ಶ್ರೀಮಂತ ಅನಿಲ್ ಅಂಬಾನಿಗೆ ಎದುರಾಯ್ತಾ ಬಂಧನದ ಭೀತಿ...!!!

05 Jan 2019 10:13 AM | General
406 Report

ದೇಶದ ಅತೀದೊಡ್ಡ ಶ್ರೀಮಂತ ಅನಿಲ್ ಅಂಬಾನಿಗೆ ಬಂಧನದ ಭೀತಿ ಕಾಡುತ್ತಿದೆ. ಅವರ ನೇತೃತ್ವದಲ್ಲಿ ರಿಲಯನ್ಸ್ ಕಮ್ಯುನಿಕೇಶನ್ 550 ಕೋಟಿ ರೂಪಾಯಿ ಬಾಕಿಯನ್ನು ಎರಿಕ್ಷನ್ ಕಂಪನಿಗೆ ಪಾವತಿಸಬೇಕಾಯ್ತು. ಈಗಾಗಲೇ ಕೊಟ್ಟಿರುವ ಗಡುವನ್ನು ಮೀರಿದ್ದರೂ ಹಣ ಹಿಂದುರಿಗಸಲು ಮೀನಾ ಮೇಷ ಎಣಿಸುತ್ತಿದ್ದಾರೆ ಅನಿಲ್ ಅಂಬಾನಿ ಅವರು ಎನ್ನುವವಆರೋಪ ಇದೆ. ಬಾಕಿಯನ್ನು  ಪಾವತಿಸಲು ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಂಪನಿಯ ಮುಖ್ಯಸ್ಥ ಅನಿಲ್ ಅಂಬಾನಿ ಬಂಧನಕ್ಕೆ ಆದೇಶಿಸಬೇಕು ಎಂದು ಕೋರಿ ಸ್ವೀಡನ್ ದೂರಸಂಪರ್ಕ ಸಾಧನಗಳ ಕಂಪನಿ ಎರಿಕ್ಸನ್ ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಿದೆ.ಈ ವಿವಾದಾತ್ಮಕ ಉದ್ಯಮಿ ಸುಪ್ರೀಂಕೋರ್ಟ್ ತೀರ್ಪನ್ನು ಉದ್ದೇಶಪೂರ್ವಕವಾಗಿ ಧಿಕ್ಕರಿಸಿದ್ದಾರೆ ಎಂದು ಕಂಪನಿ ಆಪಾದಿಸಿದೆ. ಆರ್‌ಕಾಮ್ ವಿರುದ್ಧ ದಿವಾಳಿ ಪ್ರಕ್ರಿಯೆ ಆರಂಭಿಸಬೇಕು.

ಹಾಗೂ ಕಂಪನಿ ತನ್ನ ಸ್ಪೆಕ್ಟ್ರಂ ಹಾಗೂ ಟವರ್‌ಗಳನ್ನು ರಿಯಲಯನ್ಸ್ ಜಿಯೊಗೆ ಮಾರಾಟ ಮಾಡುವ ಪ್ರಸ್ತಾವವನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಅನಿಲ್ ಅಂಬಾನಿ ಹಾಗೂ ಅವರ ಕಂಪನಿ ನಿರಂತರ ಹಾಗೂ ಉದ್ದೇಶಪೂರ್ವಕವಾಗಿ ಬಾಕಿ ಪಾವತಿಯನ್ನು ವಿಳಂಬ ಮಾಡಿದೆ. ಪ್ರತಿವಾದಿಗಳು ಕಾನೂನು ಪ್ರಕ್ರಿಯೆಯನ್ನು ಧಿಕ್ಕರಿಸಿದ್ದು, ನ್ಯಾಯ ಹಿತಾಸಕ್ತಿಗೆ ಧಕ್ಕೆ ತಂದಿದ್ದಾರೆ. ಅನಿಲ್ ಅಂಬಾನಿಯನ್ನು ಜೈಲಿನಲ್ಲಿರಬೇಕು. ಅಲ್ಲದೇ ದಂಡ ಕಟ್ಟಬೇಕು ಅಂತಿದ್ದಾರೆ. ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ನಡೆದ ವ್ಯಾಜ್ಯ ವಿಲೇವಾರಿ ಪ್ರಕ್ರಿಯೆಯಲ್ಲಿ ಅನಿಲ್ ಅಂಬಾನಿ ಸಮೂಹ ಪಾವತಿಸಬೇಕಾದ 1600 ಕೋಟಿ ರೂಪಾಯಿ ಬಾಕಿಯನ್ನು ಈಗಾಗಲೇ 550 ಕೋಟಿ ರೂಪಾಯಿಗೆ ಇಳಿಸಲಾಗಿದೆ. ಇದನ್ನು ಕಳೆದ ಸೆಪ್ಟೆಂಬರ್ 30ರ ಒಳಗಾಗಿ ಪಾವತಿಸುವುದಾಗಿ ಆರ್‌ಕಾಂ ಭರವಸೆ ನೀಡಿತ್ತು. ಆದರೆ 45 ಸಾವಿರ ಕೋಟಿ ರೂಪಾಯಿ ಸಾಲದ ಹೊರೆಯಿಂದ ಕಂಗೆಟ್ಟಿರುವ ಆರ್‌ಕಾಂ ಇದುವರೆಗೆ ಈ ಮೊತ್ತವನ್ನು ಪಾವತಿಸಿಲ್ಲ. ಸಹೋದರ ಮುಖೇಶ್ ಅಂಬಾನಿ ನೇತೃತ್ವದ ಕಂಪನಿ   ಜತೆ ಒಪ್ಪಂದ ಮಾಡಿಕೊಂಡು ಫೈಬರ್ ಮತ್ತು ಎಂಎನ್‌ಸಿ ವ್ಯವಸ್ಥೆ ಮಾರಾಟದಿಂದ 5000 ಕೋಟಿ ರೂಪಾಯಿಯನ್ನು ಈಗಾಗಲೇ ಸ್ವೀಕರಿಸಲಾಗಿದೆ. ಆದರೆ ಸ್ಪೆಕ್ಟ್ರಂ ಹಾಗೂ ಟವರ್ ಮಾರಾಟದಿಂದ 15 ಸಾವಿರ ಕೋಟಿ ರೂಪಾಯಿ ಆದಾಯದ ನಿರೀಕ್ಷೆಯಲ್ಲಿ ಕಂಪನಿ ಇದೆ.

 

Edited By

Kavya shree

Reported By

Kavya shree

Comments