ಭಾರತ್ ಬಂದ್'ನಿಂದಾಗಿ ವಿವಿ ಪರೀಕ್ಷೆ ಮುಂದೂಡಿಕೆ...!

07 Jan 2019 2:54 PM | General
217 Report

ನಾಳೆ ರಾಷ್ಟ್ರವ್ಯಾಪಿ ಭಾರತ್ ಬಂದ್ ಗೆ ಕರೆ ನೀಡಲಾಗಿತ್ತು. ಕಾರ್ಮಿಕ ಸಂಘಟನೆಗಳಿಂದ ಘೋಷಿಸುವ ರಾಷ್ಟ್ರವ್ಯಾಪಿ ಬಂದ್ ಗೆ ಬಹುತೇಕ ಬೆಂಬಲ ಸಿಗುತ್ತಿವೆ. ನಾಳೆ ಶಾಲಾ-ಕಾಲೇಜುಗಳು ಇರುವುದಿಲ್ಲ. ಭಾರತ್ ಬಂದ್ ಹಿನ್ನಲೆಯಲ್ಲಿ ಬೆಂಗಳೂರು, ಶಿವಮೊಗ್ಗ ಸೇರಿದಂತೇ ಬಹುತೇಕ ವಿವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.ನಾಳೆ ನಡೆಯಬೇಕಾಗಿದ್ದ ಬೆಂಗಳೂರು ವಿವಿ ಎಂ.ಕಾಂ ಸೇರಿ ಪದವಿ ಕೋರ್ಸ್ ಗಳ ಪರೀಕ್ಷೆಗಳು ನಡೆಯುವುದಿಲ್ಲ.

ಮುಂದಿನ ಪರೀಕ್ಷಾ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಬೆಂಗಳೂರು ವಿವಿ ಕುಲಪತಿಗಳು ತಿಳಿಸಿದ್ದಾರೆ. ಇನ್ನು ಧಾರವಾಡ ವಿವಿ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಜನವರಿ 17 ಮತ್ತು 18 ಕ್ಕೆ ಪರೀಕ್ಷೆಗಳು ನಡೆಯಲಿವೆ.ಶಿವಮೊಗ್ಗದ ಕುವೆಂಪು ವಿವಿಯ ಪರೀಕ್ಷೆಗಳು ಮುಂದೂಡಲಾಗಿದೆ. ಬೆಳಗಾವಿ, ರಾಣಿ ಚೆನ್ನಮ್ಮ ವಿವಿಯಲ್ಲಿ ನಡೆಯಬೇಕಿದ್ದ ಎಂ.ಎ, ಎಂ.ಕಾಂ, ಎಂ.ಎಸ್ಸಿ ಸೇರಿದಂತೆ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡಿಕೆಯಾಗಿವೆ. ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು. ಕನಿಷ್ಟ ಸಂಬಳ ನಿಗಧಿ ಮಾಡಬೇಕು. ಹಾಗೂ ಕೇಂದ್ರ ಸರ್ಕಾರ ಮಸೂದೆ ತಿದ್ದುಪಡಿ ಮಾಡುತ್ತಿದ್ದು, ವಿನೂತನ ಯೋಜನೆಯಿಂದ ಕಾರ್ಮಿಕರಿಗೆ  ತೊಂದರೆಯಾಗಲಿದೆ ಎಂಬ ಕಾರಣದಿಂದ ಕೇಂದ್ರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ ಬಂದ್ ಗೆ ಕರೆ ನೀಡಲಾಗಿದೆ.

Edited By

Kavya shree

Reported By

Kavya shree

Comments