ಐಟಿ ರೈಡ್'ನಿಂದ ಕಿಚ್ಚ ಬಿಗ್ ರಿಲೀಫ್ : ಅಧಿಕಾರಿಗಳಲ್ಲಿ ರಿಕ್ವೆಸ್ಟ್ ಮಾಡಿಕೊಂಡಿದ್ಯಾಕೆ ಸುದೀಪ್...!!!

05 Jan 2019 12:25 PM | General
248 Report

ಕಿಚ್ಚ ಸುದೀಪ್ ತಮ್ಮ ಮನೆ ಮೇಲೆ ಆದ ಐಟಿ ರೈಡ್’ನಿಂದ ಸ್ವಲ್ಪ ರಿಲ್ಯಾಕ್ಷ್ ಆಗಿದ್ದಾರೆ. ಸಿನಿಮಾ ಶೂಟಿಂಗ್ ಗೆಂದು ಮೈಸೂರಿನತ್ತ ಹೋಗಿದ್ದ ಸುದೀಪ್ ಏಕಾಏಕಿ ಐಟಿ ರೈಡ್’ನಿಂದ ಬೇಸರಿಸಿಕೊಂಡಿದ್ದಂತೂ ನಿಜ. ಅಮ್ಮ ಮನೆಯಲ್ಲಿ ಒಬ್ಬರೇ ಇದ್ದರು ಸೋ ಹಾಗಾಗಿ ನಾನು ವಾಪಸ್ ಆದೆ. ಇಲ್ಲಾ ಅಂದಿದ್ರೆ ಅಲ್ಲಿಯೇ ಕುಳಿತು ಹ್ಯಾಂಡಲ್ ಮಾಡ್ತಾ ಇದ್ದೆ. ನಾನ್ಯಾಕೆ ಆತಂಕ ಪಡಲೀ ಎಂದು ಮಾಧ್ಯಮದವರ ಮುಂದೆ ಹೇಳಿಕೆ ನೀಡಿದ್ದರು. ನನ್ನ ಆಸ್ತಿ, ಸಂಪತ್ತಿನ ಅನುಗುಣವಾಗಿ ನಾನು  ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಿದ್ದೇನೆ. ಅವರು ಅವರ ಕರ್ತವ್ಯ ನಿರ್ವಹಿಸಲಿ, ನಾನು ಸಹಾಕಾರ ನೀಡುತ್ತೇನೆ ಎಂದಿದ್ದರು. ನಿನ್ನೆ ಸುದೀಪ್ ಗೆ ಬಿಗ್ ಬಾಸ್ ರಿಯಾಲಿಟಿ ಶೋ ಶೂಟಿಂಗ್ ಇತ್ತು. ಸತತ ಮೂರು ದಿನಗಳಿಂದ ನಡೆಯುತ್ತಿರುವ ಐಟಿ ಅಧಿಕಾರಿಗಳ ತಪಾಸಣೆಯಿಂದಾಗಿ ಅದು ಸಾಧ್ಯವಾಗಲಿಲ್ಲ. ಅದಾಗಲೇ ಕಿಚ್ಚ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದರಂತೆ. ತಮಗೆ ಶೂಟಿಂಗ್ ಇರುವುದಾಗಿ, ತಾವು ತಪಾಸಣೆಯನ್ನು ಬೇಗ ಮುಗಿಸುವುದಾಗಿ ಕೇಳಿಕೊಂಡಿದ್ದರೆನ್ನಲಾಗಿದೆ.

ಸತತ ಎರಡು ದಿನಗಳ ಐಟಿ ಪರಿಶೋಧದ ಬಳಿಕ ಕಿಚ್ಚ ಸುದೀಪ್ ಈಗ ಬಿಗ್ ಬಾಸ್ ಶೂಟಿಂಗ್ ಗೆ ತೆರಳಿದ್ದಾರೆ.ಸುದೀಪ್ ಇಂದು ಬೆಳ್ಳಂಬೆಳಗ್ಗೆ 5.30ಕ್ಕೆ ಬಿಗ್ ಬಾಸ್ ಶೂಟಿಂಗ್ ಸ್ಪಾಟ್ ಗೆ ತೆರಳಿದ್ದಾರೆ. ಸುದೀಪ್ ಮನೆಯಲ್ಲಿ ಕೊಂಚ ರೆಸ್ಟ್ ಮಾಡಿ ನಂತರ ಬಿಗ್ ಬಾಸ್ ರೀಡಿಂಗ್ ತೆಗೆದುಕೊಳ್ಳುತ್ತಿದ್ದಾರೆ. ಕೆಲವೇ ಗಂಟೆಗಳಲ್ಲಿ ಬಿಗ್ ಬಾಸ್ ಶೂಟಿಂಗ್ ಆರಂಭವಾಗಲಿದೆ. ಆದರೆ ಸುದೀಪ್ ನಿವಾಸದ ಐಟಿ ರೈಡ್ ನಿಂದಾಗಿ ಸೋಶಿಯಲ್ ಮಿಡಿಯಾದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋನ ವಾರದ ಎಪಿಸೋಡ್ ಬಗ್ಗೆ ನ್ಯೂಸ್’ವೊಂದು ಹರಿದಾಡಿತ್ತು. ಪ್ರತೀ ವಾರ ಪ್ರಸಾರವಾಗುವ ವಾರದ ಕಥೆ ಕಿಚ್ಚನ ಜೊತೆ ಈ ವಾರ ಟೆಲಿಕಾಸ್ಟ್ ಆಗುವುದಿಲ್ಲವೆಂದು. ಸದ್ಯ ಅದಕ್ಕೆ ಬ್ರೇಕ್ ಬಿದ್ದಿದೆ. ಸುದೀಪ್ ಶೂಟಿಂಗ್ ಗೆ ಮರಳಿದ್ದಾರೆ. ಶನಿವಾರ ಬಿಗ್‍ಬಾಸ್ ಶೂಟಿಂಗ್ ಇದೆ.

ನಾನು ಹೋಗಲೇಬೇಕು, ಇಲ್ಲದಿದ್ದಲ್ಲಿ `ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಗೆ ಅಡ್ಡಿಯಾಗುತ್ತದೆ. ಸಂಜೆಯೊಳಗೆ ಪರಿಶೀಲನೆ ಮಾಡಿ ಮುಗಿಸುವಂತೆ ಶುಕ್ರವಾರವೇ ಸುದೀಪ್ ಮನವಿ ಮಾಡಿಕೊಂಡಿದ್ದರು ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿತ್ತು.ಪ್ರತಿ ಶನಿವಾರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆ ಟೆಲಿಕಾಸ್ಟ್ ಆಗುತ್ತದೆ. ಹೀಗಾಗಿ ಪರಿಶೀಲನೆಯನ್ನು ಬೇಗ ಮುಗಿಸುವಂತೆ ಅಧಿಕಾರಿಗಳ ಬಳಿ ಸುದೀಪ್ ಮನವಿ ಮಾಡಿಕೊಂಡಿದ್ದಾರೆ. 

Edited By

Kavya shree

Reported By

Kavya shree

Comments