‘ಕನ್ನಡ ಮಾತಾಡಿ’ ಮಾಜಿ ಸಿಎಂ ಸಿದ್ದರಾಮಯ್ಯರಿಂದ 'ಸ್ಪೆಷಲ್ ಕ್ಲಾಸ್’

05 Jan 2019 4:03 PM | General
469 Report

ಮಾಜಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಒಂದಲ್ಲ ಒಂದು ವಿಚಾರಕ್ಕಾಗಿ ಸುದ್ದಿಯಲ್ಲಿರುತ್ತಾರೆ.. ಇದೀಗ ಬಾದಾಮಿ ಪ್ರವಾಸ ಕೈಗೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕನ್ನಡ ಮಾತನಾಡದ ಅಧಿಕಾರಿಗಳಿಗೆ ಸಖತ್ತಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ..ಸಿದ್ದರಾಮಯ್ಯ ಅಧಿಕಾರಿಗಳಿಗೆ 'ಸ್ಪೆಷಲ್ ಕ್ಲಾಸ್' ತೆಗೆದುಕೊಂಡಿರುವ ಘಟನೆ ಬಾದಾಮಿ ಕ್ಷೇತ್ರದ ಐತಿಹಾಸಿಕ ಸ್ಥಳ ಪಟ್ಟದಕಲ್ಲಿನಲ್ಲಿ ನಡೆದಿದೆ. ಬಾದಾಮಿ ವಿಧಾನಸಭಾ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅವರು ಐತಿಹಾಸಿಕ ಸ್ಥಳ ಪಟ್ಟದಕಲ್ಲು ಪ್ರವಾಸಿ ತಾಣ ವೀಕ್ಷಣೆ ಮಾಡುತ್ತಿದ್ದರು.

ಈ ವೇಳೆ ಅವರಿಗೆ ಪುರಾತತ್ವ ಇಲಾಖೆ ಸಿಬ್ಬಂದಿಯೊಬ್ಬರು ಇಂಗ್ಲಿಷ್​ ಭಾಷೆಯಲ್ಲಿ ಮಾತನಾಡಲು ಶುರುಮಾಡಿದರು, ಕೂಡಲೇ ಸಿದ್ದರಾಮಯ್ಯ ಅವರು ಇಂಗ್ಲಿಷ್​ನಲ್ಲಿಯೇ ಅಧಿಕಾರಿಗೆ 'ನಿಮಗೆ ಕನ್ನಡ ಗೊತ್ತಿಲ್ವಾ? ನೀವಿಬ್ಬರೂ ಇನ್ನೂ ಏಕೆ ಕನ್ನಡ ಕಲಿತಿಲ್ಲ. ಎಷ್ಟು ವರ್ಷಗಳಿಂದ ಇಲ್ಲಿದ್ದೀರಾ? ಅಂತ ಪ್ರಶ್ನೆ ಮಾಡಿದರು. ಕೂಡಲೇ ಬೆಚ್ಚಿ ಬಿದ್ದ ಇಬ್ಬರು ಅಧಿಕಾರಿಗಳು 'ವಿ ವಿಲ್ ಟ್ರೈ' ಎಂದು ಉತ್ತರಿಸಿದ್ದಾರೆ ಕೂಡಲೇ ಸಿದ್ದರಾಮಯ್ಯ ವರು ಕಲಿಯಲು ಪ್ರಯತ್ನಿಸುತ್ತೇನೆ ಎಂಬ ಪ್ರಶ್ನೆಯೇ ಇಲ್ಲ. ನೀವು ಕನ್ನಡ ಕಲಿಯಬೇಕು' ಎಂದು ಇಬ್ಬರು ಅಧಿಕಾರಿಗಳಿಗೆ ತಾಕೀತು ಮಾಡಿದರು.. ಕನ್ನಡದ ಮೇಲಿರುವ ಅಭಿಮಾನ ನಿಜಕ್ಕೂ ಹೆಮ್ಮೆಯ ವಿಷಯ ಎನ್ನಬಹುದು…

Edited By

Manjula M

Reported By

Manjula M

Comments