ಚಿನ್ನದ ಗಣಿ ಕುಸಿದು 30 ಮಂದಿ ದುರ್ಮರಣ...!!!

07 Jan 2019 12:29 PM | General
180 Report

ಅಕ್ರಮ ಚಿನ್ನದ ಗಣಿ ಒಂದರಲ್ಲಿ ಕೆಲಸ ಮಾಡುತ್ತಿದ್ದ 30 ಕಾರ್ಮಿಕರು ಮೃತಪಟ್ಟಿರುವ ಘಟನೆ ಆಪ್ಘಾನಿಸ್ತಾನದಲ್ಲಿ ನಡೆದಿದೆ. ಕೊಹಿಸ್ತಾನ್ ಜಿಲ್ಲೆಯಲ್ಲಿರುವ ಅಕ್ರಮ ಚಿನ್ನದ ಗಣಿ ಒಂದರಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಅಕ್ರಮ ಗಣಿಯಲ್ಲಿ ಅಗೆಯುತ್ತಿದ್ದ ಸಂದರ್ಭದಲ್ಲಿ ಮಣ್ಣು ಕುಸಿದು ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಈ ಘಟನೆಯಲ್ಲಿ 30 ಜನ ಸಾವನಪ್ಪಿದ್ದು 7 ಮಂದಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸದ್ಯ ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳ ಮೂಲಗಳಿಂದ ತಿಳಿದು ಬಂದಿದೆ. ಮಾಹಿತಿ ಪ್ರಕಾರ ಮೃತಪಟ್ಟ ಕಾರ್ಮಿಕರೆಲ್ಲಾ ಗಣಿ ಬಳಿ ಇರುವ ಸಮೀಪದ ಗ್ರಾಮಸ್ಥರು ಎನ್ನಲಾಗಿದೆ. ಇವರೆಲ್ಲಾ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಗಣಿಯಲ್ಲಿ ಚಿನ್ನ ಹುಡುಕುವ ಕೆಲಸ ಮಾಡುತ್ತಿದ್ದರು. ಇತ್ತೀಚಿಗೆ ಸ್ಯಾಂಡಲ್’ವುಡ್ ನಲ್ಲಿ ಭಾರೀ ಹೆಸರು ಮಾಡಿದ್ದ ಸಿನಿಮಾ ಕೆಜಿಎಫ್. 5 ಭಾಷೆಗಳಲ್ಲಿ ರಿಲೀಸ್ ಆಗಿ ದೇಶಾದ್ಯಂತ ಸದ್ದು ಮಾಡಿರುವ ಯಶ್ ನಟನೆಯ ಕೆಜಿಎಫ್ ಚಿನ್ನದ ಗಣಿ ಕಥೆಯಾಧಾರಿತ ಸಿನಿಮವಾಗಿದೆ. ಅಕ್ರಮ ಗಣಿಯಲ್ಲಿ ತೊಡಗಿದ್ದ ಕಾರ್ಮಿಕರಿಗೆ ಯಾವ ಭದ್ರತೆಯೂ ಇರುವುದಿಲ್ಲವೆಂಬುದನ್ನು ಸಿನಿಮಾದಲ್ಲಿ  ತೋರಿಸಲಾಗಿದೆ.

Edited By

Kavya shree

Reported By

Kavya shree

Comments