Idea ಮತ್ತು BSNL ಕಂಪನಿಗಳಿಗೆ ಸರ್ಕಾರದಿಂದ ಭಾರೀ ಮೊತ್ತದ ದಂಡ...!!!

04 Jan 2019 6:00 PM | General
395 Report

ಕೇಂದ್ರ ಸರಕಾರ ಸಿಮ್ ಕಂಪನಿಗಳಿಗೆ ದಂಡ ಹಾಕಿದೆ. ಗ್ರಾಹಕರನ್ನು ಸೆಳೆಯಲು ಕೆಲ ಸಿಮ್ ಕಂಪನಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ.  ಕೆಲ ಪ್ಲ್ಯಾನಿಂಗ್ ಕೊಡುವುದಾಗಿ ಹೇಳಿ ಸೇವೆ ಆರಂಭಿಸುತ್ತವೆ. ಆದರೆ ಕೇಂದ್ರ ಸರ್ಕಾರ ಇದೀಗ ಎರಡು ಖ್ಯಾತ ಟೆಲಿಕಾಂ ಸೇವೆ ಪೂರೈಕೆದಾರರ ಸಂಸ್ಥೆಗಳಿಗೆ ಕಾಲ್ ಡ್ರಾಪ್’ಗಾಗಿ ಕಠಿಣ ಕ್ರಮ ವಿಧಿಸಿದೆ. ಅವುಗಳಿಗೆ  58 ಲಕ್ಷ ರೂ. ದಂಡ ವಿಧಿಸಿದೆ. ಐಡಿಯಾ ಮತ್ತು ಬಿಎಸ್ಎನ್ಎಲ್ ಟೆಲಿಕಾಂ ಸೇವೆ ಪೂರೈಕೆದಾರರಿಗೆ ಈ ಭಾರೀ ಮೊತ್ತದ ದಂಡ ವಿಧಿಸಿದೆ ಸರ್ಕಾರ.

ಕಳೆದ ಜೂನ್‌ ತ್ತೈಮಾಸಿಕದಲ್ಲಿ ಬಿಎಸ್‌ಎನ್‌ಎಲ್‌ಗೆ ನಾಲ್ಕು ಲಕ್ಷ ರೂ. ಕಾಲ್‌ ಡ್ರಾಪ್‌ ಡಂಡ ವಿಧಿಸಲಾಗಿದ್ದರೆ ಅದೇ ಅವಧಿಯಲ್ಲಿ ಐಡಿಯಾ ಸಂಸ್ಥೆಗೆ 12 ಲಕ್ಷ ರೂ. ದಂಡ ಹೇರಲಾಗಿದೆ ಎಂದು ಟೆಲಿಕಾಂ ಸಚಿವ ಮನೋಜ್‌ ಸಿನ್ಹಾ ಅವರಿಂದು ರಾಜ್ಯಸಭೆಗೆ ತಿಳಿಸಿದರು.ಕಾಲ್‌ ಡ್ರಾಪ್‌ ದಂಡ ವಿಧಿಸುವ ಕ್ರಮ ಆರಂಭಿಸಲಾದ ಬಳಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಅಂತೆಯೇ 2014ರಲ್ಲಿ 8 ಲಕ್ಷ ಇದ್ದ ಬಿಟಿಎಸ್‌ ಕೌಂಟ್‌ ಕಳೆದ ನಾಲ್ಕು ವರ್ಷಗಳಲ್ಲಿ 20 ಲಕ್ಷಕ್ಕೆ ಏರಿದೆ ಎಂದು ಸಚಿವ ಸಿನ್ಹಾ ತಿಳಿಸಿದರು.ಗ್ರಾಹಕರದ್ದು ಒಂದೇ ದೂರು. ಸರಿಯಾಗಿ ಕಾಲ್ ಕನೆಕ್ಟ್ ಆಗುತ್ತಿಲ್ಲ. ಸೇವೆ ಮಧ್ಯೆದಲ್ಲಿಯೇ  ಕಾಲ್ ಕಟ್ ಆಗುತ್ತಿರುತ್ತದೆ  ಎಂಬ ದೂರುಗಳ ನಡುವೆಯೇ ಸರ್ಕಾರ ಈ ಕಠಿಣ ಕ್ರಮ ಜರುಗಿಸಿದೆ.

Edited By

Kavya shree

Reported By

Kavya shree

Comments