದರು, 2007 ರಲ್ಲಿ ಅವರ ಮನವಿಯನ್ನು ಜಾರಿ ನ್ಯಾಯಾಲಯ ತಿರಸ್ಕರಿಸಿತ್ತು, ಹೈಕೋರ್ಟ್ ಕೂಡ ಜಾರಿ ನ್ಯಾಯಾಲಯದ ತೀರ್ಪನ್ನೇ ಎತ್ತಿಹಿಡಿದಿತ್ತು, ಹೀಗಾಗಿ ಅವರು ಸುಪ್ರೀಂಕೋರ್ಟ್‌ಗೆ ಹೋಗಿದ್ದರು, ಹೈಕೋರ್ಟ್‌ನ ಆದೇಶವನ್ನು ರದ್ದುಪಡಿ ಸಿರುವ ಸುಪ್ರೀಂಕೋರ್ಟ್, ತಿದ್ದುಪಡಿ ಯಾದ ಕಾಯ್ದೆಯಡಿ ಮಹಿಳೆಗೆ ಹಕ್ಕಿದೆಯೇ ಇಲ್ಲವೇ ಎಂಬುದಕ್ಕೆ ಆಕೆಯ ಹುಟ್ಟು ಮಾನದಂಡವಾಗಲು ಸಾಧ್ಯವಿಲ್ಲ, ಹುಟ್ಟಿನಿಂದಲೇ ಆಕೆಯು ಪಿತ್ರಾರ್ಜಿತ ಆಸ್ತಿಗೆ ಸಮಾನ ಉತ್ತರಾಧಿಕಾರಿಯಾಗುತ್ತಾಳೆ ಎಂದು ತಿಳಿಸಿದೆ.

Edited By

Kavya shree

Reported By

Kavya shree

Comments