ಜನಸಾಮಾನ್ಯರೇ...KSRTC ಹತ್ತುವ ಮುನ್ನಒಮ್ಮೆ ಯೋಚಿಸಿ...!!!

05 Jan 2019 9:43 AM | General
285 Report

ಕೇಂದ್ರದಲ್ಲಿ ಮೋದಿ ಸರ್ಕಾರ, ರಾಜ್ಯದಲ್ಲಿ ದೋಸ್ತಿ ಸರ್ಕಾರ.  ಜನರಿಗೆ ಗೊಂದಲ.ಒಂದು ಕಡೆ ಚುನಾವಣೆ ವೇಳೆ ಮಹಾಪೂರ ಭರವಸೆಗಳನ್ನು ಕೊಡುವ ನಾಯಕರು ಗೆದ್ದ ನಂತರ ಕೈ ತೊಳೆದುಕೊಂಡು ಸುಮ್ಮನಾಗುತ್ತಾರೆ. ಇದೀಗ ರಾಜ್ಯದಲ್ಲಿ ಜನಸಾಮಾನ್ಯರಿಗೆ ಮತ್ತೊಂದು ಶಾಕ್  ಕಾದಿದೆ. ಕೆಎಸ್ಆರ್’ಟಿಸಿ ಬಸ್ ಹತ್ತುವ ಮುನ್ನ ಯೋಚಿಸಬೇಕಾಗುತ್ತದೆ. ಕಾರಣವಿಷ್ಟೆ. ಕೇಂದ್ರದಲ್ಲಿ  ಇಂಧನ ಮೇಲಿನ ತೆರಿಗೆ ಏರಿಕೆ ಬೆನ್ನಲ್ಲೇ ರಾಜ್ಯದ ಜನರಿಗೆ ಕೆಎಸ್​ಆರ್​ಟಿಸಿ ಬಸ್ ಪ್ರಯಾಣ ಶುಲ್ಕ ಹೆಚ್ಚಳವಾಗುವ ಆತಂಕ ಎದುರಾಗಿದೆ.ಈಗಾಗಲೇ ಸಾರಿಗೆ ಇಲಾಖೆ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯ ಬಸ್​ಗಳ ಪ್ರಯಾಣ ದರವನ್ನು ಶೇ.14ರಿಂದ 18ರವರೆಗೆ ಹೆಚ್ಚಿಸುವ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದೆ. ಪ್ರಯಾಣದರ ಹೆಚ್ಚಳಕ್ಕೆ ಸಮ್ಮತಿ ನೀಡುವಂತೆ ಹಣಕಾಸು ಇಲಾಖೆ ಸಿಎಂ ಕುಮಾರಸ್ವಾಮಿಗೆ ಸಲಹೆ ನೀಡಿದೆ ಎನ್ನಲಾಗಿದೆ.

ಈ ಹಿಂದೆ ದರ ಏರಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಿಎಂ ಕುಮಾರಸ್ವಾಮಿ ಕೂಡ ಸಾರಿಗೆ ಇಲಾಖೆ ಪ್ರಸ್ತಾಪ ತಿರಸ್ಕರಿಸಿದ್ದರು. ಇದೇ ವೇಳೆ ರಾಜ್ಯದ ಐದು ಕ್ಷೇತ್ರಗಳಲ್ಲಿ ಉಪ ಚುನಾವಣೆ ಘೋಷಣೆಯಾಗಿದ್ದರಿಂದ ದರ ಏರಿಕೆ ಪ್ರಸ್ತಾಪ ನನೆಗುದಿಗೆ ಬಿದ್ದಿತ್ತು.  ಈಗ ಮತ್ತೆ ಕುಮಾರಸ್ವಾಮಿಯವರು ಸಾರಿಗೆ ಇಲಾಖೆ ಸಭೆ ಬಳಿಕ ಒಂದು ನಿರ್ಧಾರ ಮಾಡಿದ್ದಾರೆ.  ಈಗ ಸರ್ಕಾರ ತೆರಿಗೆ ಕಡಿತ ವಾಪಸ್ ಪಡೆದ ಹಿನ್ನೆಲೆಯಲ್ಲಿ ಕೆಎಸ್​ಆರ್​ಟಿಸಿ ಮೇಲೆ ಹೊರೆ ಬೀಳಲಿದ್ದು, ಪ್ರಯಾಣ ಶುಲ್ಕ ಹೆಚ್ಚಳ ಅನಿವಾರ್ಯ ಎನ್ನಲಾಗುತ್ತಿದೆ. ಇದರಿಂದ ಸಾಮನ್ಯರಿಗೆ ಪ್ರಯಾಣ ಶುಲ್ಕ ಹೊರೆಯಾಗಲಿದ್ದು ರಾಜ್ಯ ಸರ್ಕಾರ, ಗಾಯದ ಮೇಲೆ ಬರೆ ಎಳೆಯಲಾಗುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.ಏನೇ ಇರಲಿ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೇ ಈ ರೀತಿ ಸರ್ಕಾರದ ನಿರ್ಧಾರಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರೋದಂತೂ ನಿಜ.

Edited By

Kavya shree

Reported By

Kavya shree

Comments