ಸ್ಪಾ ಅಂಡ್ ಸೆಲೂನ್ ಆಯ್ತು ವೇಶ್ಯಾವಾಟಿಕೆಯ ಅಡ್ಡ..!! ಮುಂದೇನಾಯ್ತು..?

05 Jan 2019 9:41 AM | General
147 Report

ಹೆಣ್ಣು ಮಕ್ಕಳಿಗೆ ಫ್ಯಾಷನ್ ಅಂದರೆ ತುಂಬಾನೇ ಇಷ್ಟ.. ಅದರಲ್ಲೂ ಬ್ಯೂಟಿ ಬಗ್ಗೆ ಸಿಕ್ಕಾಪಟ್ಟೆ ಕಾಳಜಿಯನ್ನು ವಹಿಸುತ್ತಾರೆ..ಆ ಕ್ರೀಮ್ ಈ ಕ್ರೀಮ್ ಅಂತ ಬಳಸುತ್ತಾನೆ ಇರುತ್ತಾರೆ. ಆದರೆ ಕೆಲವರು ಸ್ಪಾ ಮತ್ತು ಸಲೂನ್ ಮೊರೆ ಹೋಗ್ತಾರೆ.. ಹೆಣ್ಣು ಮಕ್ಕಳ ಅಂದ ಚಂದವನ್ನು ಹೆಚ್ಚಿಸುವುದರಲ್ಲಿ ಸ್ಪಾಗಳು ಪ್ರಮುಖ  ಪಾತ್ರವನ್ನು ವಹಿಸುತ್ತವೆ.. ಆದರೆ ಸ್ಪಾ ಮ್ತ್ತು ಸೆಲೂನ್ ಹೆಸರನ್ನು ಬಳಸಿಕೊಂಡು ಕೆಲವರು ವೇಶ್ಯಾವಾಟಿಕೆಯನ್ನು ನಡೆಸುತ್ತಿರುತ್ತಾರೆ. ಇದೀಗ ಈ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸ್ಪಾ ಮತ್ತು ಸೆಲೂನ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಗಾಲ್ಯಾಂಡ್ ನ ಮಹಿಳೆಯೊಬ್ಬಳನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಕ್ಯಾಟಿ ರೂಡಿ  ಎಂಬ ಮಹಿಳೆಯನ್ನು ಬಂಧಿಸಲಾಗಿದೆ, ಈಕೆ ತಿಲಕ್ ‌ ನಗರದ ಪೊಲೀಸ್ ‌ ಠಾಣೆ ವ್ಯಾಪ್ತಿಯ ಮಾರೇನಹಳ್ಳಿಯಲ್ಲಿ ' ವಂಡರ್ಸ್ ‌ ಸ್ಪಾ ಆಯಂಡ್ ‌ ಸಲೂನ್ ‌' ನಲ್ಲಿ ವೇಶ್ಯಾವಾಟಿಕೆ ನಡೆ ಸುತ್ತಿದ್ದಳು. ಹೊರ ರಾಜ್ಯದ ಯುವತಿಯರನ್ನು ನಗರಕ್ಕೆ ಕರೆತರುತ್ತಿದ್ದ ಮಹಿಳೆ ಹೆಚ್ಚು ದುಡ್ಡು ಮಾಡುವ ಆಸೆ ತೋರಿಸಿ ವೇಶ್ಯಾವಾಟಿಕೆಗೆ ಇಳಿಸುತ್ತಿದ್ದಳು ಎಂಬುದು ತಿಳಿದುಬಂದಿದೆ. ಈ ಬಗ್ಗೆ ನಿಖರ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಮಹಿಳೆಯನ್ನು ಬಂಧಿಸಿ ಮೂವರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.  ಹಾಗೇ ಮಹಿಳೆಯಿಂದ ಹಣ ಹಾಗೂ ಮೊಬೈಲ್ ‌ ವಶಪಡಿಸಿಕೊಳ್ಳಲಾಗಿದೆ . ಆದರೆ ದಾಳಿಯ ವೇಳೆ ಆಕೆಯ ಸಹಚರ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ. ಇತ್ತಿಚಿಗೆ ಹಣದ ಆಸೆಗಾಗಿ ಈ ರೀತಿಯ ಘಟನೆಗಳು ನಗರದಲ್ಲಿ ಹೆಚ್ಚಾಗಿ ನಡೆಯುತ್ತಿವೆ ಎನ್ನಬಹುದು.

Edited By

Manjula M

Reported By

Manjula M

Comments