ಬ್ರಾಹ್ಮಣ ಅಂತಾ ಸುಳ್ಳು ಹೇಳ್ತಿರೋ ರಾಹುಲ್ ಗಾಂಧಿಯನ್ನ ನಂಬಬೇಕಾ....!!!

05 Jan 2019 3:21 PM | General
191 Report

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಬ್ರಾಹ್ಮಣ ಎಂದು ಹೇಳಿಕೊಂಡಿದ್ದ ರಾಹುಲ್ ಗಾಂಧಿಗೆ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದಾರೆ. ತ್ಯಾಗಿಯು ಅಲ್ಲದ, ಜ್ಞಾನಿಯೂ ಅಲ್ಲದ ರಾಹುಲ್ ಗಾಂಧಿ ಯಾವ ರೀತಿಯಲ್ಲಿ ಬ್ರಾಹ್ಮಣ ಆಗುತ್ತಾರೆ ಹೇಳಿ ಎಂದು ಟಾಂಗ್ ನೀಡಿದ್ದಾರೆ.

ಇತ್ತೀಚಿಗೆ  ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸ್ವಾಮಿ, ಬ್ರಾಹ್ಮಣನಾದವನಿಗೆ ಉಪನಯನ ಆಗಿರಬೇಕಾಗುತ್ತದೆ. ಆದರೆ ಅದ್ಯಾವುದು ರಾಹುಲ್ ಗಾಂಧಿಗೆ ಆಗಿಲ್ಲ.ಆಗ ಮಾತ್ರ ಆತ ಬ್ರಾಹ್ಣಣ ಎನಿಸಿಕೊಳ್ಳುತ್ತಾನೆ. ಬ್ರಾಹ್ಮಣ ಏಕಾಏಕಿ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ಬ್ರಾಹ್ಮಣನಾದವನು ಜ್ಞಾನಿಯೂ , ತ್ಯಾಗಿಯೂ ಆಗಿರಬೇಕಾಗುತ್ತದೆ. ರಾಹುಲ್‌ ಜ್ಞಾನಿಯೂ ಅಲ್ಲ, ತ್ಯಾಗಿಯೂ ಅಲ್ಲ. ರಾಹುಲ್ ಗಾಂಧಿ ಹಿಂದೂ ಧರ್ಮವನ್ನು ತಮಾಷೆಯಾಗಿ ನೋಡುತ್ತಿದ್ದಾರೆ ಎಂದು ಸ್ವಾಮಿ ಆರೋಪಿಸಿದ್ದಾರೆ. ಬಿಜೆಪಿ ನಾಯಕರು ರಾಹುಲ್ ಗಾಂಧೀ ಮೇಲೆ, ಕಾಂಗ್ರೆಸ್ ನಾಯಕರು ಬಿಜಿಪಿಯ ಮೋದಿಯ ಮೇಲೆ ಮತ್ತೆ  ಮತ್ತೆ ಟೀಕಾ ಟೀಕಾ ಪ್ರಹಾರಗಳು ಹೆಚ್ಚಾಗುತ್ತಿವೆ.

Edited By

Kavya shree

Reported By

Kavya shree

Comments